Dehli Capitals : ಐಪಿಎಲ್‌ನಲ್ಲಿ ಇಂಗ್ಲೆಂಡ್ ಪರ ಆಡಲಿದ್ದಾರೆ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್

ದೆಹಲಿ : ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿ (IPL 2023) ಆರಂಭಕ್ಕಿನ್ನು ಎಂಟೇ ಎಂಟು ದಿನಗಳು ಬಾಕಿ. ಮಿಲಿಯನ್ ಡಾಲರ್ ಟೂರ್ನಿಗಾಗಿ ಈಗಾಗಲೇ 10 ತಂಡಗಳು ಸಿದ್ಧತೆ ಆರಂಭಿಸಿವೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ (Dehli Capitals – IPL 2023) ಪಾಲ್ಗೊಂಡಿದ್ದ ಟೀಮ್ ಇಂಡಿಯಾ ಆಟಗಾರರು ಇನ್ನೆರಡು ದಿನಗಳಲ್ಲಿ ತಮ್ಮ ತಮ್ಮ ತಂಡಗಳ ಐಪಿಎಲ್ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.

ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿರುವಂತೆ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಭಾರತದ ಪೃಥ್ವಿ ಶಾ, ಅಕ್ಷರ್ ಪಟೇಲ ಸಹಿತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಈ ಬಾರಿಯ ಐಪಿಎಲ್’ನಲ್ಲಿ ಇಂಗ್ಲೆಂಡ್ ತಂಡದ ಪರ ಆಡಲಿದ್ದಾರೆ. ಅರೆ.. ಇದೇನಿದು..? ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಇಂಗ್ಲೆಂಡ್ ಪರ ಆಡಲು ಹೇಗೆ ಸಾಧ್ಯ ಎಂದು ನೀವು ಯೋಚನೆ ಮಾಡುತ್ತಿರಬಹುದು. ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಈಗಾಗಲೇ ಕ್ಯಾಪಿಟಲ್ಸ್ ಪಡೆದ ನೂತನ ಜರ್ಸಿ ಬಿಡುಗಡೆಯಾಗಿದ್ದು, ನಾಯಕ ಡೇವಿಡ್ ವಾರ್ನರ್, ಉಪನಾಯಕ ಅಕ್ಷರ್ ಪಟೇಲ್ ಮತ್ತು ಪೃಥ್ವಿ ಶಾ ಹೊಸ ಜರ್ಸಿಯಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡುಗಡೆ ಮಾಡಿದೆ.

ಕೆಂಪು ಹಾಗೂ ನೀಲಿಮಿಶ್ರಿತ ಡೆಲ್ಲಿ ತಂಡದ ಹೊಸ ಜರ್ಸಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಜರ್ಸಿಯನ್ನು ಹೋಲುತ್ತಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಈ ಬಾರಿ ಇಂಗ್ಲೆಂಡ್ ಪರ ಆಡಲಿದ್ದಾರೆ ಎಂದು ಕ್ರಿಕಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡುತ್ತಿದ್ದಾರೆ.

ಐಪಿಎಲ್-16ನೇ ಆವೃತ್ತಿಯ ಟೂರ್ನಿ ಮಾರ್ಚ್ 31ರಂದು ಆರಂಭವಾಗಲಿದ್ದು, ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : IND v AUS 3rd ODI: ಹಾರ್ದಿಕ್‌ ಪಾಂಡ್ಯ ವಿರೋಚಿತ ಆಟ ವ್ಯರ್ಥ, ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಇದನ್ನೂ ಓದಿ : ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಭರ್ಜರಿ ಬೌಲಿಂಗ್‌ : ಭಾರತಕ್ಕೆ 270 ರನ್‌ ಸವಾಲು

ಇದನ್ನೂ ಓದಿ : ಬೆಂಗಳೂರಿಗೆ ಬಂದಿಳಿದ ರಣಬೇಟೆಗಾರ, ರಾಯಲ್ ಚಾಲೆಂಜರ್ಸ್ ಕ್ಯಾಂಪ್ ಸೇರಿದ ಕ್ಯಾಪ್ಟನ್ ಫಾಫ್

ಏಪ್ರಿಲ್ 1ರಂದು ಲಕ್ನೋದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Dehli Capitals – IPL 2023: David Warner of Australia, Prithvi Shah of India, Akshar Patel of Delhi Capitals team will play for the England team in this time’s IPL.

Comments are closed.