Gujarat Titans IPL 2022 : ಗುಜರಾತ್ ಟೈಟಾನ್ಸ್ ತಂಡಕ್ಕೆ ಶಾಕ್‌ : ಖ್ಯಾತ ಆಟಗಾರ ಐಪಿಲ್‌ನಿಂದ ಔಟ್

ವಿಶ್ವದ ದುಬಾರಿ ಕ್ರಿಕೆಟ್‌ ಲೀಗ್‌ ಅನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವುದಕ್ಕೆ ವಿಶ್ವದ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಲ್ಲುತ್ತಿದ್ದಾರೆ. ಈಗಾಗಲೇ ಮೆಗಾ ಹರಾಜು ಮುಗಿದಿದ್ದು ಆಟಗಾರರು ತಂಡ ಸೇರಿಕೊಂಡಿದ್ದಾರೆ. ಆದರೆ ಐಪಿಎಲ್ 2022ಕ್ಕೂ (IPL 2022) ಮೊದಲೇ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಕ್ಕೆ ಬಿಗ್‌ ಶಾಕ್‌ ಎದುರಾಗಿದೆ. ತಂಡದ ಆರಂಭಿಕ ಆಟಗಾರ ಜೇಸನ್‌ ರಾಯ್‌ ಇದೀಗ ಐಪಿಎಲ್‌ ನಿಂದ ಹಿಂದೆ ಸರಿದಿದ್ದಾರೆ.

ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರ ಜೇಸ್‌ ರಾಯ್‌ ಅವರನ್ನು ಗುಜರಾತ್‌ ಟೈಟಾನ್ಸ್‌ ತಂಡ ಬರೋಬ್ಬರಿ 2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಜೇಸನ್‌ ರಾಯ್‌ ತಂಡಕ್ಕೆ ಸೇರ್ಪಡೆಯಾಗುತ್ತಲೇ ಗುಜರಾತ್‌ ಟೈಟಾನ್ಸ್‌ಗೆ ಉತ್ತಮ ಆರಂಭಿಕ ಸಿಕ್ಕ ಖುಷಿಯಲ್ಲಿತ್ತು. ಆದರೆ ಹಲವು ದಿನಗಳ ಕಾಲ ಬಯೋ ಬಬಲ್‌ನಲ್ಲಿ ಉಳಿಯ ಬೇಕಾಗಿರುವುದರಿಂದಾಗಿ ಐಪಿಎಲ್‌ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

Gujarat Titans Top player out from IPL 2022

ಆದರೆ ಗುಜರಾತ್‌ ಟೈಟಾನ್ಸ್‌ ತಂಡ ಜೇಸನ್‌ ರಾಯ್‌ ಬದಲು ಬೇರೆ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಲ್ಲ. ಜೇಸನ್‌ ರಾಯ್‌ ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 1.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆದರೆ ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ 2020ರ ಟೂರ್ನಿಯಲ್ಲಿ ಅವರು ಭಾಗವಹಿಸಿರಲಿಲ್ಲ. ಜೇಸನ್‌ ರಾಯ್‌ ಈ ಹಿಂದೆ ಗುಜರಾತ್ ಲಯನ್ಸ್ (2017), ಡೆಲ್ಲಿ ಡೇರ್‌ಡೆವಿಲ್ಸ್ (2018) ಮತ್ತು ಸನ್‌ರೈಸರ್ಸ್ ಹೈದರಾಬಾದ್ (2021) ತಂಡಗಳನ್ನು ಪ್ರತಿನಿಧಿಸಿದ್ದರು.

Gujarat Titans Top player out from IPL 2022

ಇದುವರೆಗೆ 13 ಐಪಿಎಲ್ ಪಂದ್ಯಗಳನ್ನು ಆಡಿರುವ ಜೇಸನ್‌ ರಾಯ್ 29.90 ಸರಾಸರಿ ಮತ್ತು 129.01 ಸ್ಟ್ರೈಕ್ ರೇಟ್‌ನಲ್ಲಿ 329 ರನ್ ಗಳಿಸಿದ್ದಾರೆ. ಇನ್ನು ಪಾಕಿಸ್ತಾನ್‌ ಸೂಪರ್‌ ಲೀಗ್‌ ನಲ್ಲಿ ರನ್‌ ಹೊಳೆಯನ್ನೇ ಹರಿಸಿರುವ ರಾಯ್‌ ಒಂದು ಶತಕ ಹಾಗೂ ಎರಡು ಅರ್ಧ ಶತಕ ಸಿಡಿಸಿದ್ದಾರೆ. ಸದ್ಯ ಅದ್ಬುತ ಫಾರ್ಮ್‌ನಲ್ಲಿರುವ ರಾಯ್‌ ಈ ಬಾರಿ ಗುಜರಾತ್‌ ಟೈಟಾನ್ಸ್‌ ಪರ ಆರ್ಭಟಿಸುತ್ತಾರೆ ಅಂತಾ ಭಾವಿಸಿಕೊಂಡಿ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಗುಜರಾತ್‌ ಟೈಟಾನ್ಸ್‌ (Gujarat Titans) ತಂಡ :

ಹಾರ್ದಿಕ್ ಪಾಂಡ್ಯ (15 ಕೋಟಿ), ರಶೀದ್ ಖಾನ್ (15 ಕೋಟಿ), ಶುಭಮನ್ ಗಿಲ್ (8 ಕೋಟಿ), ಮೊಹಮ್ಮದ್ ಶಮಿ (6.25 ಕೋಟಿ), ಜೇಸನ್ ರಾಯ್ (2 ಕೋಟಿ), ಲಾಕಿ ಫರ್ಗುಸನ್ (10 ಕೋಟಿ), ಅಭಿನವ್ ಮನೋಹರ್ (2.6 ಕೋಟಿ), ರಾಹುಲ್ ತೆವಾಟಿಯಾ (9 ಕೋಟಿ), ನೂರ್ ಅಹ್ಮದ್ (0.3ಕೋಟಿ), ಸಾಯಿ ಕಿಶೋರ್ (3 ಕೋಟಿ) ಡೊಮಿನಿಕ್ ಡ್ರೇಕ್ಸ್ (1.1 ಕೋಟಿ), ಜಯಂತ್ ಯಾದವ್ (1.7 ಕೋಟಿ), ವಿಜಯ್ ಶಂಕರ್ (1.4 ಕೋಟಿ), ದರ್ಶನ್ ನಲ್ಕಂಡೆ (0.2 ಕೋಟಿ), ಯಶ್ ದಯಾಳ್ (3.2 ಕೋಟಿ), ಅಲ್ಜಾರಿ ಜೋಸೆಫ್ (2.4 ಕೋಟಿ), ಡೇವಿಡ್ ಮಿಲ್ಲರ್ (3.0 ಕೋಟಿ), ವೃದ್ಧಿಮಾನ್ ಸಹಾ (1.9 ಕೋಟಿ), ಮ್ಯಾಥ್ಯೂ ವೇಡ್, ವರುಣ್ ಆರೋನ್ (0.5)

ಇದನ್ನೂ ಓದಿ : CSK : IPL 2022 ಮುನ್ನ ಚೆನ್ನೈಗೆ ಬಿಗ್‌ ಶಾಕ್;‌ ಇಬ್ಬರು ಪ್ರಮುಖ ಆಟಗಾರರಿಗೆ ಗಾಯ

ಇದನ್ನೂ ಓದಿ : IPL 2022 Full Schedule : 10 ತಂಡ,74 ಪಂದ್ಯ : ಇಲ್ಲಿದೆ ಐಪಿಎಲ್ 2022ರ ಪೂರ್ಣ ವೇಳಾಪಟ್ಟಿ

(Gujarat Titans Top player out from IPL 2022)

Comments are closed.