ರವೀಂದ್ರ ಜಡೇಜಾ ಬದಲು ಟೀಂ ಇಂಡಿಯಾ : ಯಾರು ಈ ಆಲ್‌ರೌಂಡರ್ ಸೌರಭ್‌ ಕುಮಾರ್‌ ?

IND vs ENG 2nd Test : ‌ ರವೀಂದ್ರ ಜಡೇಜಾ (Ravindra Jadeja) ಬದಲು ಸ್ಟಾರ್‌ ಆಲ್‌ರೌಂಡರ್‌ ಸೌರಭ್‌ ಕುಮಾರ್‌ (Saurabh kumar) ಅವರನ್ನು ಟೀಂ ಇಂಡಿಯಾ ತಂಡಕ್ಕೆ ಸೇರ್ಪಡೆಗೊಳಿಸಿದೆ. ಅಷ್ಟಕ್ಕೂ ಯಾರು ಈ ಆಲ್‌ರೌಂಡರ್ ಸೌರಭ್‌ ಕುಮಾರ್‌ ಅನ್ನೋ ಸ್ಟೋರಿ ಇಲ್ಲಿದೆ.

IND vs ENG 2nd Test : ‌ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಗಾಯಾಳು ಸಮಸ್ಯೆಯನ್ನು ಎದುರಿಸಿದೆ. ಕನ್ನಡಿಗ ಕೆಎಲ್‌ ರಾಹುಲ್‌ ಜೊತೆಗೆ ರವೀಂದ್ರ ಜಡೇಜಾ ಕೂಡ ಗಾಯಗೊಂಡಿದ್ದಾರೆ. ರವೀಂದ್ರ ಜಡೇಜಾ (Ravindra Jadeja) ಬದಲು ಸ್ಟಾರ್‌ ಆಲ್‌ರೌಂಡರ್‌ ಸೌರಭ್‌ ಕುಮಾರ್‌ (Saurabh kumar) ಅವರನ್ನು ಟೀಂ ಇಂಡಿಯಾ ತಂಡಕ್ಕೆ ಸೇರ್ಪಡೆಗೊಳಿಸಿದೆ. ಅಷ್ಟಕ್ಕೂ ಯಾರು ಈ ಆಲ್‌ರೌಂಡರ್ ಸೌರಭ್‌ ಕುಮಾರ್‌ ಅನ್ನೋ ಸ್ಟೋರಿ ಇಲ್ಲಿದೆ.

ರವೀಂದ್ರ ಜಡೇಜಾ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿದ್ದರು. ರವೀಂದ್ರ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಆಘಾತಕ್ಕೆ ಸಿಲುಕಿದ್ದ ಸಂದರ್ಭದಲ್ಲಿ 87 ರನ್‌ ಗಳಿಸಿದ್ದರು. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಪಡೆದು ಕೊಂಡಿದ್ದಾರೆ. ಭಾರತ ತಂಡ ಗೆಲ್ಲುವ ನಿರೀಕ್ಷೆಯಲ್ಲಿದ್ದರೂ ಕೂಡ ಅಂತಿಮ ಹಂತದಲ್ಲಿ ಎಡವಿತ್ತು. ಅದ್ರಲ್ಲೂ ಇಬ್ಬರು ಖ್ಯಾತ ಆಟಗಾರರು ಗಾಯಗೊಂಡಿದ್ದರು.

IND vs ENG 2nd Test Saurabh Kumar replaces All-rounder Ravindra Jadeja. Who is Saurabh kumar
Image Credit to Original Source

ಇಂಗ್ಲೆಂಡ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಂಡಿರಜ್ಜು ಗಾಯಕ್ಕೆ ತುತ್ತಾದ ಬೆನ್ನಲ್ಲೇ ವೈಜಾಗ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಆಲ್‌ರೌಂಡರ್‌ ಸ್ಥಾನ ತುಂಬುವವರು ಯಾರು ಅನ್ನೋ ಕುತೂಹಲ ಹುಟ್ಟಿಕೊಂಡಿತ್ತು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಬದಲು ಸೌರಭ್ ಕುಮಾರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಇದನ್ನೂ ಓದಿ : ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ

ಸೌರಭ್ ಕುಮಾರ್ ಯಾರು ?

ರವೀಂದ್ರ ಜಡೇಜಾ ಭಾರತ ತಂಡ ಖ್ಯಾತ ಆಲ್‌ರೌಂಡರ್.‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ. ರವೀಂದ್ರ ಜಡೇಜಾ ಅವರ ರೀತಿಯಲ್ಲೇ ಸೌರಬ್‌ ಕುಮಾರ್‌ ಕೂಡ ಸ್ಪೀನ್ನರ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ನೆರವಾಗುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

IND vs ENG 2nd Test Saurabh Kumar replaces All-rounder Ravindra Jadeja. Who is Saurabh kumar
Image Credit to Original Source

ಇದನ್ನೂ ಓದಿ : ಭಾರತ Vs ಇಂಗ್ಲೆಂಡ್‌ 2 ನೇ ಟೆಸ್ಟ್‌ ಪಂದ್ಯ : ಟೀಂ ಇಂಡಿಯಾಕ್ಕೆ ಆಘಾತ, ಕೆಎಲ್‌ ರಾಹುಲ್‌, ರವೀಂದ್ರ ಜಡೇಜಾ ಔಟ್‌

ಸೌರಬ್‌ ಕುಮಾರ್‌ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 68 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಸೌರಬ್‌ ಕುಮಾರ್‌ 290 ವಿಕೆಟ್‌ ಪಡೆದು ಕೊಂಡಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಭಾರತ ಎ ಮತ್ತು ಇಂಗ್ಲೆಂಡ್‌ ಲಯನ್ಸ್‌ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸೌರಭ್ ಕುಮಾರ್ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಮಿಂಚಿದ್ದಾರೆ.

ಭಾರತ ಇಂಗ್ಲೆಂಡ್‌ (IND vs ENG) 2 ನೇ ಟೆಸ್ಟ್ ತಂಡ :

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ ( ವಿಕೆಟ್‌ ಕೀಪರ್), ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.

ಇದನ್ನೂ ಓದಿ : ಐಪಿಎಲ್‌ನ ಈ 5 ತಂಡಗಳ ಸೇರ್ಪಡೆ ಆಗ್ತಾರಾ ಶಮರ್‌ ಜೋಸೆಫ್‌ !

IND vs ENG 2nd Test Saurabh Kumar replaces All-rounder Ravindra Jadeja. Who is Saurabh kumar

Comments are closed.