ಉದಯಪುರ: ಟೀಮ್ ಇಂಡಿಯಾ ಟಿ20 ತಂಡದ ನಾಯಕ, ಏಕದಿನ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಉತ್ತಮ ಕ್ರಿಕೆಟಿಗ ನಿಜ. ಆದರೆ ಅಷ್ಟೇ ಅಚ್ಚರಿಗಳ ಮನುಷ್ಯ. ಕೋವಿಡ್ ಸಮಯದಲ್ಲಿ ಯಾರಿಗೂ ಗೊತ್ತಾಗದಂತೆ ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್ (Natasa Stankovic) ಅವರನ್ನು ಮದುವೆಯಾಗಿದ್ದ ಪಾಂಡ್ಯ, ಮದುವೆಯಾದ ಎರಡೇ ತಿಂಗಳಲ್ಲಿ ಗಂಡು ಮಗುವಿನ ತಂದೆಯಾಗಿದ್ದರು. ಇದೀಗ ಮತ್ತೊಂದು ಅಚ್ಚರಿ ಕೊಟ್ಟಿರುವ ಪಾಂಡ್ಯ, ಪ್ರೇಮಿಗಳ ದಿನದಂದೇ ಮಗನ ಸಮ್ಮುಖದಲ್ಲಿ ಪತ್ನಿಯನ್ನು ಮತ್ತೊಮ್ಮೆ (Hardik Pandya wedding) ಮದುವೆಯಾಗಲಿದ್ದಾರೆ.
ಈ ಮದುವೆ ರಾಜಸ್ಥಾನರ ಉದಯಪುರದಲ್ಲಿ ನಡೆಯಲಿದ್ದು, ಹಾರ್ದಿಕ್ ಪಾಂಡ್ಯ ದಂಪತಿ ಮಗ ಅಗಸ್ತ್ಯ ಪಾಂಡ್ಯನೊಂದಿಗೆ ಮದುವೆ ಸಿದ್ಧತೆಯಲ್ಲಿದ್ದಾರೆ. ಪಾಂಡ್ಯ ಸಹೋದರ ಕೃಣಾಲ್ ಪಾಂಡ್ಯ ಕೂಡ ಈಗಾಗಲೇ ಉದಯಪುರ ತಲುಪಿದ್ದಾರೆ. ಹಾರ್ದಿಕ್ ಪಾಂಡ್ಯ 2020ರ ಮೇ 31ರಂದು ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾಗಿದ್ದರು. ಪಾಂಡ್ಯ-ನತಾಶಾ ದಂಪತಿಗೆ ಈಗಾಗಲೇ ಅಗಸ್ತ್ಯ ಪಾಂಡ್ಯ ಹೆಸರಿನ ಮಗನೂ ಇದ್ದಾನೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾದ ಎರಡೇ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದರು. ಪಾಂಡ್ಯ ಅವರನ್ನು ಮದುವೆಯಾಗುವ ಹೊತ್ತಿಗೆ ನತಾಶಾ ಏಳು ತಿಂಗಳ ಗರ್ಭಿಣಿಯಾಗಿದ್ದರು.
ಕೋವಿಡ್ ಸಮಯದಲ್ಲಿ ನಡೆದಿದ್ದ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಮದುವೆಯಾಗಿ ನತಾಶಾ ಅವರ ಹೆತ್ತವರು ಆಗಮಿಸಿರಲಿಲ್ಲ. ಕೊರೊನಾ ಕಾರಣದಿಂದ ನತಾಶಾ ಕುಟುಂಬಸ್ಥರಿಗೆ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಪತ್ನಿಯ ಕುಟುಂಬಸ್ಥರನ್ನು ಮೊದಲ ಬಾರಿ ಭೇಟಿಯಾಗಿದ್ದ ಪಾಂಡ್ಯ ಇದೀಗ ಹೆಂಡತಿಯ ಹೆತ್ತವರಿಗಾಗಿ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ.
ಕೊರೊನಾ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಜೋಡಿಯ ಮದುವೆ 2020ರ ಮೇ 31ರಂದು ತುಂಬಾ ಸರಳವಾಗಿ ನಡೆದಿತ್ತು. ಮದುವೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದರು. ಆತ್ಮೀಯ ಸ್ನೇಹಿತರನ್ನೂ ಕೂಡ ಮದುವೆಯಾಗಿ ಆಹ್ವಾನಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ನೇಹಿತರಿಗಾಗಿ, ಹೆಂಡತಿಯ ಮನೆಯವರಿಗಾಗಿ ಪಾಂಡ್ಯ ಪ್ರೇಮಿಗಳ ದಿನದಂದು ಪತ್ನಿಯನ್ನು 2ನೇ ಬಾರಿ ಮದುವೆಯಾಗಲಿದ್ದಾರೆ.
ಇದನ್ನೂ ಓದಿ : ಬೆಳಗಾವಿ ಕ್ರಿಕೆಟಿಗನ ಫೀಲ್ಡಿಂಗ್‌ಗೆ ಫಿದಾ ಆದ್ರು ತೆಂಡೂಲ್ಕರ್, ಅದ್ಭುತ ಕ್ಯಾಚ್‌ಗೆ ಬಹುಪರಾಕ್ ಅಂದ್ರು ಕ್ರಿಕೆಟ್ ದಿಗ್ಗಜರು
Hardik Pandya wedding is going to marry his wife again on Valentine’s Day in the presence of his son