ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿ ಹುಲಿ ಮೃತದೇಹ ಪತ್ತೆ : ಗ್ರಾಮಸ್ಥರಿಗೆ ಆತಂಕ

ತುಮಕೂರು: ಸತ್ತ ಸ್ಥಿತಿಯಲ್ಲಿ ಹುಲಿಯ ಮೃತದೇಹ (tiger Dead body) ಜಿಲ್ಲೆಯ ಗುಬ್ಬಿ ತಾಲ್ಲೂಕು ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಯಾವ ಕಾರಣಕ್ಕೆ ಹುಲಿ ಸಾವನ್ನಪ್ಪಿದೆ ಎಂಬುದು ಮಾತ್ರ ಇದುವರೆಗೂ ಗೊತ್ತಾಗಿಲ್ಲ. ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿರುವ ರಸ್ತೆಗೆ ನಿರ್ಮಿಸಲಾದ ಸೇತುವೆಯಡಿ ಹುಲಿಯ ಮೃತದೇಹ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ತುಮಕೂರಿನ ದೇವರಾಯನ ದುರ್ಗದಲ್ಲಿ ಇತ್ತೀಚೆಗೆ ಹುಲಿಯ ಓಡಾಟ ಕಂಡುಬಂದಿದ್ದು, ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಲಾಗಿತ್ತು. ಹೆಜ್ಜೆ ಗುರುತನ್ನು ಪತ್ತೆ ಹಚ್ಚಲಾಗಿತ್ತಾದರೂ ಕೂಡ ದೇವರಾಯನದುರ್ಗದಲ್ಲಿ ಹುಲಿಯ ಓಡಾಟ ಇರುವುದು ಖಚಿತವಾಗಿರಲಿಲ್ಲ. ಆದರೆ ಈಗ ಸತ್ತ ಹುಲಿ ದೇಹ ಪತ್ತೆಯಾಗಿರುವುದು ದೇವರಾಯನ ದುರ್ಗದಲ್ಲಿ ಹುಲಿ ಇರುವುದಕ್ಕೆ ಪುಷ್ಠಿ ನೀಡಿದೆ.

ಅಂಕಸಂದ್ರದ ಅರಣ್ಯ ಪ್ರದೇಶದಲ್ಲಿರುವ ರಸ್ತೆಗೆ ನಿರ್ಮಿಸಲಾದ ಸೇತುವೆಯಡಿ ಹುಲಿಯ ಮೃತದೇಹ ಕಂಡುಬಂದಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇದುವರೆಗೂ ಹುಲಿಯನ್ನು ಮುಟ್ಟುವ ಸಾಹಸಕ್ಕೆ ಯಾರೂ ಹೋಗಿಲ್ಲ. ಹುಲಿ ದೇಹ ಕಂಡು ಬಂದಿರುವ ಸೇತುವೆಯಿಂದ 100 ಮೀಟರ್ ಒಳಗೆ ಜನರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಮೈಸೂರಿನಿಂದ ಹುಲಿ ತಜ್ಞರು ಬರುವವರೆಗೂ ಸತ್ತಂತಿರುವ ಹುಲಿಯ ಮೃತದೇಹವನ್ನು ಯಾರೂ ಮುಟ್ಟದೆ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಿನ ನಿರ್ಬಂಧವನ್ನು ವಿಧಿಸಿದ್ದಾರೆ.

ಪರಿಸರವಾದಿ ಗುಂಡಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಸ್ತೆಗೆ ನಿರ್ಮಾಣ ಮಾಡಿರುವ ಸೇತುವೆಯ ಕೆಳಗೆ ಕೊಳಾಯಿನಲ್ಲಿ ಮಲಗಿರುವ ಸ್ಥಿತಿಯಲ್ಲಿ ಹುಲಿ ಕಂಡು ಬಂದಿದೆ. ಹುಲಿ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ಯಾರಾದರು ಹುಲಿಯನ್ನು ಸಾಯಿಸಿ ಇಲ್ಲಿಗೆ ಹಾಕಿದ್ದಾರೆಯೇ, ಅಥವಾ ಆಹಾರದ ಕೊರತೆಯಿಂದ ಹುಲಿ ಮೃತಪಟ್ಟಿದೆಯೋ ಗೊತ್ತಿಲ್ಲ. ಮೈಸೂರಿನಿಂದ ತಜ್ಞರು ಬಂದ ನಂತರವೇ ಹುಲಿಯ ಸಾವಿಗೆ ಕಾರಣವೇನು ಎಂಬುದು ತಿಳಿಯಲಿದೆ ಎಂದರು.

ಇದನ್ನೂ ಓದಿ : Ambedkar Contemptuous Visual display: ಅಂಬೇಡ್ಕರ್‌ ಅವಹೇಳನಾಕಾರಿ ದೃಶ್ಯ ಪ್ರದರ್ಶನ: 9 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳ ಬಂಧನ

ಇದನ್ನೂ ಓದಿ : Engineering student suicide in hostel: ಹಾಸ್ಟೆಲ್ ಕೊಠಡಿಯಲ್ಲೇ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Tumkur Dead body of tiger found in forest area of Ankasandra Villagers are worried

Comments are closed.