ಬುಧವಾರ, ಏಪ್ರಿಲ್ 30, 2025
HomeSportsCricketHarris Rauf Virat Kohli : ಸಿಕ್ಸರ್ ಬಾರಿಸಿದ್ದು ಕಿಂಗ್ ಕೊಹ್ಲಿ.. ಪಾಂಡ್ಯ, ಡಿಕೆ ಅಲ್ಲ”...

Harris Rauf Virat Kohli : ಸಿಕ್ಸರ್ ಬಾರಿಸಿದ್ದು ಕಿಂಗ್ ಕೊಹ್ಲಿ.. ಪಾಂಡ್ಯ, ಡಿಕೆ ಅಲ್ಲ” ಪಾಕ್ ವೇಗಿ ಹ್ಯಾರಿಸ್ ರೌಫ್ ಹೀಗಂದರೇಕೆ?

- Advertisement -

ಬೆಂಗಳೂರು : ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯ (India Vs Pakistan T20 World Cup match) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್’ಗಳ ಬಗ್ಗೆ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ (Harris Rauf Virat Kohli) ಮೌನ ಮುರಿದಿದ್ದಾರೆ.

“ಸಿಕ್ಸರ್ ಬಾರಿಸಿದ್ದು ಕಿಂಗ್ ಕೊಹ್ಲಿಯೇ ಹೊರತು ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಅಲ್ಲ” ಎಂದಿದ್ದಾರೆ ಹ್ಯಾರಿಸ್ ರೌಫ್. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದಿದ್ದ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯ ರೋಚಕ ಕಾಳಗಕ್ಕೆ ಸಾಕ್ಷಿಯಾಗಿತ್ತು. 160 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ್ದ ಭಾರತ ಮೊದಲ 10 ಓವರ್’ಗಳಲ್ಲಿ 45 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆಗ ವೃತ್ತಿಜೀವನದ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಕೊನೆಯ 12 ಎಸೆತಗಳಲ್ಲಿ ಭಾರತದ ಗೆಲುವಿಗೆ 31 ರನ್’ಗಳು ಬೇಕಿದ್ದಾಗ ಹ್ಯಾರಿಸ್ ರೌಫ್ ಎಸೆದಿದ್ದ 19ನೇ ಓವರ್’ನ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್ ಕೊಹ್ಲಿ ಎರಡು ಸತತ ಸಿಕ್ಸರ್’ಗಳನ್ನು ಬಾರಿಸಿದ್ದರು. ಅದರಲ್ಲೂ 19.5ನೇ ಓವರ್’ನಲ್ಲಿ ಬೌಲರ್ ತಲೆ ಮೇಲಿಂದ ಬಾರಿಸಿದ್ದ ನೇರ ಸಿಕ್ಸರ್ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಸಿಕ್ಸರ್ ಎಂದೇ ಖ್ಯಾತಿ ಪಡೆದಿದೆ. ಕೊಹ್ಲಿ ಅಂದು ಬಾರಿಸಿದ ಸಿಕ್ಸರ್’ಗಳ ಬಗ್ಗೆ ಹ್ಯಾರಿಸ್ ರೌಫ್ ಈಗ ಮೌನ ಮುರಿದಿದ್ದಾರೆ.

“ದಿನೇಶ್ ಕಾರ್ತಿಕ್ ಅಥವಾ ಹಾರ್ದಿಕ್ ಪಾಂಡ್ಯ ಆ ಸಿಕ್ಸರ್’ಗಳನ್ನು ಬಾರಿಸಿದ್ದಿದ್ದರೆ ನನಗೆ ಆಘಾತ ಮತ್ತು ನೋವು ಎರಡೂ ಆಗುತ್ತಿತ್ತು. ಆದರೆ ಆ ಎರಡು ಸಿಕ್ಸರ್’ಗಳು ಸಿಡಿದದ್ದು ಕ್ರಿಕೆಟ್ ಜಗತ್ತಿನ ಅದ್ಭುತ ಆಟಗಾರ ವಿರಾಟ್ ಕೊಹ್ಲಿಯವರ ಬ್ಯಾಟ್’ನಿಂದ. ನನ್ನ ಯೋಜನೆ ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ಎಲ್ಲವೂ ಸರಿಯಾಗಿತ್ತು. ಆದರೆ ಆತ ಅಸಾಮಾನ್ಯ ಆಟಗಾರ. ಅಂತಹ ಆಟಗಾರನಿಂದ ಸಿಕ್ಸರ್ ಹೊಡೆಸಿಕೊಂಡಿದ್ದಕ್ಕೆ ನನಗೆ ಯಾವ ನೋವೂ ಇಲ್ಲ” ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ.

ಇದನ್ನೂ ಓದಿ : Vijay Hazare Trophy Karnataka Team : ಮತ್ತೊಂದು ಟೂರ್ನಿ, ಮತ್ತೊಂದು ವೈಫಲ್ಯ; ಕರ್ನಾಟಕದ ಸೋಲಿಗೆ ಕೊನೆಯೇ ಇಲ್ಲ

ಇದನ್ನೂ ಓದಿ : India cricket Player Rishabh Pant : “ನೆಟ್ಟಗೆ ಆಟವಾಡದಿದ್ದರೂ ಮಾತಿನಲ್ಲೇನು ಕಮ್ಮಿಯಿಲ್ಲ..” ರಿಷಭ್ ಪಂತ್ ಆಡಿದ ಮಾತು ಕೇಳಿದಿರಾ?

ಇದನ್ನೂ ಓದಿ : ವಿಜಯ್‌ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು

ಪಾಕಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, “ಅಕ್ಟೋಬರ್ 23, 2022ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿರುತ್ತದೆ. ಕ್ರಿಕೆಟ್ ಪಂದ್ಯವೊಂದರಲ್ಲಿ ಆ ರೀತಿಯ ಎನರ್ಜಿಯನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅದೊಂದು ಅದ್ಭುತ ಸಂಜೆ” ಎಂದು ಟ್ವಿಟರ್’ನಲ್ಲಿ ಬರೆದುಕೊಂಡಿದ್ದರು.


Harris Rauf Virat Kohli : It was King Kohli who hit the six.. Pandya, not DK” Why did Pakistan pacer Harris Rauf say this?

RELATED ARTICLES

Most Popular