Golden Star Ganesh: ಕಪಿಲ್ ಶರ್ಮಾ ಶೋದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ : ವಿಡಿಯೋ ವೈರಲ್

(Golden Star Ganesh) ಒಂದು ಕಾಲದಲ್ಲಿ ಕನ್ನಡದ ಕಿರುತೆರೆಯಲ್ಲಿ ಕಾಮಿಡಿ ಶೋಗಳನ್ನು ನಡೆಸಿಕೊಡ್ತಿದ್ದ ಗಣೇಶ್ ಅಲಿಯಾಸ್ ಗಣಿ ಈಗ ಗೋಲ್ಡನ್ ಸ್ಟಾರ್ ಪಟ್ಟಕ್ಕೇ ಏರಿದ್ದು ಇತಿಹಾಸ. ಆದರೆ ಹೀಗೆ ಕಾಮಿಡಿಯನ್ ಯೊಬ್ಬರು ನಟರಾಗಿ ಭಡ್ತಿ ಪಡೆದ ಖುಷಿಯ ಜೊತೆ ಈಗ ಬಾಲಿವುಡ್ ಕಾಮಿಡಿ ಶೋದಲ್ಲಿ ಪಾಲ್ಗೊಳ್ಳೋ ಮೂಲಕ ಕನ್ನಡಿಗರ ಸಂಭ್ರಮ ಹೆಚ್ಚಿಸಿದ್ದಾರೆ.

ಕಾಮಿಡಿ ನೈಟ್ಸ್ ವಿತ್ ಕಪಿಲ್ ಬಾಲಿವುಡ್ ನ ಹೆಮ್ಮೆಯ ಕಾಮಿಡಿ ಶೋ. ಅದರಲ್ಲೂ ಕಪಿಲ್ ಶರ್ಮಾರನ್ನು ನೋಡೋಕೆ ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಸದ್ಯ ಕಪಿಲ್ ಶರ್ಮಾ ಶೋದ ಸ್ವರೂಪ ಬದಲಾದರೂ ಜನರ ಕ್ರೇಜ್ ಕಡಿಮೆಯಾಗಿಲ್ಲ. ಇಂತಿಪ್ಪ ಕಾಮಿಡಿ ಶೋದಲ್ಲಿ ಈಗ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ ಭಾಗವಹಿಸಿದ್ದು, ಕನ್ನಡಿಗರ ಸಂಭ್ರಮ ಹೆಚ್ಚಿಸಿದೆ. ಕಪಿಲ್ ಶರ್ಮಾ ಶೋದಲ್ಲಿ ಪಾಲ್ಗೊಂಡ ಸುದ್ದಿಯನ್ನು ಸ್ವತಃ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಇಷ್ಟದ ಕಪಿಲ್ ಶರ್ಮಾ ಶೋದಲ್ಲಿ ಪಾಲ್ಗೊಂಡಿದ್ದು ಖುಷಿಯಾಯ್ತು. ಕಪಿಲ್ ಶರ್ಮಾ ಅವರೇ ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು. ಎದುರು ನೋಡುತ್ತಿರುವೇ ಎಂದು ಪುಟ್ಟ ವಿಡಿಯೋವೊಂದನ್ನು ಗಣೇಶ್ ಶೇರ್ ಮಾಡಿದ್ದಾರೆ.ಗಣೇಶ್ ಶೇರ್ ಮಾಡಿರೋ ವಿಡಿಯೋಕ್ಕೆ ಸಖತ್ ಕಮೆಂಟ್ ಗಳು ಹರಿದುಬಂದಿದ್ದು, ಮತ್ತೊರ್ವ ಕನ್ನಡಿಗ ಬಾಲಿವುಡ್ ಮಟ್ಟಕ್ಕೆ ತಲುಪಿದ್ದು ನಮಗೆ ಖುಷಿ ‌ತಂದಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮಾತ್ರವಲ್ಲ ಲಕ್ಷಾಂತರ ಜನರು ವಿಡಿಯೋಗೆ ಲೈಕ್ಸ್ ಒತ್ತಿದ್ದಾರೆ.

ಸದ್ಯ ಗಣೇಶ್ ಬಾನ ದಾರಿಯಲ್ಲಿ ಸಿನಿಮಾ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದು, ಅದರ ಮಧ್ಯೆ ಸಿಸಿಎಲ್ ನಲ್ಲೂ ಕಾಣಿಸಿಕೊಳ್ತಿದ್ದಾರೆ‌. ಇದರ ಮಧ್ಯೆಯೇ ಕಪಿಲ್ ಶೋದಲ್ಲೂ ಗಣೇಶ್ ನಗುವಿನ ಬುತ್ತಿ ಹಂಚಿದ್ದಾರೆ. ಆ ಮೂಲಕ ಗಣೇಶ್ ಕಪಿಲ್ ಶೋದಲ್ಲಿ ಪಾಲ್ಗೊಂಡ ಎರಡನೇ ಸ್ಯಾಂಡಲ್ ವುಡ್ ಸ್ಟಾರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Anup Revanna birthday: ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಅನೂಪ್ ರೇವಣ್ಣ – ‘ಹೈಡ್ ಅಂಡ್ ಸೀಕ್’ ಪೋಸ್ಟರ್ ಲಾಂಚ್

ಇದಕ್ಕೂ ಮೊದಲು ಅಭಿನಯ ಚಕ್ರವರ್ತಿ ಸುದೀಪ್ ಕಪಿಲ್ ಶೋದಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಸಿನಿಮಾ ದಬಾಂಗ್ 3 ಶೂಟಿಂಗ್ ವೇಳೆ ಸುದೀಪ್ ಶೋದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕವೂ ಸುದೀಪ್ ಕಪಿಲ್ ಶರ್ಮಾ ಜೊತೆ ಆತ್ಮೀಯವಾದ ಬಂಧ ಹೊಂದಿದ್ದಾರೆ . ಈಗ ಗೋಲ್ಡನ್ ಸ್ಟಾರ್ ಕಪಿಲ್ ಶೋಗೆ ಅತಿಥಿಯಾಗುವ ಮೂಲಕ ಮುಂಬೈನಲ್ಲಿ ಕನ್ನಡದ ಕಂಪು ಹರಡಿದ್ದಾರೆ‌

Golden Star Ganesh: Golden Star Ganesh in Kapil Sharma Show: Video Viral

Comments are closed.