ತೀವ್ರ ಆರ್ಥಿಕ ಸಂಕಷ್ಟ : ನಾಳೆಯಿಂದ ಸರ್ಕಾರಿ ಕಚೇರಿ, ಶಾಲೆಗಳು ಬಂದ್

ಕೊಲಂಬೊ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಸರಕಾರ ಸೋಮವಾರದಿಂದ ಸಾರ್ವಜನಿಕ ವಲಯದ ಕಚೇರಿಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತೀವ್ರ ಇಂಧನದ ಕೊರತೆ ಉಂಟಾಗಿದೆ. ಹೀಗಾಗಿ ಸರಕಾರ ಶಾಲೆ (Shutdown schools)ಹಾಗೂ ಸರಕಾರಿ ಕಚೇರಿಗಳನ್ನು ಬಂದ್‌ ಮಾಡುವುದಾಗಿ ಘೋಷಣೆ ಮಾಡಿದೆ.

ಶ್ರೀಲಂಕಾದ ಶಿಕ್ಷಣ ಸಚಿವಾಲಯವು ಕೊಲಂಬೊ ನಗರ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುಮೋದಿತ ಖಾಸಗಿ ಶಾಲೆಗಳ ಶಿಕ್ಷಕರಿಗೆ ದೀರ್ಘಾವಧಿಯ ವಿದ್ಯುತ್ ಕಡಿತದ ಕಾರಣ ಮುಂದಿನ ವಾರದಿಂದ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಕೇಳಿದೆ ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ. ಇಂಧನ ಸ್ಟಾಕ್‌ಗಳು ವೇಗವಾಗಿ ಖಾಲಿಯಾಗುತ್ತಿದೆ. ಜೊತೆಗೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ತನ್ನ ಆಮದುಗಳಿಗೆ ಪಾವತಿಸಲು ವಿದೇಶಿ ವಿನಿಮಯವನ್ನು ಪಡೆಯಲು ತೀವ್ರ ಒತ್ತಡದಲ್ಲಿದೆ. ದೇಶದ ಆರ್ಥಿಕತೆ ಹಲವು ವ್ಯವಹಾರಗಳ ಮೇಲೆ ನೇರ ಹೊಡೆತವನ್ನು ನೀಡಿದೆ. ದೇಶಾದ್ಯಂತದ ಇಂಧನ ತುಂಬುವ ಕೇಂದ್ರಗಳಲ್ಲಿ ಸ್ವಯಂಪ್ರೇರಿತ ಪ್ರತಿಭಟನೆ ನಡೆದಿರುವ ಕುರಿತು ವರದಿಯಾಗಿದೆ. ಅಲ್ಲದೇ ಗ್ರಾಹಕರು ಇಂಧನ ಪಡೆಯಲು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಇಂಧನ ಪೂರೈಕೆಯ ಮೇಲಿನ ತೀವ್ರ ಮಿತಿಗಳು, ದುರ್ಬಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಖಾಸಗಿ ವಾಹನಗಳ ಬಳಕೆಯಲ್ಲಿನ ತೊಂದರೆಗಳನ್ನು ಪರಿಗಣಿಸಿ ಸರಕಾರ ಹೊಸ ಆದೇಶವನ್ನು ಹೊರಡಿಸಿದೆ. ಸರಕಾರಿ ಕಚೇರಿಗಳಲ್ಲಿ ಕನಿಷ್ಠ ಸಿಬ್ಬಂದಿಗಳು ಸೋಮವಾರದಿಂದ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಸಾರ್ವಜನಿಕ ಆಡಳಿತ ಮತ್ತು ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ಆದರೆ ಆರೋಗ್ಯ ಸೇವೆಯ ಉದ್ಯೋಗಿಗಳು ಎಂದಿನಂತೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಶ್ರೀಲಂಕಾದ ಶಿಕ್ಷಣ ಸಚಿವಾಲಯವು ಕೊಲಂಬೊ ನಗರ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುಮೋದಿತ ಖಾಸಗಿ ಶಾಲೆಗಳನ್ನು ದೀರ್ಘಾವಧಿಯ ವಿದ್ಯುತ್ ಕಡಿತದ ಕಾರಣ ಮುಂದಿನ ವಾರದಲ್ಲಿ ಮುಚ್ಚಲಾಗುವುದು ಎಂದು ಘೋಷಿಸಿದೆ. ಅಲ್ಲದೇ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿದೆ ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ : Karnataka 2nd PUC Result : ಪಿಯುಸಿ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Karnataka 2nd PUC Result : ದ್ವಿತೀಯ ಪಿಯುಸಿ ಟಾಪರ್​ಗಳು ಹಾಗೂ ಜಿಲ್ಲಾವಾರು ಟಾಪ್​​ ಲಿಸ್ಟ್​ ಇಲ್ಲಿದೆ ನೋಡಿ

Shutdown of government offices and schools from next week Shutdown schools

Comments are closed.