Namma Metro With Qr Code Ticket : ನಮ್ಮ ಮೆಟ್ರೋದಲ್ಲಿನ್ನು ಬರಲಿದೆ ಕ್ಯೂ ಆರ್​ ಕೋಡ್​ ಟಿಕೆಟ್​

ಬೆಂಗಳೂರು : Namma Metro With Qr Code Ticket : ನಮ್ಮ ಮೆಟ್ರೋ ಪ್ರಯಾಣ ತುಂಬಾನೇ ಸುಖಕರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಾವುದೇ ಟ್ರಾಫಿಕ್​ ಕಿರಿಕಿರಿಯಿಲ್ಲದೇ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಅನಾಯಾಸವಾಗಿ ಪ್ರಯಾಣ ಮಾಡಬಹುದಾಗಿದೆ. ಹೀಗಾಗಿ ಸ್ವಂತ ವಾಹನ ಇದ್ದವರೂ ಸಹ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ತಾರೆ. ಮೆಟ್ರೋ ಪ್ರಯಾಣ ಮಾಡುವ ಮುನ್ನ ಟಿಕೆಟ್​ ಖರೀದಿ ಮಾಡೋದು ಕಡ್ಡಾಯ . ಆದರೆ ಈ ಟಿಕೆಟ್​ ಪಡೆದುಕೊಳ್ಳಬೇಕು ಅಂದರೆ ಸರತಿ ಸಾಲಿನಲ್ಲಿ ಕಾಯಬೇಕು. ಆದರೆ ಇನ್ಮುಂದೆ ಇಂತಹ ಸಮಸ್ಯೆ ಮೆಟ್ರೋ ಪ್ರಯಾಣಿಕರಿಗೆ ಉದ್ಭವಿಸೋದಿಲ್ಲ. ಇದಕ್ಕೊಂದು ಪರಿಹಾರವನ್ನು ಶೀಘ್ರದಲ್ಲಿಯೇ ಬಿಎಂಆರ್​ಸಿಎಲ್​ ಅಸ್ತಿತ್ವಕ್ಕೆ ತರುತ್ತಿದೆ.


ರಾಜ್ಯ ರಾಜಧಾನಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್​ ಕೋಡ್​ ರೀಡಿಂಗ್​ ಉಪಕರಣಗಳನ್ನು ಅಳವಡಿಸುವ ಕಾರ್ಯವನ್ನು ಬಿಎಂಆರ್​ಸಿಎಲ್​ ಮಾಡುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂ ಆರ್​ ಕೋಡ್​ ರೀಡಿಂಗ್​ ಉಪಕರಣ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಇದಾದ ಬಳಿಕ ಪ್ರಯಾಣಿಕರು ಕ್ಯೂಆರ್​ ಕೋಡ್​ ಮೂಲಕ ಹಣ ಪಾವತಿ ಮಾಡಿ ಟಿಕೆಟ್​ ಖರೀದಿ ಮಾಡಬಹುದಾಗಿದೆ.
ಪ್ರಯಾಣಿಕರ ಅನುಕೂಲಕ್ಕೆ ಎಂದಿಗೂ ಮೊದಲ ಪ್ರಾಶಸ್ತ್ಯ ನೀಡುವ ಬಿಎಂಆರ್​ಸಿಎಲ್​​ ಈಗಾಗಲೇ ಮೆಟ್ರೋ ಪಾಸ್​, ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್​ಗಳಂತಹ ಸೌಕರ್ಯಗಳನ್ನು ಜಾರಿಗೆ ತಂದಿದೆ. ಇದೀಗ ಮೆಟ್ರೋ ಪ್ರಯಾಣದಲ್ಲಿ ಡಿಜಿಟಲ್​ ವ್ಯವಸ್ಥೆಯನ್ನು ಮತ್ತೊಂದು ಹೆಜ್ಜೆ ಮುಂದೆ ಕೊಂಡೊಯ್ಯಲಾಗುತ್ತಿದ್ದು ಇದರಿಂದಾಗಿ ಪ್ರಯಾಣಿಕರು ಇನ್ಮೇಲೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಟಿಕೆಟ್​ಗಾಗಿ ಕಾಯಬೇಕು ಎಂದೇನಿಲ್ಲ. ಸ್ಮಾರ್ಟ್ಫೋನ್​​ಗಳಲ್ಲಿ ಇರುವ ಕ್ಯೂಆರ್​ ಕೋಡ್​ಗಳನ್ನು ಬಳಕೆ ಮಾಡಿ ಹಣ ಪಾವತಿ ಮಾಡುವ ಮೂಲಕ ಸಂಚರಿಸಬಹುದಾಗಿದೆ.


ಕ್ಯೂಆರ್​ ಕೋಡ್​ ಹೇಗೆ ಕಾರ್ಯ ನಿರ್ವಹಿಸುತ್ತೆ..?
ಪೇಟಿಎಂ, ನಮ್ಮ ಮೆಟ್ರೋ ಹಾಗೂ ಯಾತ್ರಾ ಅಪ್ಲಿಕೇಶನ್​ಗಳನ್ನು ಬಳಸಿ ನೀವು ಮೆಟ್ರೋ ಟಿಕೆಟ್​ ಖರೀದಿಸಬಹುದು. ನೀವು ಹಣ ಪಾವತಿ ಮಾಡಿದ ಬಳಿಕ ಟಿಕೆಟ್​ನ ಕ್ಯೂಆರ್​ ಕೋಡ್​ನನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು. ಇದನ್ನು ಮೆಟ್ರೋ ಸ್ವಯಂ ಚಾಲಿತ ಶುಲ್ಕ ಗೇಟ್​​​ಗೆ ಅಳವಡಿಸಲಾದ ಕ್ಯೂಆರ್ ಕೋಡ್​ಗೆ ನೀವು ಡೌನ್​ಲೋಡ್​ ಮಾಡಿದ ಕ್ಯೂಆರ್​ ಕೋಡ್​ ತೋರಿಸಬೇಕು. ಆಗ ನಿಮಗೆ ಮೆಟ್ರೋ ಗೇಟ್​ ತೆರೆದುಕೊಳ್ಳುತ್ತದೆ. ನಿರ್ಗಮಿಸುವ ಸಂದರ್ಭದಲ್ಲಿಯೂ ಇದೇ ರೀತಿ ಮಾಡಿ ಗೇಟ್​ ತೆರೆಯಬಹುದಾಗಿದೆ.

ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಈ ಕ್ಯೂಆರ್​ ಕೋಡ್​ ಟಿಕೆಟ್​ ವ್ಯವಸ್ಥೆ ಜಾರಿಯಲ್ಲಿದೆ. ದೆಹಲಿಯಲ್ಲಿ ಕ್ಯೂಆರ್​ ಕೋಡ್​ ಟಿಕೆಟ್​ ವ್ಯವಸ್ಥೆಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಹೆಚ್ಚಿನ ಜನರು ಕ್ಯೂಆರ್​ ಕೋಡ್​ ಟಿಕೆಟ್​ನ್ನೇ ಬಳಕೆ ಮಾಡಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಈ ಸಮೀಕ್ಷೆಯನ್ನು ಗಮನಿಸಿದ ಬಿಎಂಆರ್​ಸಿಎಲ್​ ರಾಜ್ಯ ರಾಜಧಾನಿಯಲ್ಲಿಯೂ ಕ್ಯೂ ಆರ್​ ಟಿಕೆಟ್​ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನು ಓದಿ : House Demolished: ಬಾಲಕಿಗೆ ಲೈಂಗಿಕ ದೌರ್ಜನ್ಯ.. ಶಾಲಾ ಬಸ್ ಡ್ರೈವರ್ ಮನೆ ಧ್ವಂಸ

ಇದನ್ನೂ ಓದಿ : Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ

Soon Travel In Namma Metro With Qr Code Ticket

Comments are closed.