ಸೋಮವಾರ, ಜೂನ್ 16, 2025
HomeSportsCricketIPL 2020 LSG WIN : ಆಯುಷ್ ಬಡೋನಿ, ಲಿವಿಸ್ ಬ್ಯಾಟಿಂಗ್ ಆರ್ಭಟ : ಲಕ್ನೋ...

IPL 2020 LSG WIN : ಆಯುಷ್ ಬಡೋನಿ, ಲಿವಿಸ್ ಬ್ಯಾಟಿಂಗ್ ಆರ್ಭಟ : ಲಕ್ನೋ ಸೂಪರ್‌ ಜೈಂಟ್ಸ್ ಎದುರು ಚೆನ್ನೈ‌ ಸೂಪರ್‌ ಕಿಂಗ್ಸ್‌ ಗೆ ಸೋಲು

- Advertisement -

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಕನ್ನಡಿಗ ಕೆ.ಎಲ್.ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಎರಡನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್‌ ಮಾಡಿದೆ. ಅಂತಿಮ ಹಂತದಲ್ಲಿ ಆಯುಷ್‌ ಬಡೋನಿ ( Ayush Badoni) ಹಾಗೂ ಎವಿನ್‌ ಲೂವಿಸ್‌‌ ( Evin Lewis) ಅವರ ಬ್ಯಾಟಿಂಗ್‌ ಆರ್ಭಟಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಮಂಕಾಗಿದೆ. ಈ ಮೂಲಕ ಲಕ್ನೋ (LSG WIN ) 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 7 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರಂಭಿಕ ರುತುರಾಜ್‌ ಗಾಯಕ್ವಾಡ್‌ 1 ರನ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ರು. ಆದರೆ ಆರಂಭಿಕನಾಗಿ ಭಡ್ತಿ ಪಡೆದಿದ್ದ ಕನ್ನಡಿಗ ರಾಬಿನ್‌ ಉತ್ತಪ್ಪ ಹಾಗೂ ಮೊಯಿನ್‌ ಆಲಿ ತಂಡಕ್ಕೆ ನೆರವಾದ್ರು.

Evin Lewis, Ayush Badoni power LSG WIN to their first IPL 2020 win
IMAGE CREDIT : BCCI/CSK/IPL

ಮೊಯಿನ್‌ ಆಲಿ 35 ರನ್‌ ಗಳಿಸಿ ಔಟಾದ್ರೆ, ರಾಬಿನ್‌ ಉತ್ತಪ್ಪ ಶಿವಂ ದುಬೆ ಜೊತೆ ಸೇರಿ ಇನ್ನಿಂಗ್ಸ್‌ ಕಟ್ಟುವ ಕಾರ್ಯವನ್ನು ಮಾಡಿದ್ರು. ಉತ್ತಪ್ಪ ಆಕರ್ಷಕ ಅರ್ಧ ಶತಕ ಬಾರಿಸಿದ್ರೆ, ಶಿವಂ ದುಬೈ ಆಟ 49 ರನ್‌ ಗೆ ಕೊನೆಯಾಯ್ತು. ನಂತರದಲ್ಲಿ ಅಂಬಟಿ ರಾಯಡು 27, ರವೀಂದ್ರ ಜಡೇಜಾ 17, ಮಹೇಂದ್ರ ಸಿಂಗ್‌ ಧೋನಿ 16 ರನ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 210 ರನ್‌ ಗಳಿಸಿತ್ತು. ಲಕ್ನೋ ಪರ ಆವೇಶ್‌ ಖಾನ್‌, ಆಂಡ್ರೋ ಟೈ ಹಾಗೂ ರವಿ ಬಿಶ್ನೋಯಿ ತಲಾ ಎರಡು ವಿಕೆಟ್‌ ಪಡೆದುಕೊಂಡಿದ್ದಾರೆ.

Evin Lewis, Ayush Badoni power LSG WIN to their first IPL 2020 win
IMAGE CREDIT : BCCI/CSK/IPL

ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ ಸವಾಲಿನ211 ರನ್‌ ಬೆನ್ನತ್ತಲು ಹೊರಟ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್‌ ಹಾಗೂ ಕ್ವಿಂಟಾನ್‌ ಡಿಕಾಕ್‌ ಉತ್ತಮ ಜೊತೆಯಾಟ ಆಡಿದ್ರು. ನಾಯಕ ರಾಹುಲ್‌ 40 ರನ್‌ ಗಳಿಸಿ ಔಟಾದ್ರೆ ಒಂದನೇ ಕ್ರಮಾಂಕದಲ್ಲಿ ಆಟಕ್ಕೆ ಇಳಿದ ಮನೀಷ್‌ ಪಾಂಡೆ ಕೇವಲ 5 ರನ್‌ ಗಳಿಗೆ ವಿಕೆಟ್‌ ಒಪ್ಪಿಸಿ ನಿರ್ಗಮಿಸಿದ್ರು. ಆದರೆ ಡಿಕಾಕ್‌ ಹಾಗೂ ಎವಿನ್‌ ಲಿವೀಸ್‌ ಉತ್ತಮ ಜೊತೆಯಾಟವಾಡಿದ್ರು. ಡಿಕಾಕ್‌ 61 ರನ್‌ ಗಳಿಸಿ ಔಟಾಗುತ್ತಿದ್ದಂತೆಯೇ ಲಕ್ನೋ ಗೆಲುವಿನ ಆಸೆಯನ್ನು ಕೈಬಿಟ್ಟಿತ್ತು. ಆದರೆ ಲಿವಿಸ್‌ ಜೊತೆಯಾದ ದೀಪಕ್‌ ಹೂಡಾ ಆಕ್ರಮಣಕಾರಿ ಆಟಕ್ಕೆ ಮುಂದಾದ್ರು.

Evin Lewis, Ayush Badoni power LSG WIN to their first IPL 2020 win
IMAGE CREDIT : BCCI/LSG/IPL

ಹೂಡಾ 8 ಎಸೆತಗಳಲ್ಲಿ 13 ರನ್‌ ಸಿಡಿಸಿ ಔಟಾದ್ರೆ ಇನ್ನೊಂದೆಡೆಯಲ್ಲಿ ಲಿವೀಸ್‌ ಕೇವಲ 23 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿ ನೆರವಿನಿಂದ ಆಕರ್ಷಕ ಅರ್ಧ ಶತಕ ಸಿಡಿಸಿದ್ರು. ಅಂತಿಮ ಹಂತದಲ್ಲಿ ಲಿವಿಸ್‌ಗೆ ಜೊತೆಯಾಟ ಆಯುಷ್‌ ಬಡೋನಿ ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್‌ ನೆರವಿನಿಂದ 19 ರನ್‌ ಬಾರಿಸುವ ಮೂಲಕ ಲಕ್ನೋ ತಂಡಕ್ಕೆ ಮೊದಲ ಗೆಲುವು ತಂದು ಕೊಟ್ರು. ಅಂತಿಮವಾಗಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 19.3 ಓವರ್‌ ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ೨೧೧ರನ್‌ ಬಾರಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಪ್ರಿಸ್ಟೋರಿಯಸ್‌ 2 ಹಾಗೂ ಬ್ರಾವೋ ಮತ್ತು ತುಷಾರ್‌ ದೇಶಪಾಂಡೆ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

IPL 2020 LSG WIN : ಸಂಕ್ಷಿಪ್ತ ಸ್ಕೋರ್‌ :

ಚೆನ್ನೈ ಸೂಪರ್‌ ಕಿಂಗ್ಸ್‌ : ರಾಬಿನ್‌ ಉತ್ತಪ್ಪ 50 , ಶಿವಂ ದುಬೆ 49, ಮೊಯಿನ್‌ ಆಲಿ 35, ರಾಯಡು 27, ರವೀಂದ್ರ ಜಡೇಜಾ17 , ಮಹೇಂದ್ರ ಸಿಂಗ್‌ ಧೋನಿ 16 ರವಿ ಬಿಶ್ನೋಯಿ 24/2 , ಆವೇಶ್‌ ಖಾನ್‌ 38/2 , ಆಂಡ್ರೋ ಟೈ 40/2

ಲಕ್ನೋ ಸೂಪರ್‌ ಜೈಂಟ್ಸ್‌ : ಕ್ವಿಂಟಾನ್‌ ಡಿಕಾಕ್‌ 61 , ಎವಿನ್‌ ಲಿವಿಸ್‌ 55, ಕೆ.ಎಲ್.ರಾಹುಲ್‌ 40, ದೀಪಕ್‌ 13ಹೂಡಾ , ಆಯುಷ್‌ ಬಡೋನಿ 19, ಪ್ರಿಸ್ಟೋರಿಯಸ್‌ 31/2, ಡ್ವೇನ್‌ ಬ್ರಾವೋ 35/1 , ತುಷಾರ್‌ ದೇಶಪಾಂಡೆ 40/1

ಇದನ್ನೂ ಓದಿ : Andrew Tye : ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಯಾದ ಆಂಡ್ರೋ ಟೈ

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್‌ ಖ್ಯಾತ ಆಟಗಾರನಿಗೆ ಗಾಯ : ಐಪಿಎಲ್‌ನಿಂದ ಹೊರ ಬಿದ್ದ ಆಲ್‌ರೌಂಡರ್‌

Evin Lewis, Ayush Badoni power LSG WIN to their first IPL 2020 win

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular