Virat Kohli Vs Shubman Gill : ಮ್ಯಾಚ್, ರನ್, ಸರಾಸರಿ, ಸ್ಟ್ರೈಕ್‌ರೇಟ್ ಎಲ್ಲವೂ ಸೇಮ್ ಟು ಸೇಮ್, ಇದು ಕಿಂಗ್-ಪ್ರಿನ್ಸ್ ಮ್ಯಾಜಿಕ್

ಬೆಂಗಳೂರು: ಒಬ್ಬ ಕ್ರಿಕೆಟ್ ಜಗತ್ತಿನ “ಕಿಂಗ್”, ಅಂದ್ರೆ ರಾಜ. ಮತ್ತೊಬ್ಬ ಭಾರತೀಯ ಕ್ರಿಕೆಟ್’ನ “ಪ್ರಿನ್ಸ್”, ಅಂದ್ರೆ ಯುವರಾಜ. ಕಿಂಗ್ ವಿರಾಟ್ ಕೊಹ್ಲಿ (Virat Kohli), ಪ್ರಿನ್ಸ್ ಶುಭಮನ್ ಗಿಲ್ (Shubman Gill). ಪಂಜಾಬ್’ನ ಯುವ ಬಲಗೈ ಓಪನರ್ ಶುಭಮನ್ ಗಿಲ್ ಅವರನ್ನು ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ (Virat Kohli Vs Shubman Gill) ಎಂದೇ ಕರೆಯಲಾಗುತ್ತಿದೆ. 24 ವರ್ಷದ ಗಿಲ್ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಹೀಗೆ ಮೂರೂ ಪ್ರಕಾರಗಳಲ್ಲಿ ಶತಕಗಳನ್ನು ಬಾರಿಸಿ ಭರವಸೆ ಮೂಡಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿದ 45 ಪಂದ್ಯಗಳಲ್ಲಿ ಒಟ್ಟು 7 ಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಶುಭಮನ್ ಗಿಲ್ ಈ ಬಾರಿ ಆಡಿದ 8 ಪಂದ್ಯಗಳಿಂದ 333 ರನ್ ಕಲೆ ಹಾಕಿದ್ದಾರೆ. ಗಿಲ್ ಎದುರಿಸಿರುವ ಎಸೆತಗಳು 234, ಸ್ಟ್ರೈಕ್’ರೇಟ್ 142.30. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಬಾರಿಯ ಐಪಿಎಲ್’ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಒಟ್ಟು 234 ಎಸೆತಗಳನ್ನೆದುರಿಸಿ 142.30 ಸ್ಟ್ರೇಕ್’ರೇಟ್’ನಲ್ಲಿ 333 ರನ್ ಗಳಿಸಿದ್ದಾರೆ. ಐಪಿಎಲ್-2023 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಇಲ್ಲಿಯವರೆಗೆ ಆಡಿರುವ ಪಂದ್ಯ, ಗಳಿಸಿರುವ ರನ್, ಎದುರಿಸಿದ ಎಸೆತ ಮತ್ತು ಬ್ಯಾಟಿಂಗ್ ಸ್ಟ್ರೈಕ್’ರೇಟ್ ಒಂದೇ ಆಗಿರುವುದು ನಿಜಕ್ಕೂ ಅಚ್ಚರಿ.

ಐಪಿಎಲ್-2023 – ವಿರಾಟ್ ಕೊಹ್ಲಿ – ಶುಭಮನ್ ಗಿಲ್
08 ಪಂದ್ಯ 08
234 ಎಸೆತ 234
333 ರನ್ 333
142.30 ಸ್ಟ್ರೈಕ್’ರೇಟ್ 142.30
01 ಶೂನ್ಯ 01

ಇದನ್ನೂ ಓದಿ : Karnataka Ranji Team : ಕರ್ನಾಟಕ ರಣಜಿ ತಂಡವನ್ನು ಹಳ್ಳ ಹಿಡಿಸಿದ ಮಹಾನುಭಾವ ಕಿಕೌಟ್, ಕೆಎಸ್‌ಸಿಎ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥ

ಇದನ್ನೂ ಓದಿ : 13 ಮಂದಿ ಆಟಗಾರರೊಂದಿಗೆ ಆಡುವ ಮುಂಬೈ ಇಂಡಿಯನ್ಸ್, ಐಪಿಎಲ್‌ನಲ್ಲಿ ಏನಿದು ಹೊಸ ಕಥೆ?

ಐಪಿಎಲ್-2023 (IPL 2023) ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ವಿರಾಟ್ ಕೊಹ್ಲಿ5ನೇ ಸ್ಥಾನದಲ್ಲಿದ್ದರೆ, ಶುಭಮನ್ ಗಿಲ್ 6ನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ 9 ಪಂದ್ಯಗಳಿಂದ 428 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ 8 ಪಂದ್ಯಗಳಿಂದ 422 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

Virat Kohli Vs Shubman Gill : Match, Runs, Average, Strikerate All Same to Same, It’s King-Prince Magic

Comments are closed.