ಸೋಮವಾರ, ಏಪ್ರಿಲ್ 28, 2025
HomeSportsCricketIndia vs Bangladesh 1st ODI: ಕನ್ನಡಿಗ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಬಾಂಗ್ಲಾದೇಶಕ್ಕೆ...

India vs Bangladesh 1st ODI: ಕನ್ನಡಿಗ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ

- Advertisement -

ಮೀರ್’ಪುರ: India vs Bangladesh 1st ODI : ಪ್ರವಾಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 1 ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ. ಭಾರತ ಆಘಾತಕಾರಿ ಸೋಲು ಕಾಣುವುದರೊಂದಿಗೆ ಬ್ಯಾಟಿಂಗ್’ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (73 ರನ್) ಅವರ ಏಕಾಂಗಿ ಹೋರಾಟ ವ್ಯರ್ಥಗೊಂಡಿತು.

ಮೀರ್’ಪುರದಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ಆರಂಭಿಸಿತು. ಆರಂಭಿಕ ಆಘಾತ ಎದುರಿಸಿದ ಭಾರತ 48 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಶಿಖರ್ ಧವನ್(7) ಮತ್ತು ನಾಯಕ ರೋಹಿತ್ ಶರ್ಮಾ(27) ಇಬ್ಬರನ್ನೂ ಕಳೆದುಕೊಂಡಿತು. ತಂಡದ ಮೊತ್ತ 49 ರನ್’ಗಳಾಗುವಷ್ಟರಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ(9) ಕೂಡ ಔಟಾದರು.

4ನೇ ವಿಕೆಟ್’ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಉಪನಾಯಕ ಕೆ.ಎಲ್ ರಾಹುಲ್ (KL Rahul) 43 ರನ್’ಗಳ ಜೊತೆಯಾಟವಾಡಿದರು. ಅಯ್ಯರ್ 24 ರನ್ನಿಗೆ ಔಟಾದ ನಂತರ ರಾಹುಲ್ ಅವರನ್ನು ಸೇರಿಕೊಂಡ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (19) 5ನೇ ವಿಕೆಟ್’ಗೆ 75 ಎಸೆತಗಳಲ್ಲಿ 60 ರನ್ ಸೇರಿಸಿದರು. ಆದರೆ 152ರ ಮೊತ್ತದಲ್ಲಿ ವಾಷಿಂಗ್ಟನ್ ಸುಂದರ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತ ಕಂಡ ಭಾರತ ಕೇವಲ 34 ರನ್’ಗಳ ಅಂತರದಲ್ಲಿ ಕೊನೆಯ 6 ವಿಕೆಟ್’ಗಳನ್ನು ಕಳೆದುಕೊಂಡಿತು. ಏಕಾಂಗಿ ಹೋರಾಟ ನಡೆಸಿದ ರಾಹುಲ್ 70 ಎಸೆತಗಳಲ್ಲಿ ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ 73 ರನ್ ಗಳಿಸಿದ್ದರಿಂದ ಭಾರತ 41.2 ಓವರ್’ಗಳಲ್ಲಿ 186 ರನ್ ಗಳಿಸುವಂತಾಯಿತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಭಾರತದ ಸ್ವಿಂಗ್ ಬೌಲರ್ ದೀಪಕ್ ಚಹರ್ ಆಘಾತ ನೀಡಿದರು. ಭಾರತದ ಸಂಘಟಿದ ದಾಳಿಗೆ ತತ್ತರಿಸಿ ಬಾಂಗ್ಲಾದೇಶ 136 ರನ್’ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಮುರಿಯದ 10ನೇ ವಿಕೆಟ್’ಗೆ ಮೆಹದಿ ಹಸನ್ ಮಿರಾಜ್ ಮತ್ತು ಮುಸ್ತಾಫಿಜುರ್ ರಹ್ಮಾನ್ 41 ಎಸೆತಗಳಲ್ಲಿ 51 ರನ್’ಗಳ ಜೊತೆಯಾಟವಾಡಿ ಬಾಂಗ್ಲಾಗೆ 1 ವಿಕೆಟ್ ಅಂತರದ ರೋಚಕ ಗೆಲುವು ತಂದು ಕೊಟ್ಟರು. ಒತ್ತಡದ ಸನ್ನಿವೇಶದಲ್ಲಿ ದಿಟ್ಟ ಆಟವಾಡಿದ ಮೆಹದಿ ಹಸನ್ 39 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದ್ರೆ, ಮುಸ್ತಾಫಿಜುರ್ 11 ಎಸೆತಗಳಲ್ಲಿ ಅಜೇಯ 10 ರನ್ ಗಳಿಸಿದರು. ಅಂತಿಮವಾಗಿ ಬಾಂಗ್ಲಾದೇಶ 46 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ 1 ವಿಕೆಟ್ ಅಂತರದಲ್ಲಿ ರೋಚಕ ಜಯ ಸಾಧಿಸಿತು. ಸರಣಿಯ 2ನೇ ಪಂದ್ಯ ಬುಧವಾರ (ಡಿಸೆಂಬರ್ 7) ನಡೆಯಲಿದೆ.

ಇದನ್ನೂ ಓದಿ : Mitchell Starc : ಅಪ್ಪ-ಮಗನನ್ನು ಔಟ್ ಮಾಡಿ ವಿಶಿಷ್ಠ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

ಇದನ್ನೂ ಓದಿ : Mayank Agarwal – Manish Pandey : ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮೂಲ ಬೆಲೆ ರೂ. 1 ಕೋಟಿ

India vs Bangladesh 1st ODI India Lost KL Rahul Best Batting Live Cricket Score

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular