England Cricket Team : ಪಾಕಿಸ್ತಾನಕ್ಕೆ ಅಡುಗೆ ಭಟ್ಟನನ್ನು ಕರೆದೊಯ್ಯಲಿದೆ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ಟೆಸ್ಟ್ ತಂಡ

ಲಂಡನ್ : ಭಯೋತ್ಪಾದನಾ ಪೀಡಿತ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿಗಳು ನಿಧಾನವಾಗಿ ಆರಂಭವಾಗುತ್ತಿವೆ. ಈ ವರ್ಷ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ (England Cricket Team) ಇಂಗ್ಲೆಂಡ್ ತಂಡ, ಪಾಕ್ ನೆಲದಲ್ಲಿ 7 ಪಂದ್ಯಗಳ ಟಿ20 ಸರಣಿಯನ್ನಾಡಿತ್ತು. ಆ ಸರಣಿಯನ್ನು ಇಂಗ್ಲೆಂಡ್ 4-3ರ ಅಂತರದಲ್ಲಿ ಗೆದ್ದುಕೊಂಡಿತ್ತು. ಪಾಕ್ ಪ್ರವಾಸದ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು.

ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡ ಇದೇ ವರ್ಷದಲ್ಲಿ 2ನೇ ಬಾರಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, (England tour of Pakistan) ಆತಿಥೇಯರ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಪಾಕ್ ಪ್ರವಾಸಕ್ಕೆ ತೆರಳಲಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಅಡುಗೆ ಭಟ್ಟನೊಬ್ಬನನ್ನು (personal team chef) ನೇಮಕ ಮಾಡಿಕೊಳ್ಳಲಾಗಿದೆ.

ಕಳೆದ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಇಂಗ್ಲೆಂಡ್ ಆಟಗಾರರಿಗೆ ನೀಡಲಾಗಿದ್ದ ಆಹಾರದ ಬಗ್ಗೆ ಭಾರೀ ವಿವಾದವೆದ್ದಿತ್ತು. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಇಂಗ್ಲೆಂಡ್ ಆಟಗಾರರು ಆರೋಪಿಸಿದ್ದರು. ಇಂಗ್ಲೆಂಡ್ ಆಲ್ರೌಂಡರ್ ಮೊಯೀನ್ ಅಲಿ ಈ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತಿದ್ದರು. ಹೀಗಾಗಿ ಈ ಬಾರಿ ಮೊದಲೇ ಎಚ್ಚೆತ್ತುಕೊಂಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ತಂಡದ ಜೊತೆ ಅಡುಗೆ ಭಟ್ಟನನ್ನು ಪಾಕಿಸ್ತಾನ ಪ್ರವಾಸಕ್ಕೆ ಕಳುಹಿಸಲು ನಿರ್ಧರಿಸಿದೆ.

ಇದನ್ನೂ ಓದಿ : Bengal Warriors vs Tamil Thalaivas : ಯು.ಪಿ ಯೋಧಾ ಅರ್ಧಶತಕ, ಬೆಂಗಾಲ್ ವಾರಿಯರ್ಸ್‌ಗೆ ಶಾಕ್ ಕೊಟ್ಟ ತಮಿಳ್ ತಲೈವಾಸ್

ಇದನ್ನೂ ಓದಿ : Vijay Hazare Trophy : ಕೌಶಿಕ್ ಭರ್ಜರಿ ಬೌಲಿಂಗ್, ಕರ್ನಾಟಕಕ್ಕೆ 5ನೇ ಜಯ; ನಾಕೌಟ್ ಹಂತದಲ್ಲಿ ಸ್ಥಾನ ಫಿಕ್ಸ್

2018ರ ಫಿಫಾ ವಿಶ್ವಕಪ್ ಮತ್ತು 2020ರ ಯುರೋ ಕಪ್ ವೇಳೆ ಇಂಗ್ಲೆಂಡ್ ಫುಟ್ಬಾಲ್ ತಂಡದ ಜೊತೆಗಿದ್ದ ಓಮರ್ ಮೆಜಿಯೆನ್ (Omar Meziane) ಪಾಕಿಸ್ತಾನ ಪ್ರವಾಸದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಡುಗೆ ಭಟ್ಟನಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಾಕಿಸ್ತಾನ ಪ್ರವಾಸದಲ್ಲಿ ಬೆನ್ ಸ್ಟೋಕ್ಸ್ (Ben Stokes) ಸಾರಥ್ಯದ ಇಂಗ್ಲೆಂಡ್ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಡಿಸೆಂಬರ್ 1ರಂದು ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳು ಮುಲ್ತಾನ್ ಮತ್ತು ಕರಾಚಿಯಲ್ಲಿ ನಡೆಯಲಿವೆ.

England Cricket Team: Ben Stokes-led England Test team will take Kotak Bhatt to Pakistan

Comments are closed.