ಸೋಮವಾರ, ಏಪ್ರಿಲ್ 28, 2025
HomeSportsCricketKarnataka Ranji Team : ಕರ್ನಾಟಕ ರಣಜಿ ತಂಡವನ್ನು ಹಳ್ಳ ಹಿಡಿಸಿದ ಮಹಾನುಭಾವ ಕಿಕೌಟ್, ಕೆಎಸ್‌ಸಿಎ...

Karnataka Ranji Team : ಕರ್ನಾಟಕ ರಣಜಿ ತಂಡವನ್ನು ಹಳ್ಳ ಹಿಡಿಸಿದ ಮಹಾನುಭಾವ ಕಿಕೌಟ್, ಕೆಎಸ್‌ಸಿಎ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥ

- Advertisement -

ಬೆಂಗಳೂರು: ದೇಶೀಯ ಕ್ರಿಕೆಟ್’ನ ಕಿಂಗ್ ಆಗಿ ಮೆರೆದಾಡಿದ್ದ ಕರ್ನಾಟಕ ತಂಡ (Karnataka Ranji Team), ಕಳೆದ 8 ವರ್ಷಗಳಿಂದ ರಣಜಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದೆ. 2015ರಲ್ಲಿ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ ನಾಯಕತ್ವದಲ್ಲಿ ರಣಜಿ ಟ್ರೋಫಿ ಗೆದ್ದ ನಂತರ (R. Vinay Kumar – Fazal Khalil) ಕರ್ನಾಟಕ ತಂಡ ಮತ್ತೆ ರಣಜಿ ಚಾಂಪಿಯನ್ ಆಗಿಲ್ಲ.

ರಾಜ್ಯ ತಂಡದ ಈ ವೈಫಲ್ಯಕ್ಕೆ ತಂಡದ ಆಟಗಾರರ ಕಳಪೆ ಪ್ರದರ್ಶನದ ಜೊತೆಗೆ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿದ್ದ ಮಾಜಿ ಕ್ರಿಕೆಟಿಗ ಫಜಲ್ ಖಲೀಲ್ ಕೂಡ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಫಜಲ್ ಖಲೀಲ್ ತಂಡದ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಕರ್ನಾಟಕ ತಂಡದ ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನದಿಂದ ಫಜಲ್ ಖಲೀಲ್ ಅವರನ್ನು ಕಿಕೌಟ್ ಮಾಡಲಾಗಿದೆ.

ಕರ್ನಾಟಕ ಸೀನಿಯರ್ ತಂಡಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಹೊಸ ಆಯ್ಕೆ ಸಮಿತಿಯನ್ನು (KSCA Selection Committee) ನೇಮಕ ಮಾಡಿದ್ದು, ಮಾಜಿ ಕ್ರಿಕೆಟಿಗ ಜೆ.ಅಭಿರಾಮ್ ನೂತನ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಸಿ.ರಘು, ಅಶ್ವತ್ಥ್ ಮತ್ತು KSCA ಕಾರ್ಯಕಾರಿ ಸಮಿತಿ ಸದಸ್ಯ ಕಮಲ್ ಟಂಡನ್ ನೂತನ ಆಯ್ಕೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : 13 ಮಂದಿ ಆಟಗಾರರೊಂದಿಗೆ ಆಡುವ ಮುಂಬೈ ಇಂಡಿಯನ್ಸ್, ಐಪಿಎಲ್‌ನಲ್ಲಿ ಏನಿದು ಹೊಸ ಕಥೆ?

ಇದನ್ನೂ ಓದಿ : Kohli Parnel : 2008 ಜೂನಿಯರ್ ವಿಶ್ವಕಪ್‌ನಲ್ಲಿ ಎದುರಾಳಿ ನಾಯಕರು, ಆರ್‌ಸಿಬಿಯಲ್ಲಿ ಟೀಮ್ ಮೇಟ್ಸ್

ಫಜಲ್ ಖಲೀಲ್ 2011ರಿಂದಲೂ ಕರ್ನಾಟಕ ರಾಜ್ಯ ಸೀನಿಯರ್ ತಂಡದ ಆಯ್ಕೆ ಸಮಿತಿಯಲ್ಲಿದ್ದರು. 2011ರಿಂದ 2018ರವರೆಗೆ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಫಜಲ್ ಖಲೀಲ್, 2018ರಿಂದ ಸಮಿತಿಯ ಮುಖ್ಯಸ್ಥರಾಗಿದ್ದರು. ಸೆಲೆಕ್ಷನ್ ಕಮಿಟಿಯ ಚೇರ್ಮನ್ ಆಗಿದ್ದಾಗ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿರದ ಫಜಲ್ ಖಲೀಲ್ ಸಾಕಷ್ಟು ಬಾರಿ ಪ್ರಮುಖ ಆಟಗಾರರೊಂದಿಗೆ ಮನಸ್ತಾಪವನ್ನೂ ಮಾಡಿಕೊಂಡಿದ್ದರು. ಫಜಲ್ ಖಲೀಲ್ ಕಾರ್ಯವೈಖರಿ ಬಗ್ಗೆ ರಾಜ್ಯ ರಣಜಿ ತಂಡದ ಪ್ರಮುಖ ಆಟಗಾರರೇ ಅಸಮಾಧಾನ ಹೊರ ಹಾಕಿದ್ದರು. ಇದೀಗ ಫಜಲ್ ಖಲೀಲ್ ತಲೆದಂಡವಾಗಿದ್ದು, ಹೊಸ ಕ್ರಿಕೆಟ್ ಋತುವಿಗೆ ಹೊಸ ಆಯ್ಕೆ ಸಮಿತಿಯ ನೇಮಕವಾಗಿದೆ.

ಇದನ್ನೂ ಓದಿ : KL Rahul LSG : ರಾಹುಲ್ ಫೇಲ್ ಆದ್ರೆ ಎಲ್‌ಎಸ್‌ಜಿ ಧಮ್ ಕೇ ಧಾರ್ ಧಮಾಕ, ಐಪಿಎಲ್‌ನಲ್ಲಿ ಏನಿದು ವಿಚಿತ್ರ?

R. Vinay Kumar – Fazal Khalil : Mahanubhava Kikout, who made the Karnataka Ranji team a pit, is the new head of the KSCA selection committee.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular