ದಿನಭವಿಷ್ಯ 21 ನವೆಂಬರ್ 2023 : ಶತಭಿಷಾ ನಕ್ಷತ್ರದ ಪ್ರಭಾವ, ಮಿಥುನ, ವೃಷಭ ಸಿಂಹರಾಶಿಯರಿಗೆ ಲಾಭ

Horoscope Today : ದಿನಭವಿಷ್ಯ 21 ನವೆಂಬರ್ 2023 ಮಂಗಳವಾರ. ದ್ವಾದಶ ರಾಶಿಗಳ ಮೇಲೆ ಶತಭಿಷಾ ನಕ್ಷತ್ರದ ಪ್ರಭಾವ ಇರುತ್ತದೆ. ಶುಭಯೋಗದಿಂದ ವೃಷಭ, ಮಿಥುನ, ಸಿಂಹ ರಾಶಿಯವರು ವ್ಯವಹಾರ ಕ್ಷೇತ್ರದಲ್ಲಿಂದು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.

Horoscope Today : ದಿನಭವಿಷ್ಯ 21 ನವೆಂಬರ್ 2023 ಮಂಗಳವಾರ. ದ್ವಾದಶ ರಾಶಿಗಳ ಮೇಲೆ ಶತಭಿಷಾ ನಕ್ಷತ್ರದ ಪ್ರಭಾವ ಇರುತ್ತದೆ. ಶುಭಯೋಗದಿಂದ ವೃಷಭ, ಮಿಥುನ, ಸಿಂಹ ರಾಶಿಯವರು ವ್ಯವಹಾರ ಕ್ಷೇತ್ರದಲ್ಲಿಂದು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯ ವರೆಗೆ ಒಟ್ಟು ೧೨ ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ( Today Astrology) ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಮೇಲಾಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಯಾವುದೇ ಕಾರಣಕ್ಕೂ ಯಾರ ಜೊತೆಗೂ ವಾದ ಮಾಡಬೇಡಿ. ಸ್ನೇಹಿತರೊಂದಿಗೆ ದೀರ್ಘ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ.

ವೃಷಭ ರಾಶಿ ದಿನಭವಿಷ್ಯ
ಸ್ನೇಹಿತರ ಸಹಕಾರಿಂದ ಆರ್ಥಿಕ ಸಹಕಾರ ಪಡೆಯಲಿದ್ದಾರೆ. ಸಾಮಾಜಿಕ ಯೋಜನೆಗಳು ಇಂದು ಹೆಚ್ಚು ಲಾಭವನ್ನು ತಂದುಕೊಡಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲಕರ. ವ್ಯವಹಾರ ಕ್ಷೇತ್ರದಲ್ಲಿ ಆರ್ಥಿಕ ಅನುಕೂಲ.

ಮಿಥುನ ರಾಶಿ ದಿನಭವಿಷ್ಯ
ವೈವಾಹಿಕ ಜೀವನದಲ್ಲಿನ ಘರ್ಷಣೆಗಳು ಇಂದು ಕೊನೆಗೊಳ್ಳಲಿದೆ. ದೈನಂದಿನ ಖರ್ಚುಗಳ ಮೇಲೆ ಕಡಿವಾಣ ಹಾಕಿ. ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯಲಿದೆ. ಕುಟುಂಬದವರೊಂದಿಗೆ ಸಂತೋಷದ ಕ್ಷಣ ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರೆಯಲಿದೆ.

ಕರ್ಕಾಟಕ ರಾಶಿ ದಿನಭವಿಷ್ಯ
ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆಯನ್ನು ತಪ್ಪಿಸಿ, ಸಾಮಾಜಿಕ ಕಾರ್ಯಗಳಲ್ಲಿ ಕೆಲಸ ಮಾಡುವವರನ್ನು ಜನರು ಮೆಚ್ಚುತ್ತಾರೆ. ಉದ್ಯೋಗಿಗಳು ಇಂದು ಸಂತೋಷವಾಗಿ ಇರುತ್ತಾರೆ. ಅನೇಕ ವಿಚಾರಗಳಲ್ಲಿ ಸ್ನೇಹಿತರು ಹಾಗೂ ಜನರ ಬೆಂಬಲ ಪಡೆಯುತ್ತೀರಿ.

ಸಿಂಹ ರಾಶಿ ದಿನಭವಿಷ್ಯ
ಉದ್ಯೋಗ ಕ್ಷೇತ್ರದಲ್ಲಿ ಹಲವು ಶುಭ ಸಮಾಚಾರಗಳನ್ನು ಕೇಳುತ್ತೀರಿ. ಯಶಸ್ಸನ್ನು ಸಾಧಿಸಲು ನೀವು ಹರಸಾಹ ಪಡಬೇಕಾಗುತ್ತದೆ. ಯಾವುದೇ ಅಪರಿಚಿತ ವ್ಯಕ್ತಿಗಳ ಜೊತೆಗೆ ವಹಿವಾಟು ಮಾಡಬೇಡಿ. ಉದ್ಯೋಗಿಗಳಿಗೆ ಭಡ್ತಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : 200 MP ಕ್ಯಾಮೆರಾ, 8GB RAM… ಅಬ್ಬಬ್ಬಾ Motorola Edge 30 Ultra 5G ಫೀಚರ್ಸ್‌ ನೋಡಿದ್ರೆ ಸುಸ್ತಾಗೋದು ಗ್ಯಾರಂಟಿ

ಕನ್ಯಾ ರಾಶಿ ದಿನಭವಿಷ್ಯ
ಯಾವುದೇ ಸಮಸ್ಯೆಯು ದೀರ್ಘ ಕಾಲದ ವರೆಗೆ ಮುಂದುವರಿದ್ರೆ ಕುಟುಂಬ ಸದಸ್ಯರ ಸಹಕಾರದಿಂದ ಬಗೆ ಹರಿಸಿಕೊಳ್ಳಿ. ನಕರಾತ್ಮಕ ಆಲೋಚನೆಗಳನ್ನು ಮನಸಿನಿಂದ ದೂರ ಮಾಡಿ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಶಿಕ್ಷಕರಿಂದ ವಿದ್ಯಾರ್ಥಿಗಳು ಬೆಂಬಲವನ್ನು ಪಡೆಯುತ್ತಾರೆ.

Horoscope Today 21 November 2023 Zordic Sign
Image Credit to Original Source

ತುಲಾ ರಾಶಿ ದಿನಭವಿಷ್ಯ
ಕುಟುಂಬದ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಿಸಬಹುದು. ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ನೀವು ಯಾವುದೇ ಕಾರಣಕ್ಕೂ ತಾಳ್ಮೆಯಿಂದ ಇರಬೇಕು. ಇತರರಿಗೆ ಸಹಾಯ ಮಾಡುವುದರಲ್ಲಿ ನೀವಿಂದು ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ದೂರ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ ದಿನಭವಿಷ್ಯ
ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ. ಸಹೋದ್ಯೋಗಿಗಳ ಜೊತೆಗೆ ನೀವು ಇಂದು ಹೆಚ್ಚು ಜಾಗರೂಕರಾಗಿ ಇರಬೇಕು. ನಿಮ್ಮ ಕೆಲಸವನ್ನು ಹಾಳು ಮಾಡಲು ಅವರು ಪ್ರಯತ್ನಿಸುತ್ತಾರೆ. ನಿಮಗಾಗಿ ಇಂದು ಹೆಚ್ಚಿನ ಸಮಯವನ್ನು ಮೀಸಲಿಡಿ. ಆಸ್ತಿ ಖರೀದಿಸುವ ನಿಮ್ಮ ಆಸೆ ಇಂದು ಪೂರೈಸಲಿದೆ.

ಇದನ್ನೂ ಓದಿ : 11 ಪಂದ್ಯ 3 ಶತಕ, 765 ರನ್ : ವಿಶ್ವಕಪ್‌ ಸೋತರು ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ

ಧನಸ್ಸುರಾಶಿ ದಿನಭವಿಷ್ಯ
ಬಹುಕಾಲದಿಂದಲೂ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಹಣಕಾಸಿನ ವ್ಯವಹಾರ ಬಲಗೊಳ್ಳುತ್ತದೆ. ಯಾವುದೇ ಕೆಲಸಗಳಲ್ಲಿಯೂ ನಿರ್ಲಕ್ಷ್ಯ ಬೇಡ. ಸಂಜೆಯ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುರಿಂದ ಮಾನಸಿಕ ನೆಮ್ಮದಿ.

ಮಕರ ರಾಶಿ ದಿನಭವಿಷ್ಯ
ಸಂಬಂಧಿಕರಿಂದ ನಿಮಗೆ ಹಣಕಾಸಿನ ಸಹಕಾರ ದೊರೆಯಲಿದೆ. ವಿದೇಶಗಳಿಗೆ ಸಂಬಂಧಿಸಿದಮತೆ ವ್ಯಾಪಾರ ಮಾಡುವವರು ಶುಭ ಸುದ್ದಿಯನ್ನು ಕೇಳಲಿದ್ದೀರಿ. ಸಂಗಾತಿಯ ಜೊತೆಗೆ ಶಾಪಿಂಗ್‌ ಮಾಡುವ ವೇಳೆಯಲ್ಲಿ ಸಾಕಷ್ಟು ಜಾಗರೂಕರಾಗಿ ಇರಬೇಕು. ಪೋಷಕರ ಜೊತೆಗೆ ಇರುವ ಯಾವುದೇ ಭಿನ್ನಾಭಿಪ್ರಾಯಗಳು ದೂರವಾಗಲಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ 3 ದಿನ ವಿದ್ಯುತ್‌ ಕಡಿತ : ಯಾವ ಪ್ರದೇಶದಲ್ಲಿ ಯಾವ ದಿನ ವಿದ್ಯುತ್‌ ಇರಲ್ಲ, ಇಲ್ಲಿದೆ ಸಂಪೂರ್ಣ ಮಾಹಿತಿ

ಕುಂಭ ರಾಶಿ ದಿನಭವಿಷ್ಯ
ಭೂಮಿ ಅಥವಾ ವಾಹನ ಖರೀದಿಸುವ ಸಾಧ್ಯತೆಯಿದೆ. ವ್ಯಾಪಾರಿಗಳು ಯಾರೊಂದಿಗೂ ಪಾಲುದಾರರಾಗುವ ಮೊದಲು ಅವರ ಪೂರ್ವಾಪರ ಯೋಚಿಸುವುದು ಒಳಿತು. ಕುಟುಂಬ ಸದಸ್ಯರಿಂದಲೂ ಸಲಹೆ ಪಡೆಯುವುದು ಹೆಚ್ಚು ಸೂಕ್ತ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಾರೆ. ಮಕ್ಕಳಿಂದ ನಕರಾತ್ಮಕ ಸುದ್ದಿಯನ್ನು ಕೇಳುವಿರಿ.

ಮೀನ ರಾಶಿ ದಿನಭವಿಷ್ಯ
ವಿರಾಮವಿಲ್ಲದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ಹವಾಮಾನ ಬದಲಾವಣೆಯಿಂದ ಹಲವು ಆರೋಗ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಹೆಚ್ಚು ಸೂಕ್ತ.

Horoscope Today 21 November 2023 Zordic Sign

Comments are closed.