Rahul entry Karnataka : ಕರ್ನಾಟಕ ಪ್ರವೇಶಿಸಿದ ರಾಹುಲ್ ಜೋಡೋ ಯಾತ್ರೆ

ಚಾಮರಾಜನಗರ : Rahul entry Karnataka ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಇಂದಿನಿಂದ ಮುಂದಿನ 21 ದಿನಗಳ ಕಾಲ ಕರ್ನಾಟಕದಲ್ಲಿ ಕಾಂಗ್ರೆಸ್ ನ ಭಾರತ ಐಕ್ಯತಾ ಯಾತ್ರೆ ಸದ್ದು ಮಾಡಲಿದೆ.

ಊಟಿ ಕ್ಯಾಲಿಕಟ್ ಜಂಕ್ಷನ್ ಮಾರ್ಗವಾಗಿ ಇಂದು ಬೆಳಗ್ಗೆ ಬಂದ ರಾಹುಲ್ ಗಾಂಧಿ ಅವರನ್ನ ಬಂಡೀಪುರದ ಬಳಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಅವರನ್ನ ಸ್ವಾಗತಿಸಿದ್ರು.

ಇಂದಿನ ಕಾರ್ಯಕ್ರಮ : ಗುಂಡ್ಲುಪೇಟೆಯಲ್ಲಿ ಸ್ವಾಗತ ಕಾರ್ಯಕ್ರಮದ ಬಳಿಕ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಗುಂಡ್ಲುಪೇಟೆಯ ಶನೇಶ್ವರ ದೇವಸ್ಥಾನದ ಹತ್ತಿರ ಬೆಳಗಿನ ವಿರಾಮ ಇರಲಿದ್ದು, ಇದೇ ಶನೇಶ್ವರ ದೇವಾಲಯದ ಬಳಿ ಸೋಲಿಗರು, ಆಮ್ಲಜನಕ ದುರಂತದಲ್ಲಿ ಮಡಿದ ಸಂತ್ರಸ್ತರ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಡಗಳ್ಳಿ ಗೇಟ್ ನಿಂದ ಪಾದಯಾತ್ರೆ ಮತ್ತೆ ಆರಂಭವಾಗಲಿದೆ. ಸಂಜೆ 7ಗಂಟೆಗೆ ಬೇಗೂರು ಬಸ್ ಸ್ಟಾಪ್ ಎದುರು ಇಂದಿನ ಪಾದಯಾತ್ರೆಗೆ ವಿರಾಮ ಇರಲಿದ್ದು. ನಾಳೆ ಮತ್ತೆ ಪಾದಯಾತ್ರೆ ನಡೆಸಲಿದ್ದಾರೆ.

https://www.youtube.com/watch?v=u6bLhRUsCwk

ರಾಜ್ಯ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಖಾಕಿ ಹೈ ಅಲರ್ಟ್ ಆಗಿದ್ದು, ಬಿಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ರಾಹುಲ್ ಗಾಂಧಿ ಜೊತೆ ಇಂದು ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಇಂದಿನ ಪಾದಯಾತ್ರೆಯಲ್ಲಿ ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿಯಾಗಲಿದ್ದಾರೆ. 7 ಕ್ಷೇತ್ರಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ವಾಹನ ಸಂಚಾರದಲ್ಲಿ ಬದಲಾವಣೆ : ಭಾರತ್ ಜೋಡೊ ಯಾತ್ರೆ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಮೂಲಕ ಹಾದುಹೋಗುವ ಅಂತರರಾಜ್ಯ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕಿದೆ. ಈ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಲಿದ್ದಾರೆ. ಕೇರಳದ ಸುಲ್ತಾನ್ ಬತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಗುಂಡ್ಲುಪೇಟೆ ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ-ಹೊಂಗಹಳ್ಳಿ-ಮೂಕಹಳ್ಳಿ-ಮುಂಟಿಪುರ-ಬರಗಿ-ದೇಶಿಪುರ-ಆಲತ್ತೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕಿದೆ.

ಕೇರಳದ ಸುಲ್ತಾನ್ ಬತೇರಿಯಿಂದ ಮೂಳೆಹೊಳೆ ಮಾರ್ಗವಾಗಿ ಊಟಿಗೆ ತೆರಳುವ ವಾಹನಗಳು ಗುಂಡ್ಲುಪೇಟೆಯ ಕಗ್ಗಳದಹುಂಡಿ ಕ್ರಾಸ್ ಬಳಿಯಿಂದ ಬೇರಂಬಾಡಿ-ಬೀಚನಹಳ್ಳಿ-ಲಕ್ಕಿಪುರ-ದೇವರಹಳ್ಳಿ-ಹಂಗಳ ಮಾರ್ಗವಾಗಿ ಊಟಿಗೆ ತೆರಳಬೇಕು. ಊಟಿ ಕಡೆಯಿಂದ ಮೈಸೂರಿಗೆ ಬರುವ ವಾಹನಗಳು ಹಂಗಳ-ಹಂಗಳಪುರ-ಶಿವಪುರ-ಕೋಡಹಳ್ಳಿ-ಅಣ್ಣೂರು ಕೇರಿ ಮೂಲಕ ಗುಂಡ್ಲುಪೇಟೆ ಕೋಡಹಳ್ಳಿ ಸರ್ಕಲ್ ಬಳಿ ಚಾಮರಾಜನಗರ ರಸ್ತೆ ತಲುಪಿ ಮೈಸೂರಿಗೆ ತೆರಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಧನ್ಯವಾದ ಕೇರಳ ಎಂದ ರಾಹುಲ್ : ಸೆಪ್ಟೆಂಬರ್ 8 ರಂದು ಕನ್ಯಾಕುಮಾರಿಯಿಂದ ಆರಂಭವಾದ 155 ದಿನಗಳ ಭಾರತ ಜೋಡೋ ಯಾತ್ರೆ ಇಂದಿಗೆ 23ನೇ ದಿನಕ್ಕೆ ಕಾಲಿಟ್ಟಿದೆ. ಇದ್ರಲ್ಲಿ 21 ದಿನಗಳವರೆಗೆ ಕೇರಳದಲ್ಲೇ ಪಾದಯಾತ್ರೆ ನಡೆಸಿದ್ದಾರೆ ರಾಹುಲ್ ಗಾಂಧಿ. ಕೇರಳದಲ್ಲಿ ತಮ್ಮ ಯಾತ್ರೆಗೆ ಸಿಕ್ಕ ಅಭೂತ ಪೂರ್ವ ಬೆಂಬಲಕ್ಕೆ ರಾಹುಲ್ ಗಾಂಧಿ ಖುಷಿಯಾಗಿದ್ದು. ತಮ್ಮ ಅಧಿಕೃತ ಟ್ಟಿಟ್ವರ್ ಖಾತೆ ಮೂಲಕ 2 ನಿಮಿಷದ ವಿಡಿಯೋ ಹಂಚಿಕೊಳ್ಳೋ ಮೂಲಕ ಕೇರಳದ ಜನತೆಗೆ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Oxygen Tragedy Rahul Gandhi Meeting : ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮರುಜೀವ: ಸಂತ್ರಸ್ಥರ ಕುಟುಂಬದ ಜೊತೆ ರಾಹುಲ್‌ ಗಾಂಧಿ ಸಂವಾದ

Rahul entry Karnataka bharat jodo yatra start from gundulpete chamarajnagar

Comments are closed.