Rape case: ಅತ್ಯಾಚಾರಗೈದ ಮಲತಂದೆ ರಕ್ಷಣೆಗೆ ನಿಂತ ಸಂತ್ರಸ್ತೆ: ಪಟ್ಟು ಬಿಡದ ನ್ಯಾಯಾಧೀಶರು ಮಾಡಿದ್ದೇನು ಗೊತ್ತಾ?

ಮುಂಬೈ: Rape case: 16 ವರ್ಷದ ಮಲಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭವತಿಯಾಗಿಸಿದ ಆರೋಪಿಗೆ ಮುಂಬೈನ ವಿಶೇಷ ನ್ಯಾಯಾಲಯ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಆದರೆ ಆತನಿಗೆ ಶಿಕ್ಷೆಯಾಗದಂತೆ ತಡೆಯಲು ಖುದ್ದು ಸಂತ್ರಸ್ತೆ ಹಾಗೂ ಆಕೆಯ ತಾಯಿ ಇನ್ನಿಲ್ಲದ ಶ್ರಮಪಟ್ಟಿದ್ದಾರೆ. ಹೀಗಾಗಿ ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದೆ ಎಂದೇ ಬಿಂಬಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ಸಂತ್ರಸ್ತೆಯ ತಾಯಿ ಇನ್ನೊಬ್ಬ ವ್ಯಕ್ತಿಯನ್ನು ಮದುವೆ ಆಗಿದ್ದಳು. ಆತ ತನ್ನ ಮಲಮಗಳ (ಮಹಿಳೆಯ ಮೊದಲ ಪತಿಯ ಮಗಳು) ಮೇಲೆ ಕಣ್ಣುಹಾಕಿದ್ದ. 2019ರಿಂದಲೂ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ. 2020ರ ಜೂನ್ ನಲ್ಲಿ ಈ ವಿಚಾರವನ್ನು ಆಕೆ ಅಮ್ಮನ ಬಳಿ ಹೇಳಿಕೊಂಡಿದ್ದಳು. ಆಗ ತಾಯಿ ಮಗಳ ಜೊತೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಳು. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ 4 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತ್ತು. ಬಳಿಕ ಆಕೆಗೆ ಗರ್ಭಪಾತವೂ ಆಗಿತ್ತು.

ಇದನ್ನೂ ಓದಿ: Rajasthan Murder Case : ಇಟ್ಟಿಗೆಯಿಂದ ಹೊಡೆದು ಬಾಲಕಿ ಕೊಲೆ ಅತ್ಯಾಚಾರದ ಶಂಕೆ

ಪೊಲೀಸರು ಪ್ರಕರಣದ ತನಿಖೆ ನಡೆಸಿ ವರದಿಯಲ್ಲಿ ಪೋಕ್ಸೋ ವಿಶೇಷ ಕೋರ್ಟ್ ಗೆ ನೀಡಿದ್ದರು. ಅಷ್ಟರಲ್ಲೇ ಡಿಎನ್ ಎ ಪರೀಕ್ಷೆ ನಡೆದಿದ್ದು. ಅದರ ವರದಿ ಕೂಡಾ ಕೋರ್ಟ್ ಗೆ ನೀಡಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಂತೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಪ್ರಾಸಿಕ್ಯೂಶನ್ ಗೆ ಸಹಕರಿಸದೇ ಇಬ್ಬರೂ ಉಲ್ಟಾ ಹೊಡೆದಿದ್ದರು. ನಮ್ಮ ಕುಟುಂಬಕ್ಕೆ ಆತನೇ ಆಧಾರ. ಆತ ಜೈಲಿಗೆ ಹೋದರೆ ನಮಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತದೆ. ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣ ನೀಡಿ ಆತನನ್ನು ಕ್ಷಮಿಸುವುದಾಗಿ ಕೋರ್ಟ್ ಮುಂದೆ ತಾಯಿ ಮತ್ತು ಮಗಳು ಹೇಳಿಕೆ ನೀಡಿದ್ದರು. ಆದರೆ ಕೇಸ್ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಅನಿಸ್ ಖಾನ್ ಬೇರೆಯದ್ದೇ ತೀರ್ಮಾನಕ್ಕೆ ಬಂದಿದ್ದರು.

ಸಂತ್ರಸ್ತೆ ಹೊಟ್ಟೆಯಲ್ಲಿದ್ದಿದ್ದ ಭ್ರೂಣದ ತಂದೆ ಈ 41 ವರ್ಷದ ವ್ಯಕ್ತಿಯೇ ಅನ್ನೋದು ಡಿಎನ್ ಎ ವರದಿಯಲ್ಲಿ ಸಾಬೀತಾಗಿದೆ. ಇದೊಂದು ಹೀನಾಯ ಕೃತ್ಯ. ಈ ಪ್ರಕರಣದಲ್ಲಿ ಸಂತ್ರಸ್ತೆ ಅಪ್ರಾಪ್ತೆ. ತಾಯಿ, ಮಗಳು ಇಬ್ಬರೂ ವಿಚಾರಣೆಗೆ ಸಹಕರಿಸಿಲ್ಲ. ಆದರೆ ಡಿಎನ್ ಎ ಪರೀಕ್ಷೆ ವರದಿ ಈತ ಅಪರಾಧಿ ಅನ್ನೋದನ್ನು ಸಾಬೀತು ಮಾಡಿದೆ. ಇದರಲ್ಲಿ ಯಾವುದೇ ಅನುಮಾನಗಳು ಇಲ್ಲ ಎಂದು ಸ್ಪಷ್ಟನೆ ನೀಡಿದ ನ್ಯಾಯಾಧೀಶರು ಅಪರಾಧಿಗೆ 20 ವರ್ಷಗಳ ಕಾಲ ಜೈಲುಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Rape by bus driver: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ

Rape case: Court Relies On DNA Test Jails Man For Raping Step-Daughter in Mumbai

Comments are closed.