ಡರ್ಬಿ: (India Women Vs England Women) ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನ (Smriti Mandhana ), ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ಬಾರಿಸಿ ಭಾರತಕ್ಕೆ 8 ವಿಕೆಟ್’ಗಳ ಭರ್ಜರಿ ಗೆಲುವು (IND w vs ENG w ) ತಂದುಕೊಟ್ಟಿದ್ದಾರೆ.
ಡರ್ಬಿಯ ಕೌಂಟಿ ಗ್ರೌಂಡ್’ನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸಿಡಿಲಬ್ಬರದ ಆಟವಾಡಿದ ಸ್ಮೃತಿ ಮಂಧನ ಕೇವಲ 53 ಎಸೆತಗಳಲ್ಲಿ ಅಜೇಯ 79 ರನ್ ಸಿಡಿ ಭಾರತ ತಂಡದ ಏಕಪಕ್ಷೀಯ ಗೆಲುವಿಗೆ ಕಾರಣರಾದರು. ಮಂಧನ ಅವರ ಇನ್ನಿಂಗ್ಸ್’ನಲ್ಲಿ 13 ಆಕರ್ಷಕ ಬೌಂಡರಿಗಳು ಇದ್ದವು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮಂಧನ ಬಾರಿಸಿದ 17ನೇ ಅರ್ಧಶತಕ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ವನಿತೆಯರು ಭಾರತದ ಕರಾರುವಾಕ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತರಾದರು. ಭಾರತ ಪರ ಆಫ್’ಸ್ಪಿನ್ನರ್ ಸ್ನೇಹ್ ರಾಣಾ 24 ರನ್ನಿಗೆ 3 ವಿಕೆಟ್ ಉರುಳಿಸಿದರು.
ಇದನ್ನೂ ಓದಿ : Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ
End of Powerplay! #TeamIndia are off to a cracking start! 👍 👍
— BCCI Women (@BCCIWomen) September 13, 2022
A wicket each for @Deepti_Sharma06 & Renuka Singh and a run-out! 👏 👏
England 3 down for 29.
Follow the match ▶️ https://t.co/Xvs9EDrb2y #ENGvIND pic.twitter.com/hgU4IxI4No
ನಂತರ ಗುರಿ ಬೆನ್ನಟ್ಟಿದ ಹರ್ಮನ್’ಪ್ರೀತ್ ಸಾರಥ್ಯದ ಟೀಮ್ ಇಂಡಿಯಾ ಕೇವಲ 16.4 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಭರ್ಜರಿ ಗೆಲುವು (India Women Vs England Women) ದಾಖಲಿಸಿತು. ಸ್ಮೃತಿ ಮಂಧನ ಅಜೇಯ 79 ರನ್ ಬಾರಿಸಿದ್ರೆ, ಮತ್ತೊಬ್ಬ ಓಪನರ್ ಶೆಫಾಲಿ ವರ್ಮಾ (Shefali Verma) 17 ಎಸೆತಗಳಲ್ಲಿ 20 ರನ್ ಹಾಗೂ ನಾಯಕಿ ಹರ್ಮನ್’ಪ್ರೀತ್ ಕೌರ್ (Harmanpreet Kaur) 22 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿತ್ತು, ಸರಣಿಯ ನಿರ್ಣಾಯಕ 3ನೇ ಪಂದ್ಯ ಗುರುವಾರ (ಸೆಪ್ಟೆಂಬರ್ 15) ಬ್ರಿಸ್ಟಲ್’ನಲ್ಲಿ ನಡೆಯಲಿದೆ. ಚೆಸ್ಟರ್ ಲೀ ಸ್ಟ್ರೀಟ್ ಮೈದಾನದಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯವನ್ನು ಇಂಗ್ಲೆಂಡ್ 9 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು.
ಇದನ್ನೂ ಓದಿ : New jersey for Team India : ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾದ ನ್ಯೂ ಲುಕ್
IND w vs ENG w India women vs England Women Match IND beat Eng By 8 Wicket Shefali Verma Smriti Mandhana