ಬೆಂಗಳೂರು: (Akhtar Warned Bumrah) ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprti Bumrah) ಬೆನ್ನು ನೋವಿನ ಗಾಯದ ಕಾರಣ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (ICC T20 World Cup) ಅಲಭ್ಯರಾಗಿದ್ದಾರೆ. ಚುಟುಕು ವಿಶ್ವಕಪ್ ಟೂರ್ನಿ ಆರಂಭವಾಗಲು ಕೇವಲ 15 ದಿನಗಳಷ್ಟೇ ಉಳಿದಿರುವ ಹೊತ್ತಲ್ಲಿ, ಬುಮ್ರಾ ಗಾಯಕ್ಕೊಳಗಾಗಿರುವುದು ಭಾರತ ತಂಡಕ್ಕೆ ಭಾರೀ ಆಘಾತ ತಂದಿದೆ.
(Akhtar Warned Bumrah)ಗಾಯದ ಕಾರಣ ಇಂಗ್ಲೆಂಡ್ ಪ್ರವಾಸದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ, ಇತ್ತೀಚೆಗೆಷ್ಟೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಆದರೆ ಕೇವಲ 2 ಪಂದ್ಯಗಳನ್ನಾಡುವಷ್ಟರಲ್ಲಿ ಬುಮ್ರಾ ಮತ್ತೆ ಗಾಯಕ್ಕೊಳಗಾಗಿ ಟಿ20 ವಿಶ್ವಕಪ್’ನಿಂದಲೇ ಹೊರ ಬಿದ್ದಿದ್ದು, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಒಂದು ವರ್ಷದ ಹಿಂದೆ ನೀಡಿದ್ದ ಎಚ್ಚರಿಕೆಯ ವೀಡಿಯೊ ಈಗ ವೈರಲ್ ಆಗುತ್ತಿದೆ.
ಜಸ್ಪ್ರೀತ್ ಬುಮ್ರಾ ಅವರಿಗೆ ಇನ್ನೊಂದೇ ವರ್ಷದಲ್ಲಿ ಗಂಭೀರ ಗಾಯದ ಸಮಸ್ಯೆ ಕಾಡಲಿದೆ ಎಂದು ಶೋಯೆಬ್ ಅಖ್ತರ್ 2021ರಲ್ಲಿ ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ. ಖಾಸಗಿ ಸುದ್ದಿವಾಹಿತಿಯೊಂದಿಗೆ ಬುಮ್ರಾ ಅವರ ಬೌಲಿಂಗ್ action ಬಗ್ಗೆ ಮಾತನಾಡಿದ್ದ ಅಖ್ತರ್, ಇಂತಹ ಬೌಲಿಂಗ್ action ಆಟಗಾರರನ್ನು ಪದೇ ಪದೇ ಬೆನ್ನು ನೋವಿನ ಗಾಯಕ್ಕೀಡು ಮಾಡುತ್ತದೆ ಎಂದಿದ್ದರು.
ಇದನ್ನೂ ಓದಿ : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ
ಇದನ್ನೂ ಓದಿ : 1 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್
ಇದನ್ನೂ ಓದಿ : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ ಔಟ್, ಭಾರತಕ್ಕೆ ಸಿಡಿಲಾಘಾತ
“ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ action ದೇಹದ ಮುಂಭಾಗದ ಕ್ರಿಯೆಯ ಮೇಲೆಯೇ ಅವಲಂಬಿತವಾಗಿದೆ. ಇಂತಹ ಬೌಲಿಂಗ್ ಶೈಲಿ ಹೊಂದಿರುವವರು ಬೆನ್ನು ಮತ್ತು ಭುಜದ ಬಲದಿಂದಲೇ ಬೌಲಿಂಗ್ ಮಾಡಬೇಕು. ನಾವೆಲ್ಲಾ side-on ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದೆವು. ಅದು ಬೆನ್ನಿನ ಮೇಲೆ ಹೆಚ್ಚು ಒತ್ತಡ ಬೀಳುವುದನ್ನು ತಡಯುತ್ತದೆ. ಆದರೆ ಬುಮ್ರಾ ಬೌಲಿಂಗ್ ಶೈಲಿಯಲ್ಲಿ ಒತ್ತಡ ಸಂಪೂರ್ಣವಾಗಿ ಬೆನ್ನಿನ ಮೇಲೆಯೇ ಬೀಳುತ್ತದೆ. ವೆಸ್ಟ್ ಇಂಡೀಸ್’ನ ಇಯಾನ್ ಬಿಷಪ್, ನ್ಯೂಜಿಲೆಂಡ್’ನ ಶೇನ್ ಬಾಂಡ್ ಇದೇ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದದ್ದನ್ನು ನೋಡಿದ್ದೇನೆ. ಇಬ್ಬರೂ ಬೆನ್ನು ನೋವಿನಿಂದ ಬಳಲಿದ್ದರು. ಬುಮ್ರಾ ಈಗ ತಮ್ಮ ವೃತ್ತಿಜೀವನದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಸರಣಿಯ ಎಲ್ಲಾ ಪಂದ್ಯಗಳನ್ನು ಆಡುವುದನ್ನು ಬಿಟ್ಟು, ಕೆಲ ಪಂದ್ಯಗಳಲ್ಲಷ್ಟೇ ಆಡಿ, ಸೂಕ್ತ ವಿರಾಮ ಪಡೆದುಕೊಳ್ಳಬೇಕಿದೆ. ವರ್ಷದಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದರೆ, ನೆಲಕ್ಕೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕಳೆದ ವರ್ಷ ಶೋಯೆಬ್ ಅಖ್ತರ್ ಹೇಳಿದ್ದರು. ಅಖ್ತರ್ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ.
King @shoaib100mph ‘s one year old analysis about Bumrah’s action and back injury…. Pindi boy is always on point. pic.twitter.com/n6JnCeN89q
— Usama Zafar (@Usama7) September 29, 2022
Bumrah was given a warning about the injury, as Pakistan pacer Akhtar ignored it, he was out of the T20 World Cup.