ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್’ಗೆ ಡೇವಿಡ್ ವಾರ್ನರ್ ನಾಯಕ

ನವದೆಹಲಿ : ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಈ ಬಾರಿಯ ಐಪಿಎಲ್ (IPL 2023) ಟೂರ್ನಿಯಲ್ಲಿ ಆಡುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ರೆ, ಐಪಿಎಲ್ ಟೂರ್ನಿಯಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ (David Warner Delhi Capitals Captain) ನಾಯಕತ್ವ ವಹಿಸಬೇಕಿತ್ತು. ಆದರೆ ಪಂತ್ ಐಪಿಎಲ್’ಗಷ್ಟೇ ಅಲ್ಲ, ಮುಂದಿನ 9ರಿಂದ 10 ತಿಂಗಳ ಕಾಲ ಕ್ರಿಕೆಟ್’ನಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ.

ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಫ್ರಾಂಚೈಸಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಆಸ್ಟ್ರೇಲಿಯಾ ತಂಡದ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ (David Warner) ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಪಟ್ಟ ಕಟ್ಟಲಾಗಿದೆ.

ಐಪಿಎಲ್’ನಲ್ಲಿ ಡೇವಿಡ್ ವಾರ್ನರ್ ಅನುಭವಿ ಹಾಗೂ ಯಶಸ್ವಿ ನಾಯಕ. 2016ರಲ್ಲಿ ಸನ್ ರೈಸರ್ಸ್ ಹೈದಾರಾಬಾದ್ ತಂಡ ಡೇವಿಡ್ ವಾರ್ನರ್ ಸಾರಥ್ಯದಲ್ಲೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತ್ತು. ಹೀಗಾಗಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ವಾರ್ನರ್ ಅವರನ್ನೇ ನಾಯಕನನ್ನಾಗಿ ನೇಮಕ ಮಾಡಲಾಗಿದೆ. 2022ರಲ್ಲಿ ಡೆಲ್ಲಿ ತಂಡದ ಉಪನಾಯಕನಾಗಿದ್ದ ಎಡಗೈ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಈ ಬಾರಿಯ ಟೂರ್ನಿಗೂ ವೈಸ್ ಕ್ಯಾಪ್ಟನ್ ಆಗಿ ಮುಂದುವರಿಸಲಾಗಿದೆ.

2009ರಿಂದ 2013ರವರೆಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದ ಡೇವಿಡ್ ವಾರ್ನರ್, 2014ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದರು. 2022ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಡೇವಿಡ್ ವಾರ್ನರ್ ಅವರನ್ನು ಬರೋಬ್ಬರಿ 6.25 ಕೋಟಿ ರೂ. ಮೊತಕ್ಕೆ ಖರೀದಿಸಿತ್ತು.

ಇದನ್ನೂ ಓದಿ : Pro Kabaddi League final: ಕನ್ನಡಿಗನ ತಂಡಕ್ಕೆ ಜೈಪುರ ಸವಾಲ್, ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Virat Kohli RCB : ಆರ್‌ಸಿಬಿ ಆಟಗಾರ್ತಿಯರಿಗೆ ವಿರಾಟ್ ಸ್ಪೆಷಲ್ ಕ್ಲಾಸ್, ರಾಯಲ್ ಚಾಲೆಂಜರ್ಸ್‌ಗೆ ಮೊದಲ ಜಯ ತಂದ ಕಿಂಗ್ ಕೊಹ್ಲಿ

ಇದನ್ನೂ ಓದಿ : Women’s Premier League : ಆರ್‌ಸಿಬಿಗೆ ಇಂದು ಮಾಡು ಇಲ್ಲ ಮಡಿ ಮಂದ್ಯ, ಮಂಧನ ಪಡೆಗೆ ಇನ್ನೂ ಇದೆ ಪ್ಲೇ ಆಫ್ ಚಾನ್ಸ್

ಐಪಿಎಲ್’ನಲ್ಲಿ ಒಟ್ಟು 69 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಡೇವಿಡ್ ವಾರ್ನರ್ 35 ಗೆಲುವು ಕಂಡಿದ್ರೆ, 32 ಸೋಲು ಕಂಡಿದ್ದಾರೆ. ವಾರ್ನರ್ ನಾಯಕತ್ವದಲ್ಲಿ ಎರಡು ಪಂದ್ಯಗಳು ಟೈಗೊಂಡಿವೆ. ಐಪಿಎಲ್’ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟು 162 ಪಂದ್ಯ ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್, 42ರ ಅಮೋಘ ಸರಾಸರಿಯಲ್ಲಿ 140.69ರ ಉತ್ತಮ ಸ್ಟ್ರೈಕ್’ರೇಟ್’ನಲ್ಲಿ 4 ಶತಕ ಹಾಗೂ 55 ಅರ್ಧಶತಕಗಳ ಸಹಿತ 5881 ರನ್ ಕಲೆ ಹಾಕಿದ್ದಾರೆ.

David Warner Delhi Capitals Captain: David Warner is the captain for Delhi Capitals in the absence of Rishabh Pant

Comments are closed.