ಸೋಮವಾರ, ಏಪ್ರಿಲ್ 28, 2025
HomeSportsCricketTest debuts for Surya and Bharat: ಟೆಸ್ಟ್ ಕ್ರಿಕೆಟ್‌ಗೆ ಸೂರ್ಯ, ಭರತ್ ಪದಾರ್ಪಣೆ, ಸ್ಮರಣೀಯ...

Test debuts for Surya and Bharat: ಟೆಸ್ಟ್ ಕ್ರಿಕೆಟ್‌ಗೆ ಸೂರ್ಯ, ಭರತ್ ಪದಾರ್ಪಣೆ, ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ತಂದೆ-ತಾಯಿ

- Advertisement -

ನಾಗ್ಪುರ: ( India vs Australia 1st Test ) ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ನಂ.1 ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಆಂಧ್ರಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆ.ಎಸ್ ಭರತ್ (K.S Bharat) ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಸ್ ಭರತ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಇಬ್ಬರಿಗೂ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಟೆಸ್ಟ್ ಕ್ಯಾಪ್ ನೀಡಿದರು. ಈ ವೇಳೆ ಇಬ್ಬರೂ ಆಟಗಾರರ ಹೆತ್ತವರು ಮೈದಾನದಲ್ಲಿ ಹಾಜರಿದ್ದದ್ದು ವಿಶೇಷ.

ಸೂರ್ಯಕುಮಾರ್ ಯಾದವ್ ಭಾರತದ 304ನೇ ಆಟಗಾರನಾಗಿ ಟೆಸ್ಟ್ ಪದಾರ್ಪಣೆ ಮಾಡಿದರೆ, ಕೋನ ಭರತ್ 305ನೇ ಆಟಗಾರನಾಗಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದರು. ಕಳೆದ ಒಂದೂವರೆ ವರ್ಷದಿಂದ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿದ್ದ ಕೆ.ಎಸ್ ಭರತ್’ಗೆ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೊನೆಗೂ ಚೊಚ್ಚಲ ಟೆಸ್ಟ್ ಆಡುವ ಅವಕಾಶ ಒದಗಿ ಬಂದಿದೆ. ಮತ್ತೊಂದೆಡೆ ಮುಂಬೈ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಪ್ರಥಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ಕಾರಣ ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದಿದ್ದಾರೆ.

ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಮೊದಲ ಮೂರು ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಉಸ್ಮಾನ್ ಖ್ವಾಜ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರೆ, ಅನುಭವಿ ಓಪನರ್ ಡೇವಿಡ್ ವಾರ್ನರ್ ಕೂಡ ಕೇವಲ 1 ರನ್ ಗಳಿಸಿ ವೇಗಿ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ಕ್ಲೀನ್ ಬೌಲ್ಡಾದರು. ಶಮಿ ಎಸೆತಕ್ಕೆ ಆಫ್ ಸ್ಟಂಪ್ ಗಾಳಿಯಲ್ಲಿ ಎಗರಿ ಬಿತ್ತು.

https://twitter.com/SatzStar/status/1623555014945050625?s=20&t=2YVMHZHntEOpjUp9Q7r_Rg

2 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇವಿಯಾ ತಂಡವನ್ನು ಮಾರ್ನಸ್ ಲಬುಶೇನ್ ಮತ್ತು ಸ್ಟೀವನ್ ಸ್ಮಿತ್ ಆರಂಭಿಕ ಆಘಾತದಿಂದ ಪಾರು ಮಾಡಿದ್ದಾರೆ.

ಇದನ್ನೂ ಓದಿ : Ranji Trophy Semi final: ಕುಸಿದ ಕರ್ನಾಟಕಕ್ಕೆ ಮಯಾಂಕ್ ಶತಕದಾಸರೆ, ಆಪದ್ಬಾಂಧವನಾದ ಶ್ರೀನಿವಾಸ

ಇದನ್ನೂ ಓದಿ : ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ತಂಡವನ್ನು ಬೆಚ್ಚಿಬೀಳಿಸಿದ ಕೋಲ್ಕತಾ ಥಂಡರ್‌ ಬೋಲ್ಟ್ಸ್‌ : ಜಯದಲ್ಲಿ ಮಿಂಚಿದ ವಿನಿತ್‌ ಕುಮಾರ್‌

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌

India vs Australia 1st Test Live Updates Suryakumar Yadav and KS Bharat debutants

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular