Double century in VH Trophy: ಸಿಡಿಲಬ್ಬರದ ದ್ವಿಶತಕ ಬಾರಿಸಿದ ಸೌರಷ್ಟ್ರ ಆಟಗಾರ ಸಮರ್ಥ್ ವ್ಯಾಸ್

ದೆಹಲಿ: (Double century in VH Trophy) ಸೌರಾಷ್ಟ್ರ ತಂಡದ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಸಮರ್ಥ್ ವ್ಯಾಸ್ (Samarth Vyas) ವಿಜಯ್ ಹಜಾರೆ ಟ್ರೋಫಿ Vijay Hazare Trophy ODI tournament) ಏಕದಿನ ಟೂರ್ನಿಯಲ್ಲಿ ಸಿಡಿಲಬ್ಬರದ ದ್ವಿಶತಕ ಸಿಡಿಸಿದ್ದಾರೆ. ಮಣಿಪುರ ವಿರುದ್ಧ ದೆಹಲಿಯ ಜಾಮಿಯಾ ಮಿಲಿಯಾ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿದ 26 ವರ್ಷದ ಸಮರ್ಥ್ ವ್ಯಾಸ್ 131 ಎಸೆತಗಳಲ್ಲಿ ಭರ್ಜರಿ 200 ರನ್ ಸಿಡಿಸಿದರು. ಈ ದ್ವಿಶತಕದ ಇನ್ನಿಂಗ್ಸ್’ನಲ್ಲಿ ಒಟ್ಟು 20 ಬೌಂಡರಿಗಳು ಮತ್ತು 9 ಸಿಕ್ಸರ್’ಗಳಿದ್ದವರು. ಬೌಂಡರಿ-ಸಿಕ್ಸರ್’ಗಳಿಂದಲೇ ಸಮರ್ಥ್ 134 ರನ್ ಸಿಡಿಸಿದ್ದು ವಿಶೇಷ.

ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ಐದನೇ ಆಟಗಾರನೆಂಬ ಹಿರಿಮೆಗೆ ಸಮರ್ಥ್ ವ್ಯಾಸ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಉತ್ತರಾಖಂಡ್’ನ ಕರ್ಣ್ ವೀರ್ ಕೌಶಲ್, ಕೇರಳದ ಸಂಜು ಸ್ಯಾಮ್ಸನ್, ಮುಂಬೈನ ಯಶಸ್ವಿ ಜೈಸ್ವಾಲ್, ಮುಂಬೈನ ಮತ್ತೊಬ್ಬ ಸ್ಫೋಟಕ ದಾಂಡಿಗ ಪೃಥ್ವಿ ಶಾ, ವಿಜಯ್ ಹಜಾರೆ ಟ್ರೋಫಿಯಲ್ಲಿ ಇದುವರೆಗೆ ದ್ವಿಶತಕದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : Ben Stokes : ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು, ಯಾರ ಪಾಲಾಗ್ತಾರೆ ಇಂಗ್ಲೆಂಡ್ ಆಲ್ರೌಂಡರ್?

ಇದನ್ನೂ ಓದಿ : IPL Mini Auction : ಐಪಿಎಲ್-2023ರಿಂದ ಪ್ಯಾಟ್ ಕಮಿನ್ಸ್ ಔಟ್, ಕೇನ್ ವಿಲಿಯಮ್ಸನ್ ಮೇಲೆ CSK ಕಣ್ಣು

ಸಮರ್ಥ್ ವ್ಯಾಸ್ ಅವರ ದ್ವಿಶತಕದ ಬಲದಿಂದ ಸೌರಾಷ್ಟ್ರ ತಂಡ ನಿಗದಿತ 50 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಮಣಿಪುರ 41.4 ಓವರ್’ಗಳಲ್ಲಿ ಕೇವಲ 115 ರನ್’ಗಳಿಗೆ ಆಲೌಟಾಗಿ 282 ರನ್’ಗಳ ಹೀನಾಯ ಸೋಲು ಅನುಭವಿಸಿತು.

ವಿಜಯ್ ಹಜಾರೆ ಟ್ರೋಫಿ: ದ್ವಿಶತಕವೀರರು : (Double century in Vijay Hazare Trophy ODI)

  1. ಕರ್ಣ್ ವೀರ್ ಕೌಶಲ್ (ಉತ್ತರಾಖಂಡ್): 202 (135) Vs ಸಿಕ್ಕಿಂ, 2018
  2. ಸಂಜು ಸ್ಯಾಮ್ಸನ್ (ಕೇರಳ): 212* (129) Vs ಗೋವಾ, 2019
  3. ಯಶಸ್ವಿ ಜೈಸ್ವಾಲ್ (ಮುಂಬೈ ): 203 (154) Vs ಜಾರ್ಖಂಡ್, 2019
  4. ಪೃಥ್ವಿ ಶಾ (ಮುಂಬೈ): 227* (152) Vs ಪುದುಚೇರಿ, 2021
  5. ಸಮರ್ಥ್ ವ್ಯಾಸ್ (ಸೌರಾಷ್ಟ್ರ): 200 (134) Vs ಮಣಿಪುರ, 2022

Double century in VH Trophy : Saurashtra team’s right-handed opening batsman Samarth Vyas (Vijay Hazare Trophy Vijay Hazare Trophy ODI tournament) has blasted a thunderous double century in the one-day tournament.

Comments are closed.