Dinesh Karthik Duckout : ಐಪಿಎಲ್‌ನಲ್ಲಿ ಅತೀ ಹೆಚ್ಚು ಡಕೌಟ್, ದಾಖಲೆ ಬರೆದ ಡಿಕೆ ಸಾಹೇಬ

ಬೆಂಗಳೂರು : ಕಳೆದ ಬಾರಿಯ ಐಪಿಎಲ್’ನಲ್ಲಿ ಆರ್’ಸಿಬಿಗೆ ಮ್ಯಾಚ್ ಫಿನಿಷರ್ ಆಗಿದ್ದ ಆಟಗಾರ. ಆರ್’ಸಿಬಿ ಪರ ಮಿಂಚಿ ಟೀಮ್ ಇಂಡಿಯಾಗೂ ಕಂಬ್ಯಾಕ್ ಮಾಡಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್. ಆದ್ರೆ ಈ ಬಾರಿಯ ಐಪಿಎಲ್’ನಲ್ಲಿ ಆತನದ್ದು ದಯನೀಯ ಆಟ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ (Dinesh Karthik Duckout) ಅವರ ಕತೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾಗಿದ್ದಾರೆ. ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಹೋದ ಡಿಕೆ, ಕೈ ಸುಟ್ಟುಕೊಂಡಿದ್ದಾರೆ. ಇದು ಈ ಬಾರಿಯ ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಗಳಿಸಿದ 2ನೇ ಡಕ್. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲೂ ಡಿಕೆ ಶೂನ್ಯಕ್ಕೆ ಔಟಾಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ರನ್ನಿಗೆ ಔಟಾಗಿದ್ದ ದಿನೇಶ್ ಕಾರ್ತಿಕ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಒಂದು ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಐಪಿಎಲ್-2023ರಲ್ಲಿ ದಿನೇಶ್ ಕಾರ್ತಿಕ್ ಸಾಧನೆ :
0 (3), 9 (8), 1* (1), 0 (1)

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶೂನ್ಯಕ್ಕೆ ಔಟಾಗುವ ಮೂಲಕ ದಿನೇಶ್ ಕಾರ್ತಿಕ್ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ (Most ducks in IPL) ಔಟಾದ ಆಟಗಾರನೆಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಐಪಿಎಲ್’ನಲ್ಲಿ ಇದುವರೆಗೆ 234 ಪಂದ್ಯಗಳನ್ನಾಡಿರುವ 38 ವರ್ಷದ ಕಾರ್ತಿಕ್ 15 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಐಪಿಎಲ್’ನಲ್ಲಿ ಅತೀ ಹೆಚ್ಚು ಡಕೌಟ್ (Most ducks in IPL)
ದಿನೇಶ್ ಕಾರ್ತಿಕ್: 15
ಮನ್’ದೀಪ್ ಸಿಂಗ್ : 15
ರೋಹಿತ್ ಶರ್ಮಾ: 14
ಸುನಿಲ್ ನರೈನ್: 14

ಕಳೆದ ಬಾರಿಯ ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸುತ್ತಿದ್ದಾಗ ಧೋನಿಗಿಂತಲೂ ದೊಡ್ಡ ಫಿನಿಷರ್ ಎಂದು ಆರ್’ಸಿಬಿಯ ಕೆಲ ಅಭಿಮಾನಿಗಳು ಬಿಲ್ಡಪ್ ಕೊಟ್ಟಿದ್ದರು. ಅದನ್ನು ನೆನಪಿಸಿ ಧೋನಿ ಅಭಿಮಾನಿಗಳು ಆರ್’ಸಿಬಿ ಅಭಿಮಾನಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ : BCCI Revenue Share : 10 ಸಾವಿರ ಕೋಟಿಯ ಮೆಗಾ ಡೀಲ್’ಗೆ ಬಿಸಿಸಿಐ ಮೆಗಾ ಪ್ಲಾನ್, ಹೇಗಿದೆ ಗೊತ್ತಾ ದೊಡ್ಡಣ್ಣನ ಮಾಸ್ಟರ್ ಪ್ಲಾನ್?

ಇದನ್ನೂ ಓದಿ : Chris Gayle Appu Boss : ಜಗತ್ತಿಗೆ ಇಬ್ಬರೇ ಬಾಸ್, ಒಬ್ಬ ಯೂನಿವರ್ಸ್ ಬಾಸ್, ಮತ್ತೊಬ್ಬ “ಅಪ್ಪು” ಬಾಸ್ ಅಂದ ಕ್ರಿಸ್ ಗೇಲ್

ಈ ಬಾರಿಯ ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಆಡಿರುವ 4 ಪಂದ್ಯಗಳಲ್ಲಿ ಕೇವಲ 10 ರನ್ ಗಳಿಸಿದ್ರೆ, ಸಿಡಿಲಬ್ಬರದ ಆಟವಾಡುತ್ತಿರುವ ಧೋನಿ 27 ಎಸೆತಗಳಲ್ಲಿ ಆರು ಸಿಕ್ಸರ್’ಗಳ ಸಹಿತ 58 ರನ್ ಗಳಿಸಿ ಆರ್ಭಟಿಸಿದ್ದಾರೆ.

Dinesh Karthik Duckout : DK Saheb who made the record for most duckout in IPL

Comments are closed.