ICC World Test Championship Final : “ಟೆಸ್ಟ್ ವಿಶ್ವಕಪ್ ಫೈನಲ್”ಗೆ ಟೀಮ್ ಇಂಡಿಯಾ ಪ್ರಕಟ : ಅಜಿಂಕ್ಯ ರಹಾನೆ ಕಂಬ್ಯಾಕ್, ಸೂರ್ಯ ಔಟ್

ಬೆಂಗಳೂರು : ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final 2023) ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ (Ajinky Rahane comeback) ತಂಡಕ್ಕೆ ಮರಳಿದ್ದಾರೆ.

ರಹಾನೆ ಕಂಬ್ಯಾಕ್ ಮಾಡಿರುವ ಕಾರಣ ಮುಂಬೈನ ಮತ್ತೊಬ್ಬ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. 2022ರ ಜನವರಿಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ, ಕಳೆದ ರಣಜಿ ಟ್ರೋಫಿಯಲ್ಲಿ 7 ಪಂದ್ಯಗಳಿಂದ ಒಂದು ದ್ವಿಶತಕ ಸಹಿತ 600ಕ್ಕೂ ಹೆಚ್ಚು ರನ್ ಗಳಿಸಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಐಪಿಎಲ್’ನಲ್ಲೂ ಮಿಂಚುತ್ತಿರುವ ರಹಾನೆಯವರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.

ಮುಂಬೈನ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಟೆಸ್ಟ್ ತಂಡಕ್ಕೆ ಮರಳಿದ್ದು, ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಆಡಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಜೂನ್ 7ರಂದು ಲಂಡನ್’ನಲ್ಲಿರುವ ಓವಲ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

2021ರ WTC ಟೂರ್ನಿಯಲ್ಲೂ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ಇಂಗ್ಲೆಂಡ್’ನ ಸೌಥಾಂಪ್ಟನ್’ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಟೆಸ್ಟ್ ವಿಶ್ವ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ : Ajinkya Rahane : ಧೋನಿ ಗರಡಿಯಲ್ಲಿ ಅರಳಿದ ರಹಾನೆ 2.0; ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ “ಟೆಸ್ಟ್ ಆಟಗಾರ”

ಇದನ್ನೂ ಓದಿ : MS Dhoni: ಐಪಿಎಲ್‌ನಲ್ಲಿ “ಎಲ್ಲಾ” ಮೈದಾನಗಳು “ಯೆಲ್ಲೋ” ಆಗಿ ಬದಲಾಗುತ್ತಿರುವುದನ್ನು ಕಂಡಿರಾ..?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ (ICC World Test Championship Final):
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ರವೀಂದ್ರ ಜಡೇಜ, ಜೈದೇವ್ ಉನಾದ್ಕಟ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್.

ಇದನ್ನೂ ಓದಿ : April 23 Phobia for Virat Kohli : ಕಿಂಗ್ ಕೊಹ್ಲಿಗೆ “ಏಪ್ರಿಲ್ 23” ಫೋಬಿಯಾ : ಮೂರು ವರ್ಷ, ಮೂರು ಗೋಲ್ಡನ್ ಡಕ್

ICC World Test Championship Final: Team India announced for “Test World Cup Final”: Ajinkya Rahane comeback, Suriya out

Comments are closed.