Sourav Ganguly biopic : ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾಕ್ಕೆ ಹೀರೋ ಸಿಕ್ಕಾಯ್ತು : ಶೀಘ್ರದಲ್ಲೇ ಸಿನಿಮಾ ಘೋಷಣೆ

ಇತ್ತೀಚಿನ ಸಿನಿರಂಗದಲ್ಲಿ ಬಯೋಪಿಕ್ ಸಿನಿಮಾಗಳ ಆರ್ಭಟ ಜೋರಾಗಿದೆ. ಕ್ರೀಡಾ ಕ್ಷೇತ್ರದ ಸಾಧಕರು, ರಾಜಕೀಯರಂಗದ ನಾಯಕರು, ಸಿನಿಮಾ ತಾರೆಯರು, ಉದ್ಯಮಿಗಳ ಜೀವನಾಧರಿತ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ. ಇದರಲ್ಲಿ ಕ್ರೀಡಾ ಕ್ಷೇತ್ರದ ಸಾಧಕರ ಕಥೆಗಳೇ ಹೆಚ್ಚು. ಧೋನಿ, ಸಚಿನ್, ಕಪಿಲ್ ನಂತರ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾ (Sourav Ganguly biopic) ನಿರ್ಮಾಣಕ್ಕೆ ವೇದಿಕೆ ಸಿದ್ದವಾಗಿದೆ. ಸಿನಿಮಾದಲ್ಲಿ ಬೆಂಗಾಲ್ ಟೈಗರ್ ಆಗಿ ಯಾರು ನಟಿಸ್ತಾರೆ ಎನ್ನುವುದು ಪಕ್ಕಾ ಆಗಿದೆ. ಬಹಳ ದಿನಗಳಿಂದ ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ ಚರ್ಚೆ ನಡೀತಿದೆ. ತೆರೆಮೇಲೆ ಯಾರು ದಾದಾ ಆಗಿ ನಟಿಸ್ತಾರೆ ಎನ್ನುವ ಬಗ್ಗೆ ಕುತೂಹಲ ಇತ್ತು. ರಣಬೀರ್ ಕಪೂರ್ ಹೆಸರು ದೊಡ್ಡದಾಗಿ ಹೇಳಿ ಬರುತ್ತಿತ್ತು. ಸಾಕಷ್ಟು ಬಾರಿ ಈ ಬಗ್ಗೆ ಚರ್ಚೆ ನಡೆದರೂ ಯಾವುದು ಫೈನಲ್ ಆಗಿರಲಿಲ್ಲ. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ರಣಬೀರ್ ಬ್ಯಾಟ್ ಹಿಡಿದು ಗಂಗೂಲಿ ರೀತಿ ಕ್ರೀಡಾಂಗಣದಲ್ಲಿ ಆರ್ಭಟಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಸಹಜವಾಗಿಯೇ ಈ ವಿಚಾರ ಗಂಗೂಲಿ ಹಾಗೂ ರಣಬೀರ್ ಅಭಿಮಾನಿಗಳಿಗೆ ಸಂತಸ ತಂದಿದೆ.

ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ ಭಾರೀ ಕುತೂಹಲ ಇದೆ. ರಣಬೀರ್ ಕಾಲ್‌ಶೀಟ್ ಸಿಗದೇ ಇಷ್ಟು ದಿನ ಸಿನಿಮಾ ತಡವಾಗುತ್ತಿತ್ತು. ಈಗ ಕಾಲ ಕೂಡಿ ಬರುತ್ತಿದ್ದು ಆದಷ್ಟು ಬೇಗ ಸಿನಿಮಾ ಘೋಷಣೆ ಆಗಲಿದೆ ಎನ್ನುವ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ಗಂಗೂಲಿ ಅವರಿಂದ ಸಂಪೂರ್ಣ ಮಾಹಿತಿ ಪಡೆಯಲು ನಿರ್ಮಾಪಕರು, ನಿರ್ದೇಶಕರ ಜೊತೆ ಶೀಘ್ರದಲ್ಲೇ ರಣಬೀರ್ ಕೊಲ್ಕತ್ತಾಗೆ ಪಯಣ ಬೆಳೆಸಲಿದ್ದಾರೆ.

ಈಡನ್ ಗಾರ್ಡನ್ ಮೈದಾನ, ಗಂಗೂಲಿ ಮನೆಗೆ ಭೇಟಿ ಕೊಟ್ಟು ಸಿನಿಮಾಗೆ ಬೇಕಾದ ಮಾಹಿತಿಯನ್ನು ಕಲೆ ಹಾಕಲು ತೀರ್ಮಾನಿಸಿದ್ದಾರಂತೆ. ಗಂಗೂಲಿ ಜೀವನದಲ್ಲಿ ನಡೆದ ಸಾಕಷ್ಟು ವಿಚಾರಗಳನ್ನು ಸಂಗ್ರಹಿಸಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಎಡಗೈ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ಟೆಸ್ಟ್ 113 ಹಾಗೂ 311 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಟೀಂ ಇಂಡಿಯಾ ನಾಯಕನಾಗಿ 2003ರಲ್ಲಿ ತಂಡವನ್ನು ವರ್ಲ್ಡ್ ಕಪ್ ಫೈನಲ್‌ವರೆಗೂ ಕೊಂಡೊಯ್ದಿದ್ದರು. ಇನ್ನು ಮ್ಯಾಚ್‌ ಫಿಕ್ಸಿಂಗ್‌ ಹಗರಣದಿಂದ ಭಾರತ ಕ್ರಿಕೆಟ್ ತಂಡ ತನ್ನ ವರ್ಚಸ್ಸನ್ನು ಕಳೆದುಕೊಂಡಿದ್ದಾಗ ನಾಯಕನಾಗಿ ದಾದಾ ತಂಡವನ್ನು ಮುನ್ನಡೆಸಿ ಗೆದ್ದಿದ್ದರು.

ಇನ್ನು ಗಂಗೂಲಿ ಬಯೋಪಿಕ್‌ ಬಗ್ಗೆ ಮಾತನಾಡಿದ್ದ ಪತ್ನಿ ಡೋನಾ ಗಂಗೂಲಿ, ಸಿನಿಮಾ ಬಗ್ಗೆ ನಿರ್ದೇಶಕರು, ನಿರ್ಮಾಪಕರು ಮಾತನಾಡಬೇಕು ಎಂದಿದ್ದರು. ಇನ್ನು ಗಂಗೂಲಿ ಪಾತ್ರದಲ್ಲಿ ಯಾರು ನಟಿಸಬೇಕು ಎನ್ನುವ ಪ್ರಶ್ನೆಗೆ “ನನ್ನ ಫೇವರೆಟ್ ಯಾರು ಎಂದು ಹೇಳಬೇಕು ಅಂದರೆ ಅಮಿತಾಬ್ ಬಚ್ಚನ್ ಅಥವಾ ಶಾರುಖ್ ಖಾನ್ ಎಂದು ಹೇಳುತ್ತೇನೆ. ಆದರೆ ವಯಸ್ಸಿನ ವಿಚಾರ ಬಂದಾಗ ಅವರು ಈ ಸಿನಿಮಾ ಮಾಡಲು ಸಾಧ್ಯವಿಲ್ಲ. ಸಿನಿಮಾದಲ್ಲಿ 24 ವರ್ಷದ ಗಂಗೂಲಿಯಾಗಿಗೂ ಅವರು ಕಾಣಿಸಿಕೊಳ್ಳಬೇಕಾಗುತ್ತದೆ. ಬಹಳ ಹೊತ್ತು ಸಿನಿಮಾ ಈ ವಯಸ್ಸಿನ ಗಂಗೂಲಿ ಸುತ್ತಾ ಸುತ್ತುತ್ತದೆ. ಹಾಗಾಗಿ ಆ ವಯಸ್ಸಿಗೆ ತಕ್ಕ ನಟನನ್ನು ಆರಿಸಿಕೊಳ್ಳಬೇಕು” ಎಂದು ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ : Ullas School of Cinemas : ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ’ ಅದ್ದೂರಿ ಚಾಲನೆ : ಶುಭ ಹಾರೈಸಿದ ಗಣ್ಯರು

ಇದನ್ನೂ ಓದಿ : ವೀರೇಶ್‌ ಸಿನಿಮಂದಿರದಲ್ಲಿ ಮಾರ್ಟಿನ್‌ ಟೀಸರ್‌ ರಿಲೀಸ್‌ : ಭರ್ಜರಿ ರೆಸ್ಪಾನ್ಸ್‌ ನೀಡಿದ ನಟ ಧ್ರುವ ಸರ್ಜಾ ಫ್ಯಾನ್ಸ್‌

ಗಂಗೂಲಿ ಪಾತ್ರಕ್ಕೆ ರಣ್‌ಬೀರ್ ಕಪೂರ್ ಆದರೆ ನ್ಯಾಯ ಒದಗಿಸುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ‘ಸಂಜು’ ಸಿನಿಮಾದಲ್ಲಿ ಸಂಜಯ್ ದತ್ ಪಾತ್ರದಲ್ಲಿ ರಣ್‌ಬೀರ್ ಮೋಡಿ ಮಾಡಿದ್ದರು. ಸ್ವತಃ ಸಂಜಬಾಬಾ, ರಣಬೀರ್ ನಟನೆಗೆ ಫಿದಾ ಆಗಿದ್ದರು. ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎಲ್ಲಾ ಬಯೋಪಿಕ್ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಗಂಗೂಲಿ ಬಯೋಪಿಕ್ ಎಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಶೀಘ್ರದಲ್ಲೇ ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ.

Hero found for Sourav Ganguly biopic: Movie announcement soon

Comments are closed.