Ellyse Perry : ರಾಯಲ್ ಚಾಲೆಂಜರ್ಸ್ ತಂಡ ಈ ಆಸೀಸ್ ಸ್ಟಾರ್ ಆಟಗಾರ್ತಿಯ ವಿಶೇಷ ಗುಣಕ್ಕೆ ನೀವು ಕ್ಲೀನ್ ಬೌಲ್ಡ್ ಆಗ್ತೀರಿ!

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (Women’s Premier League 2023) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (Women’s Premier League 2023) ಪರ ಆಡುತ್ತಿರುವ ಆಸ್ಟ್ರೇಲಿಯಾದ ಎಲೀಸ್ ಪೆರಿ (Ellyse Perry) ಮಹಿಳಾ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ್ತಿ.

ಆಸ್ಟ್ರೇಲಿಯಾ ಪರ ಒಟ್ಟು 8 ವಿಶ್ವಕಪ್’ಗಳನ್ನು ಗೆದ್ದಿರುವ 32 ವರ್ಷದ ಎಲೀಸ್ ಪೆರಿ ಮಹಿಳಾ ಕ್ರಿಕೆಟ್’ನ ಸ್ಟಾರ್ ಆಲ್ರೌಂಡರ್ ಕೂಡ ಹೌದು. ಕ್ರಿಕೆಟ್ ಜಗತ್ತಿನಲ್ಲಿ ಎಲೀಸ್ ಪೆರಿ ಅವರದ್ದು ದೊಡ್ಡ ಹೆಸರು. ಆದರೂ ಆಸೀಸ್’ನ ಈ ಆಟಗಾರ್ತಿಗೆ ಕೊಂಚವೂ ಅಹಂ ಆಗಲೀ, ಜಂಭವಾಗಲೀ ಇಲ್ಲ. ಇದಕ್ಕೆ ಸಾಕ್ಷಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಎಲೀಸ್ ಪೆರಿ ತೋರುತ್ತಿರುವ ನಡವಳಿಕೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಆಡಿದ 6 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಕಂಡಿದೆ. ಸತತ ಐದು ಸೋಲುಗಳ ನಂತರ ಬುಧವಾರ ನಡೆದ ಯು.ಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್’ಸಿಬಿ 5 ವಿಕೆಟ್’ಗಳ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನವಿತ್ತಿದ್ದ ಎಲೀಸ್ ಪೆರಿ 4 ಓವರ್’ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್’ನಲ್ಲಿ ಮಿಂಚಿದ್ದ ಪೆರಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ ಒಟ್ಟು 6 ಪಂದ್ಯಗಳಿಂದ 41ರ ಸರಾಸರಿಯಲ್ಲಿ 2 ಅರ್ಧಶತಕಗಳ ಸಹಿತ 205 ರನ್ ಕಲೆ ಹಾಕಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಎಲೀಸ್ ಪೆರಿ ಆಟದಿಂದಷ್ಟೇ ಅಲ್ಲದೆ, ತಮ್ಮ ವಿಸೇಷ ಗುಣದಿಂದಲೂ ಗಮನ ಸೆಳೆಯುತ್ತಿದ್ದಾರೆ.

ಸಾಮಾನ್ಯವಾಗಿ ಕ್ರಿಕೆಟ್ ತಾರೆಗಳು ಪಂದ್ಯ ಮುಗಿಯುತ್ತಲೇ ತಾವು ಕುಳಿತಿದ್ದ ಡಗೌಟ್’ನಿಂದ ಪೆವಿಲಿಯನ್’ಗೆ ಮರಳುತ್ತಾರೆ. ಅಲ್ಲಿ ತಾವು ಬಳಸಿದ್ದ ವಾಟರ್ ಬಾಟಲ್’ಗಳನ್ನು ಅಲ್ಲೇ ಬಿಡುವುದು ಸಾಮಾನ್ಯ. ಆದ್ರೆ ಎಲೀಸ್ ಪೆರಿ ಹಾಗಲ್ಲ. ತಾವು ಕುಳಿತಿದ್ದ ಜಾಗದಲ್ಲಿರುವ ವಾಟರ್ ಬಾಟಲ್’ಗಳನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಪ್ರತೀ ಪಂದ್ಯದ ಬಳಿಕ ಡಗೌಟ್ ಅನ್ನು ಕ್ಲೀನ್ ಮಾಡುತ್ತಾರೆ. ಎಲೀಸ್ ಪೆರಿ ಹೀಗೆ ಡಗೌಡ್ ಕ್ಲೀನ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ : Virat Kohli RCB : ಆರ್‌ಸಿಬಿ ಆಟಗಾರ್ತಿಯರಿಗೆ ವಿರಾಟ್ ಸ್ಪೆಷಲ್ ಕ್ಲಾಸ್, ರಾಯಲ್ ಚಾಲೆಂಜರ್ಸ್‌ಗೆ ಮೊದಲ ಜಯ ತಂದ ಕಿಂಗ್ ಕೊಹ್ಲಿ

ಇದನ್ನೂ ಓದಿ : Women’s Premier League : ಆರ್‌ಸಿಬಿಗೆ ಇಂದು ಮಾಡು ಇಲ್ಲ ಮಡಿ ಮಂದ್ಯ, ಮಂಧನ ಪಡೆಗೆ ಇನ್ನೂ ಇದೆ ಪ್ಲೇ ಆಫ್ ಚಾನ್ಸ್

ತಮ್ಮ ಈ ವಿಶೇಷ ಗುಣದ ಬಗ್ಗೆ ಪ್ರತಿಕ್ರಿಯಿಸಿರುವ ಎಲೀಸ್ ಪೆರಿ, “ನೀವು ಎಲ್ಲೇ ಆಡುತ್ತಿರಿ. ಆಟಕ್ಕೆ ನೀವು ಗೌರವ ಕೊಡಬೇಕು” ಎಂದಿದ್ದಾರೆ.

Ellyse Perry : Royal Challengers Team You will be clean bowled by the special quality of this Aussie star player!

Comments are closed.