Vyshak Vijaykumar : ಆರ್‌ಸಿಬಿ ಪರ ಪಾದಾರ್ಪಣೆಯ ಪಂದ್ಯದಲ್ಲಿ ಕನ್ನಡಿಗನ ಬೆಂಕಿ ಬೌಲಿಂಗ್, ಯಾರು ಈ ವೈಶಾಖ್..?

ಬೆಂಗಳೂರು: ಸತತ ಎರಡು ಸೋಲುಗಳಿಂದ ಬಳಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್-2023 (IPL 2023) ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್’ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್’ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ 2ನೇ ಜಯ ಸಂಪಾದಿಸಿದೆ. ಕನ್ನಡಿಗ ವೈಶಾಖ್ ವಿಜಯ್ ಕುಮಾರ್ (Vyshak Vijaykumar). ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿಯೇ ಅದ್ಬುತ ಫರ್ಪಾಮೆನ್ಸ್‌ ತೋರಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿದ್ರೆ, ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ 151 ರನ್ ಗಳಿಸಲಷ್ಟ ಶಕ್ತವಾಗಿ ಸತತ 5ನೇ ಸೋಲು ಕಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕಾರಣವಾಗಿದ್ದು ಕರ್ನಾಟಕ ಯುವ ಬಲಗೈ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್ (Vyshak Vijaykumar). ಐಪಿಎಲ್’ಗೆ ಪದಾರ್ಪಣೆ ಮಾಡಿದ ವೈಶಾಖ್ 4 ಓವರ್’ಗಳಲ್ಲಿ 20 ರನ್ನಿತ್ತು 3 ವಿಕೆಟ್ ಪಡೆದರು. ತಮ್ಮ ಮೊದಲ ಓವರ್’ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಡೇವಿಡ್ ವಾರ್ನರ್ ವಿಕೆಟ್ ಪಡೆದ ವೈಶಾಖ್, ನಂತರ ಅಪಾಯಕಾರಿ ದಾಂಡಿಗ ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ವಿಕೆಟ್ ಕಬಳಿಸಿದರು. ತಮ್ಮ ಈ ಮ್ಯಾಚ್ ವಿನ್ನಿಂಗ್ ಸಾಧನೆಗಾಗಿ ವೈಶಾಖ್ ವಿಜಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ವಿಂಗ್ ಬೌಲಿಂಗ್’ಗೆ ಹೆಸರುವಾಸಿಯಾಗಿರುವ 26 ವರ್ಷದ ವೈಶಾಖ್ ಕರ್ನಾಟಕ ತಂಡದ ಯುವ ವೇಗದ ಬೌಲರ್. ಆರ್.ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್ ನಿವೃತ್ತಿಯ ನಂತರ ಕರ್ನಾಟಕ ತಂಡದ ಬೌಲಿಂಗ್ ಪಡೆಗೆ ಬಲ ತುಂಬಿರುವ ಬೌಲರ್. ಕರ್ನಾಟಕ ಪರ ಈಗಾಗಲೇ 10 ರಣಜಿ ಪಂದ್ಯಗಳನ್ನಾಡಿರುವ ವೈಶಾಖ್ ವಿಜಯ್ ಕುಮಾರ್ 38 ವಿಕೆಟ್’ ಗಳನ್ನು ಪಡೆದಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಿಂದ 11 ವಿಕೆಟ್ ಹಾಗೂ 14 ಟಿ20 ಪಂದ್ಯಗಳಿಂದ 22 ವಿಕೆಟ್ ಪಡೆದು ಭರವಸೆ ಮೂಡಿಸಿದ್ದಾರೆ. ಇದನ್ನೂ ಓದಿ : Chris Gayle Appu Boss : ಜಗತ್ತಿಗೆ ಇಬ್ಬರೇ ಬಾಸ್, ಒಬ್ಬ ಯೂನಿವರ್ಸ್ ಬಾಸ್, ಮತ್ತೊಬ್ಬ “ಅಪ್ಪು” ಬಾಸ್ ಅಂದ ಕ್ರಿಸ್ ಗೇಲ್

ಆರ್’ಸಿಬಿ ಬ್ಯಾಟ್ಸ್’ಮನ್ ರಜತ್ ಪಾಟಿದಾರ್ ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದ ಕಾರಣ ಅವರಿಗೆ ಬದಲಿ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡಿದ್ದ ವೈಶಾಖ್, ಆಡಿದ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇದನ್ನೂ ಓದಿ : Dinesh Karthik Duckout : ಐಪಿಎಲ್‌ನಲ್ಲಿ ಅತೀ ಹೆಚ್ಚು ಡಕೌಟ್, ದಾಖಲೆ ಬರೆದ ಡಿಕೆ ಸಾಹೇಬ

Comments are closed.