ಮಂಗಳವಾರ, ಏಪ್ರಿಲ್ 29, 2025
HomeSportsCricketDavid Miller daughter : ಕ್ಯಾನ್ಸರ್’ಗೆ ಬಲಿಯಾದ ಡೇವಿಡ್ ಮಿಲ್ಲರ್ ಪುತ್ರಿ, ಭಾವನಾತ್ಮಕ ಸಂದೇಶ...

David Miller daughter : ಕ್ಯಾನ್ಸರ್’ಗೆ ಬಲಿಯಾದ ಡೇವಿಡ್ ಮಿಲ್ಲರ್ ಪುತ್ರಿ, ಭಾವನಾತ್ಮಕ ಸಂದೇಶ ಹಂಚಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

- Advertisement -

ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ದಾಂಡಿಗ ಡೇವಿಡ್ ಮಿಲ್ಲರ್ ಅವರ ಪುತ್ರಿ ಕ್ಯಾನ್ಸರ್’ಗೆ (David Miller daughter) ಬಲಿಯಾಗಿದ್ದಾರೆ. ಡೇವಿಡ್ ಮಿಲ್ಲರ್ ಸದ್ಯ ಭಾರತದಲ್ಲಿದ್ದು, ಟೀಮ್ ಇಂಡಿಯಾ ವಿರುದ್ಧ ಏಕದಿನ ಸರಣಿಯನ್ನಾಡುತ್ತಿದ್ದಾರೆ. ರಾಂಚಿಯಲ್ಲಿ ಭಾನುವಾರ ನಡೆಯಲಿರುವ 2ನೇ ಏಕದಿನ ಪಂದ್ಯಕ್ಕೆ ಶನಿವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಮಗಳ ಸಾವಿನ ಸುದ್ದಿ ಡೇವಿಡ್ ಮಿಲ್ಲರ್ ಅವರಿಗೆ ತಲುಪಿದೆ. ಸುದ್ದಿ ತಿಳಿಯುತ್ತಲೇ ತೀವ್ರ ಆಘಾತಕ್ಕೊಳಗಾದ ಡೇವಿಡ್ ಮಿಲ್ಲರ್ ಅವರನ್ನು ಸಹ ಆಟಗಾರರು ಸಂತೈಸಿದರು. ನಂತರ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ಮಿಲ್ಲರ್ ಮಗಳ ಸಾವಿನ ಬಗ್ಗೆ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.

‘’ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ ಮಗಳೇ. ನೀನು ನನಗೆ ಜೀವನದ ಪ್ರತೀ ಕ್ಷಣವನ್ನು ಆನಂದಿಸುವುದನ್ನು ಕಲಿಸಿ ಕೊಟ್ಟವಳು. ಲವ್ ಯು ಮಗಳೇ. RIP’’ ಎಂದು ಡೇವಿಡ್ ಮಿಲ್ಲರ್ ಇನ್’ಸ್ಟಾಗ್ರಾಂ ಸ್ಟೇಟಸ್’ನಲ್ಲಿ ಬರೆದುಕೊಂಡಿದ್ದಾರೆ. ಡೇವಿಡ್ ಮಿಲ್ಲರ್ ಅವರ ಪುತ್ರಿ ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್’ಗೆ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವಿಗೀಡಾಗಿದ್ದಾಳೆ.

ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಲ್ರೌಂಡರ್. ಭಾರತ ವಿರುದ್ದದ ಏಕದಿನ ಸರಣಿಯಲ್ಲಿ ಮಿಲ್ಲರ್ ಸ್ಪೋಟಕ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಮುನ್ನಡೆಯನ್ನು ಸಾಧಿಸಿದೆ. ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ 138 ಏಕದಿನ ಪಂದ್ಯಗಳನ್ನು ಆಡಿದ್ದು,3442 ರನ್ ಬಾರಿಸಿದ್ದಾರೆ. ಇನ್ನು 106 ಟಿ 20 ಪಂದ್ಯಗಳ ಮೂಲಕ 2069ರನ್ ಗಳಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಕಾಣಿಸಿಕೊಂಡಿರುವ ಮಿಲ್ಲರ್ ಒಟ್ಟು 105 ಐಪಿಎಲ್ ಪಂದ್ಯಗಳ ಮೂಲಕ 2455 ರನ್ ಬಾರಿಸಿದ್ದಾರೆ.

ಟಿ20 ವಿಶ್ವಕಪ್ ಕ್ಯಾಶ್ ಪ್ರೈಜ್ ₹45 ಕೋಟಿ, ಚಾಂಪಿಯನ್ಸ್‌ಗೆ ಸಿಗಲಿದೆ ₹13 ಕೋಟಿ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕಿನ್ನು 14 ದಿನಗಳಷ್ಟೇ ಬಾಕಿ. ಅಕ್ಟೋಬರ್ 16ರಂದು ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಪ್ರಧಾನ ಸುತ್ತಿನ ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ, ಕಳೆದ ಬಾರಿಯ ಫೈನಲಿಸ್ಟ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

(T20 World Cup 2022)ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ.

ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ತಂಡ ಒಟ್ಟು ₹13,05,35,440 ಕೋಟಿ ರೂಪಾಯಿಗಳನ್ನು ಪಡೆಯಲಿದೆ. ರನ್ನರ್ಸ್ ಅಪ್ ತಂಡಕ್ಕೆ ₹6,52,64,280 ರೂಪಾಯಿ ಸಿಗಲಿದೆ. ಸೆಮಿಫೈನಲಿಸ್ಟ್’ಗಳು ₹3,26,20,220 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರೆ. ಟೂರ್ನಿಯಲ್ಲಿ ಒಟ್ಟು ₹45,71,75,040 ಕೋಟಿ ರೂಪಾಯಿ ನಗದು ಬಹುಮಾನವನ್ನು ನಿಗದಿ ಪಡಿಸಲಾಗಿದೆ.

ಐಸಿಸಿ ಟಿ20 ವಿಶ್ವಕಪ್: ಬಹುಮಾನ ಮೊತ್ತ (Prize money announced for T20 World Cup 2022):

ಚಾಂಪಿಯನ್ಸ್: ₹13,05,35,440
ರನ್ನರ್ಸ್ ಅಪ್: ₹6,52,64,280
ಸೆಮಿಫೈನಲ್’ನಲ್ಲಿ ಸೋತವರು: ₹3,26,20,220
ಸೂಪರ್ 12 ಗೆಲುವು: ₹32,65,536 X 30
ಸೂಪರ್ 12 ಸೋತವರು: ₹57,14,688 X 8
ಮೊದಲ ಸುತ್ತಿನ ಗೆಲುವು: ₹32,65,536 X 12
ಮೊದಲ ಸುತ್ತಿನಲ್ಲಿ ಸೋತವರು: ₹32,65,536 X 4
ಐಸಿಸಿ ಟಿ20 ವಿಶ್ವಕಪ್: ಭಾರತದ ವೇಳಾಪಟ್ಟಿ (ಗ್ರೂಪ್-2):

Vs ಪಾಕಿಸ್ತಾನ: ಅಕ್ಟೋಬರ್ 23
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
Vs ಅರ್ಹತಾ ಸುತ್ತಿನ ತಂಡ: ಅಕ್ಟೋಬರ್ 27
ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ)
Vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 30
ಸ್ಥಳ: ಪರ್ತ್
ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ (ಭಾರತೀಯ ಕಾಲಮಾನ)
Vs ಬಾಂಗ್ಲಾದೇಶ: ನವೆಂಬರ್ 02
ಸ್ಥಳ: ಅಡಿಲೇಡ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
Vs ಅರ್ಹತಾ ಸುತ್ತಿನ ತಂಡ: ನವೆಂಬರ್ 06
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
ನೇರಪ್ರಸಾರ (Live Telecast): Stat Sports Network
ಲೈವ್ ಸ್ಟ್ರೀಮಿಂಗ್ (Live Streaming): Disney + Hotstar

ಇದನ್ನೂ ಓದಿ : Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

ಇದನ್ನೂ ಓದಿ ; India vs South Africa 1st ODI: ಪದಾರ್ಪಣೆಯ ಪಂದ್ಯದಲ್ಲೇ ಭಾರತವನ್ನು ಸೋಲಿಸಿದ ಧೋನಿ ಶಿಷ್ಯ

David Miller daughter does due to cancer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular