Father’s Day special : ಅಪ್ಪ ಹೀರೊ, ಮಗ ಝೀರೊ : ಕ್ರಿಕೆಟ್‌ ಜಗತ್ತಿನ ಇಂಟರಸ್ಟಿಂಗ್‌ ಕಹಾನಿ

ಬೆಂಗಳೂರು: ಇವತ್ತು ವಿಶ್ವಅಪ್ಪಂದಿರ ದಿನ (Fathers Day). ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಅಪ್ಪ-ಮಕ್ಕಳ ಜೋಡಿಗಳಿವೆ. ಆದರೆ ಅಪ್ಪನಿಗೆ ಒಲಿದ ಕ್ರಿಕೆಟ್ ಕಲೆ ಬಹುತೇಕ ಮಕ್ಕಳಿಗೆ ಸಿದ್ದಿಸಿಯೇ ಇಲ್ಲ.

ಭಾರತೀಯ ಅಪ್ಪ-ಮಕ್ಕಳ ಕ್ರಿಕೆಟ್ ಜೋಡಿಯ ಬಗ್ಗೆ ಹೇಳುವುದಾದರೆ ಮೊದಲ ಜೋಡಿ ಸಚಿನ್ ತೆಂಡೂಲ್ಕರ್-ಅರ್ಜುನ್ ತೆಂಡೂಲ್ಕರ್. ತಂದೆ ಕ್ರಿಕೆಟ್ ದೇವರು, ಕ್ರಿಕೆಟ್ ದಿಗ್ಗಜ, ವಿಶ್ವದಾಖಲೆವೀರ. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಶತಕಗಳನ್ನು ಬಾರಿಸಿದ ಜಗತ್ತಿನ ಮೊದಲ ಮತ್ತು ಏಕೈಕ ಕ್ರಿಕೆಟಿಗ. ಆದರೆ ಸಚಿನ್ (Sachin Tendulkar) ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಮಾತ್ರ ಇನ್ನೂ ಕ್ರಿಕೆಟ್’ನಲ್ಲಿ ಹೆಸರು ಮಾಡಿಲ್ಲ.‌ ತಂದೆ ಸಚಿನ್ ತೆಂಡೂಲ್ಕರ್ 16ನೇ ವರ್ಷದಲ್ಲೇ ಭಾರತ ತಂಡದ ಪರ ಆಡಿದವರು. ಸಚಿನ್ ಪುತ್ರ ಅರ್ಜುನ್’ಗೆ 21 ವರ್ಷ. ಆದರೆ ಭಾರತ ತಂಡದ ಪರ ಆಡುವ ಮಾಕು ಪಕ್ಕಕ್ಕಿರ್ಲಿ, ಕನಿಷ್ಠ ಮುಂಬೈ ಪರ ರಣಜಿ ಟ್ರೋಫಿಯಾಡಲೂ ಸಚಿನ್ ಪುತ್ರನಿಗೆ ಸಾಧ್ಯವಾಗಿಲ್ಲ.

ಇನ್ನು ಸುನಿಲ್ ಗವಾಸ್ಕರ್-ರೋಹನ್ ಗವಾಸ್ಕರ್ ಜೋಡಿ. ತಂದೆ ಸುನಿಲ್ ಗವಾಸ್ಕರ್ (Sunil Gavaskar)ಟೆಸ್ಟ್ ಕ್ರಿಕೆಟ್’ನಲ್ಲಿ 10 ಸಾವಿರ ರನ್ ಗಳಿಸಿದ ಜಗತ್ತಿನ ಮೊದಲ ಆಟಗಾರ. ಲಿಟ್ಲ್ ಮಾಸ್ಟರ್ ಎಂದು ಕರೆಸಿಕೊಂಡವರು. ಆದರೆ ಪುತ್ರ ರೋಹನ್ ಗವಾಸ್ಕರ್ (Rohan Gavaskar) ತಂದೆಗೆ ಯಾವ ರೀತಿಯಲ್ಲೂ ಸಾಟಿಯಲ್ಲ. ಭಾರತ ಪರ ಆಡಿದ್ದೇ ರೋಹನ್ ಗವಾಸ್ಕರ್ ಸಾಧನೆ.

ಕ್ರಿಕೆಟ್’ನಲ್ಲಿ ಒಳ್ಳೆಯ ಸಾಧನೆ ಮಾಡಿದ ಅಪ್ಪ-ಮಗನ ಜೋಡಿಗಳೂ ಇವೆ. ಈ ಪೈಕಿ ಅಗ್ರಮಾನ್ಯ ಜೋಡಿ ಲಾಲಾ ಅಮರನಾಥ್ ( Lala Amarnath) ಮತ್ತು ಮೊಹಿಂದರ್ ಅಮರನಾಥ್ (Mohinder Amarnath) . ಜಿಮ್ಮಿ ಎಂದೇ ಖ್ಯಾತಿ ಪಡೆದಿದ್ದ ಮೊಹಿಂದರ್ ಅಮರನಾಥ್ ತಂದೆಗೆ ತಕ್ಕಮಗ. 1983ರ ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದು ಭಾರತ ವಿಶ್ವಕಪ್ ಗೆಲ್ಲಲು ಕಾರಣರಾದವರು ಮೊಹಿಂದರ್ ಅಮರನಾಥ್.

2011ರ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ (Yuvraj Singh), ಕ್ರಿಕೆಟ್’ನಲ್ಲಿ ತಂದೆಗಿಂತಲೂ ದೊಡ್ಡ ಹೆಸರು ಮಾಡಿದ್ದಾರೆ. ಯುವಿ ತಂದೆ ಯೋಗರಾಜ್ ಸಿಂಗ್ ಭಾರತ ಪರ ಕೆಲ ಪಂದ್ಯಗಳನ್ನಾಡಿದ್ರೂ ಮಗನಂತೆ ದೊಡ್ಡ ಹೆಸರು ಮಾಡಲಾಗಲಿಲ್ಲ.

ಇದನ್ನೂ ಓದಿ : Father’s Day 2022: ಕೋಪದಲ್ಲೂ ಪ್ರೀತಿಯ ತೋರುವ ಅಪ್ಪ; ವಿಶ್ವ”ತಂದೆಯಂದಿರ ದಿನ”ದ ಆಚರಣೆ ಕುರಿತು ನಿಮಗೆಷ್ಟು ಗೊತ್ತು!

ಇದನ್ನೂ ಓದಿ : 2006ರಲ್ಲಿ ಪದಾರ್ಪಣೆ.. 2022ರಲ್ಲಿ ಮೊದಲ ಅರ್ಧಶತಕ.. ಡಿಕೆ, ಒಂದು ಅದ್ಭುತ ಯಶೋಗಾಥೆ

Fathers Day : Dad Hero, son Zero, the interesting Story’s of the cricketing world

Comments are closed.