ಆಸ್ಟ್ರೇಲಿಯಾ ವಿರುದ್ದದ ಸರಣಿ : ವಿರಾಟ್‌ ಕೊಹ್ಲಿ, ಪಾಂಡ್ಯ, ರೋಹಿತ್, ಬುಮ್ರಾಗೆ ವಿಶ್ರಾಂತಿ !

ಭಾರತ ತಂಡ ಆಸ್ಟ್ರೇಲಿಯಾ (IND VS AUS ODI) ಬಿಸಿಸಿಐ ಇನ್ನಷ್ಟೇ  ಟೀಂ ಇಂಡಿಯಾ ತಂಡವನ್ನು (indian Cricket team)  ಫೈನಲ್‌ ಮಾಡಬೇಕಾಗಿದೆ. ವಿರಾಟ್‌ ಕೊಹ್ಲಿ (Virat Kohli), ಹಾರ್ದಿಕ್ ಪಾಂಡ್ಯ (Hardik Pandya), ರೋಹಿತ್‌ ಶರ್ಮಾ (Rohit Sharma), ಜಸ್ಪ್ರೀತ್ ಬುಮ್ರಾ‌ (Jasprit Bumrah) ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಏಕದಿನ ವಿಶ್ವಕಪ್‌ (ODI World Cup 2023) ಆರಂಭಕ್ಕೂ ಮೊದಲು ಭಾರತ ತಂಡ ಆಸ್ಟ್ರೇಲಿಯಾ (IND VS AUS ODI) ವಿರುದ್ದದ ಸರಣಿಯನ್ನು ಆಡಲಿದೆ. ಬಿಸಿಸಿಐ (BCCI) ಇನ್ನಷ್ಟೇ  ಭಾರತ ಕ್ರಿಕೆಟ್ ತಂಡವನ್ನು (indian Cricket team)  ಫೈನಲ್‌ ಮಾಡಬೇಕಾಗಿದೆ. ಖ್ಯಾತ ಆಟಗಾರರಾದ ವಿರಾಟ್‌ ಕೊಹ್ಲಿ (Virat Kohli), ಹಾರ್ದಿಕ್ ಪಾಂಡ್ಯ (Hardik Pandya), ರೋಹಿತ್‌ ಶರ್ಮಾ (Rohit Sharma), ಜಸ್ಪ್ರೀತ್ ಬುಮ್ರಾ‌ (Jasprit Bumrah) ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ವಿಶ್ವಕಪ್ 2023 ರ ಆರಂಭಕ್ಕೆ ಮೊದಲ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ವಿಶ್ವಕಪ್‌ ಪಂದ್ಯಾವಳಿಗೆ ಸಹಕಾರಿಯಾಗಲಿದೆ. ಇದೀಗ ಬಿಸಿಸಿಐ ವಿಶ್ವಕಪ್‌ ಪಂದ್ಯಾವಳಿಯನ್ನು ಗಮನದಲ್ಲಿ ಇಟ್ಟುಕೊಂಡು ಖ್ಯಾತ ಆಟಗಾರರಿಗೆ ರೆಸ್ಟ್‌ ನೀಡುವ ಸಾಧ್ಯತೆಯಿದೆ.

ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಜಸ್ಪ್ರೀತ್‌ ಬೂಮ್ರಾ ಹಾಗೂ ನಾಯಕ ರೋಹಿತ್‌ ಶರ್ಮಾ ಏಷ್ಯಾಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ. ಟೀಂ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಸಲಹೆಯ ಮೇರೆಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಆದರೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

IND VS AUS ODI Series Virat Kohli Rohit Bumrah Pandya To Rest Virat Kohli
Image Credit : Virat Kohli/Twitter

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಜು ಸ್ಯಾಮ್ಸನ್‌ ನಿವೃತ್ತಿ ! ವಿಶೇಷ ಪೋಟೋ ವೈರಲ್‌

ಭಾರತದಲ್ಲಿಯೇ ಈ ಬಾರಿ ವಿಶ್ವಕಪ್‌ ಪಂದ್ಯಾವಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಸರಣಿ ಎರಡೂ ತಂಡಗಳಿಗೆ ನೆರವಾಗಲಿದೆ. ಸದ್ಯ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನೇ ಭಾರತ ವಿರುದ್ದದ ಸರಣಿಗೆ ಆಯ್ಕೆ ಮಾಡಿದೆ. ಇನ್ನೊಂದೆಡೆಯಲ್ಲಿ ಭಾರತ ಖ್ಯಾತ ಆಟಗಾರರಿಗೆ ರೆಸ್ಟ್‌ ನೀಡಿದ್ರೂ ಕೂಡ ಬಲಾಢ್ಯ ಆಟಗಾರರನ್ನೇ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ : ಏಷ್ಯಾಕಪ್‌ನಲ್ಲಿ ಮೊಹಮ್ಮದ್‌ ಸಿರಾಜ್‌‌ ವಿಶಿಷ್ಟ ದಾಖಲೆ

ಭಾರತ ತಂಡ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಇಂಗ್ಲೆಂಡ್‌ ಮತ್ತು ನೆದರ್‌ಲ್ಯಾಂಡ್‌ ವಿರುದ್ದ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 8 ರಿಂದ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಿದ್ದು, ಭಾರತ ತಂಡ ಈಗಾಗಲೇ ಉತ್ತಮ ತಂಡವನ್ನು ಆಯ್ಕೆ ಮಾಡಿದೆ.

IND VS AUS ODI Series Virat Kohli Rohit Bumrah Pandya To Rest Rohit Sharma pic
Image Credit : Rohit Sharma/Twitter

ರೋಹಿತ್‌ ಶರ್ಮಾ ಅವರಿಗೆ ವಿಶ್ರಾಂತಿಯನ್ನು ನೀಡಿದ್ರೆ ಇಶಾನ್‌ ಕಿಶನ್‌ ಅವರ ಜೊತೆಗೆ ಶುಭಮನ್‌ ಗಿಲ್‌ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಈಗಾಗಲೇ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ದ ಪಂದ್ಯದಲ್ಲಿ ಇಶಾನ್‌ ಕಿಶನ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ.

IND VS AUS ODI Series Virat Kohli Rohit Bumrah Pandya To Rest Hardik Pandya Pic
Image Credit : Hardik Pandya/ Twitter

ಇದನ್ನೂ ಓದಿ : ಬೆನ್‌ಸ್ಟೋಕ್ಸ್‌ ನಿವೃತ್ತಿ ವಾಪಾಸ್‌ ಬೆನ್ನಲ್ಲೇ ದಾಖಲೆಯ ಶತಕ : 6,6,6,6,6,6,6,6,6 ಸಿಕ್ಸರ್ 124 ಎಸೆತಕ್ಕೆ 182 ರನ್‌

ಇನ್ನು ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಿದ್ರೆ ಶ್ರೇಯಸ್‌ ಅಯ್ಯರ್‌ ಅಥವಾ ಕೆಎಲ್‌ ರಾಹುಲ್‌ ಒಂದನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿ ದ್ದಾರೆ. ಆದ್ರೆ ಶ್ರೇಯಸ್‌ ಅಯ್ಯರ್‌ ಫಿಟ್ನೆಸ್‌ ಬಗ್ಗೆ ಯಾವುದೇ ಅಪ್ಡೇಟ್ಸ್‌ ಬಂದಿಲ್ಲ. ಜೊತೆಗೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿದ್ರೆ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್‌ ಠಾಕೂರ್‌ ಆಡುವುದು ಫಕ್ಕಾ.

IND VS AUS ODI Series Virat Kohli Rohit Bumrah Pandya To Rest Jasprit Bumrah
Image Credit : Jasprit Bumrah/ Instagram

ಜಸ್ಪ್ರೀತ್‌ ಬೂಮ್ರಾ ವಿಶ್ರಾಂತಿ ನೀಡಿದ್ರೆ, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ವಾಷಿಂಗ್ಟನ್‌ ಸುಂದರ್‌, ಕುಲದೀಪ್‌ ಯಾದವ್‌  ಅವರು ಸ್ಥಾನ ಪಡೆಯಲಿದ್ದಾರೆ. ಜಸ್ಪ್ರೀತ್‌ ಬೂಮ್ರಾಗೆ ವಿಶ್ರಾಂತಿ ಸಿಕ್ಕಿದ್ರೆ ಮೊಹಮ್ಮದ್‌ ಸೆಮಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

IND VS AUS ODI Series Virat Kohli Rohit Bumrah Pandya To Rest

Comments are closed.