7ನೇ ವೇತನ ಆಯೋಗದಿಂದ ಗುಡ್‌ನ್ಯೂಸ್‌ : ನವರಾತ್ರಿಯ ಬೆನ್ನಲ್ಲೇ ಡಿಎ ಹೆಚ್ಚಳ ?

ಕೇಂದ್ರ ಸರಕಾರಿ ನೌಕರರು (Central Government Employees)  ಕೇಂದ್ರ ಸರಕಾರದಿಂದ (Central Government) ಗುಡ್‌ನ್ಯೂಸ್‌ಗಾಗಿ ಕಾಯುತ್ತಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಕೇಂದ್ರ ಸರಕಾರ ಯಾವುದೇ ಸಮಯ ದಲ್ಲಿಯೂ ಕೇಂದ್ರ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ (7th Pay Commission ) ವರದಿಯಂತೆ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ

ನವದೆಹಲಿ : ದೇಶದಲ್ಲೀಗ ಸಾಲು ಸಾಲು ಹಬ್ಬಗಳ ಆಗಮನವಾಗುತ್ತಿದೆ. ಕೇಂದ್ರ ಸರಕಾರಿ ನೌಕರರು (Central Government Employees)  ಕೇಂದ್ರ ಸರಕಾರದಿಂದ (Central Government) ಗುಡ್‌ನ್ಯೂಸ್‌ಗಾಗಿ ಕಾಯುತ್ತಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಕೇಂದ್ರ ಸರಕಾರ ಯಾವುದೇ ಸಮಯ ದಲ್ಲಿಯೂ ಕೇಂದ್ರ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ (7th Pay Commission ) ವರದಿಯಂತೆ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಲಭ್ಯವಿರುವ ಮಾಹಿತಿಯ ಪ್ರಕಾರ, ನವರಾತ್ರಿಯ ನಂತರ ಡಿಎ ಹೆಚ್ಚಳ ಖಚಿತ ಎನ್ನಲಾಗುತ್ತಿದೆ.

ಕೇಂದ್ರ ಸರಕಾರಿ ನೌಕರರಿಗೆ ಜುಲೈ 1, 2023 ರಿಂದ ಜಾರಿಗೆ ಬರುವಂತೆ ಡಿಎ ಹೆಚ್ಚಳವಾಗಬೇಕಾಗಿತ್ತು. ಆದ್ರೆ ಈ ಬಾರಿ ಶೇ.3 ರಷ್ಟಿರುವ ಡಿಎ ಹೆಚ್ಚಳವು ಶೇ.45 ಕ್ಕೆ ತಲುಪುವ ಸಾಧ್ಯತೆಯಿದೆ. ಇನ್ನು ಈ ವಾರದ ಆರಂಭದಲ್ಲಿ ಹಿಮಾಚಲ ಪ್ರದೇಶ (Himachala Pradesh Government) ಸರಕಾರವು ಜನವರಿ 1, 2022 ರಿಂದ ಅರಣ್ಯ ನಿಗಮದ ಉದ್ಯೋಗಿಗಳಿಗೆ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಿದೆ.

ಇದನ್ನೂ ಓದಿ : ಪ್ರಧಾನಿ ವಿಶ್ವಕರ್ಮ ಯೋಜನೆ : ಕುಶಲಕರ್ಮಿಗಳಿಗೆ ಸಿಗುತ್ತೆ 2 ಲಕ್ಷರೂ. ಸಬ್ಸಿಡಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ?

ಇನ್ನು ಕಾರ್ಮಿಕ ಬ್ಯೂರೋ ಪ್ರತೀ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಾಂಕದ ಆಧಾರದ ಮೇಲೆ ತುಟ್ಟಿಭತ್ಯೆ ಯನ್ನು ನಿರ್ಧಾರ ಮಾಡಲಾಗುತ್ತದೆ. ಜುಲೈ 2023 ರ ಅಖಿಲ ಭಾರತ CPI-IW 3.3 ಪಾಯಿಂಟ್‌ಗಳಿಗೆ 139.7 ಕ್ಕೆ ಏರಿಕೆ ಆಗಿದೆ.

Good news from 7th Pay Commission DA increase after Navaratri
Image Credit To Original Source

ಈ ಬಾರಿ ಕೇಂದ್ರ ಸರಕಾರ ಶೇ.3ರಷ್ಟು ಡಿಎ ಹೆಚ್ಚಳ ಮಾಡಿದ್ರೆ ಕೇಂದ್ರ ಸರಕಾರ ನೌಕರರ ವೇತನದಲ್ಲಿ ಬಾರೀ ಏರಿಕೆಯಾಗಲಿದೆ. ಒಂದೊಮ್ಮೆ ಉದ್ಯೋಗಿಗಳ ವೇತನವು 50,000 ರೂ ಆಗಿದ್ದರೆ. ಅವರ ಮೂಲ ವೇತನವು 15,000 ರೂ ಇದ್ದರೆ. ಅವರು ರೂ 6,300 ತುಟ್ಟಿ ಭತ್ಯೆಯಾಗಿ ಪಡೆಯುತ್ತಿದ್ದಾರೆ.

ಒಂದೊಮ್ಮೆ ನಿರೀಕ್ಷೆಯಂತೆ ಶೇ.3ರಷ್ಟು ಹೆಚ್ಚಳವಾದ್ರೆ, ಡಿಎ ತಿಂಗಳಿಗೆ 6,750 ರೂ.ಗೆ ಏರಿಕೆಯಾಗಲಿದೆ. ಪ್ರಸ್ತುತ ಪಡೆಯುತ್ತಿರುವ ವೇತನಕ್ಕೆ ಹೋಲಿಸಿದ್ರೆ 450 ರೂ. ಏರಿಕೆಯಾಗಲಿದೆ. ಸರಕಾರಿ ನೌಕರರಿಗೆ ಡಿಎ ಹೆಚ್ಚಳ ಮಾಡಿದ್ರೆ ನಿವೃತ್ತ ನೌಕರರಿಗೆ ( ಪಿಂಚಣಿದಾರರಿಗೆ) ಡಿಎಆರ್‌ ನೀಡಲಾಗುತ್ತದೆ.

ಇದನ್ನೂ ಓದಿ : ಮದುವೆಯಾದ ಎಲ್ಲಾ ದಂಪತಿಗಳಿಗೆ ಸರಕಾರ ಕೊಡುತ್ತೆ 10 ಸಾವಿರ ರೂ. : ಈ ಯೋಜನೆ ನಿಮಗೆ ಗೊತ್ತಾ ?

ಡಿಎ (DA) ಮತ್ತು ಡಿಎಆರ್‌ (DAR) ಅನ್ನು ವಾರ್ಷಿಕವಾಗಿ ಎರಡು ಬಾರಿ ಹೆಚ್ಚಳ ಮಾಡಲಾಗುತ್ತದೆ. ಜನವರಿ ಮತ್ತು ಜುಲೈ ಸಾಮಾನ್ಯವಾಗಿ ಡಿಎ ಹೆಚ್ಚಳವಾಗುತ್ತಿದ್ದು, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರು ಶೇ. 42ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

ಕೇಂದ್ರ ಸರಕಾರವು ಕಳೆದ ಮಾರ್ಚ್ 2023 ರಲ್ಲಿ ಡಿಎಯನ್ನು ಶೇಕಡಾ 4 ರಿಂದ 42 ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಹಣದುಬ್ಬರದ ಪ್ರಮಾಣವನ್ನು ಗಮನಿಸಿದ್ರೆ ವಿವಿಧ ವರದಿಗಳ ಪ್ರಕಾರ ಡಿಎ ಶೇ3ರಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Good news from 7th Pay Commission DA increase after Navaratri
Image Credit To Original Source

ಇದನ್ನೂ ಓದಿ : ಗೃಹ ಸಾಲ ಪಡೆದವರಿಗೆ ಗುಡ್‌ನ್ಯೂಸ್ : ಆರ್‌ಬಿಐ ಹೊಸ ರೂಲ್ಸ್‌, 50 ಲಕ್ಷರೂ. ಗೃಹ ಸಾಲಕ್ಕೆ33 ಲಕ್ಷ ರೂ. ಬಡ್ಡಿ ಉಳಿತಾಯ

ತುಟ್ಟಿ ಭತ್ಯೆಯು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (Pension) ಹೆಚ್ಚುತ್ತಿರುವ ಹಣದುಬ್ಬರವನ್ನು ಪರಿಹರಿಸಲು ಸಹಾಯ ಮಾಡಲು 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ನೀಡಲಾಗುವ ಅನುದಾನವಾಗಿದೆ. ಈ ಅನುದಾನವು ಸರಕು ಮತ್ತು ಸೇವೆಗಳ ಏರುತ್ತಿರುವ ಬೆಲೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

Good news from 7th Pay Commission DA increase after Navaratri Festival

Comments are closed.