ಮ್ಯಾಂಚೆಸ್ಟರ್: (Last England Tour for Virat Kohli ಭಾರತ ಕ್ರಿಕೆಟ್ ತಂಡ ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿ ಭಾನುವಾರ ಕೊನೆಯ ಪಂದ್ಯವನ್ನಾಡಲಿದೆ. ಮ್ಯಾಂಚೆಸ್ಟರ್’ನಲ್ಲಿರುವ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಭಾನುವಾರ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
3 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಮಬಲದ ಹೋರಾಟ ಕಂಡು ಬಂದಿದ್ದು ಸರಣಿ 1-1ರಲ್ಲಿ ಸಮಬಲದಲ್ಲಿದೆ. ಹೀಗಾಗಿ ಓಲ್ಡ್ ಟ್ರಾಫರ್ಡ್’ನಲ್ಲಿ ಸೂಪರ್ ಸಂಡೇ ನಡೆಯಲಿರುವ ಪಂದ್ಯ ಒಂದು ರೀತಿಯಲ್ಲಿ ಫೈನಲ್. ಸರಣಿ ನಿರ್ಣಾಯಕ 3ನೇ ಏಕದಿನ ಪಂದ್ಯ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಅವರಿಗೆ ಇಂಗ್ಲೆಂಡ್ ನೆಲದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾದ್ರೂ ಅಚ್ಚರಿಯಿಲ್ಲ. ಈ ಸರಣಿ ಮುಗಿದ ನಂತರ ಮುಂದಿನ 2 ವರ್ಷಗಳ ಕಾಲ ಭಾರತಕ್ಕೆ ಇಂಗ್ಲೆಂಡ್ ನೆಲದಲ್ಲಿ ಯಾವುದೇ ಸರಣಿಗಳು ನಿಗದಿಯಾಗಿಲ್ಲ. ಮುಂದಿನ ಇಂಗ್ಲೆಂಡ್ ಪ್ರವಾಸದ ಹೊತ್ತಿಗೆ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿರಲಿದ್ದಾರೆ ಎಂಬುದಕ್ಕೆ ಯಾವ ಖಚಿತತೆಯೂ ಇಲ್ಲ. ಹೀಗಾಗಿ ಕೊಹ್ಲಿ ಪಾಲಿಗೆ ಇದೇ ಕೊನೆಯ ಇಂಗ್ಲೆಂಡ್ ಪ್ರವಾಸವಾದ್ರೂ ಅಚ್ಚರಿಯಿಲ್ಲ.
33 ವರ್ಷದ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ಬಳಿಕ ಒಂದು ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ದೂರ ಉಳಿಯಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಕ್ರಿಕೆಟ್’ನಿಂದ ಕೊಹ್ಲಿ ತಾತ್ಕಾಲಿಕ ವಿರಾಮ ಪಡೆಯಲಿದ್ದಾರೆ. ಇತ್ತೀಚಿನ ಕೆಲ ತಿಂಗಳುಗಳಲ್ಲಿ ದಯನೀಯ ವೈಫಲ್ಯ ಎದುರಿಸುತ್ತಿರುಲ ವಿರಾಟ್ ಕೊಹ್ಲಿ ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್’ನಲ್ಲಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 5 ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರುವ ಒಟ್ಟು ರನ್ 59 (ಟೆಸ್ಟ್: 2 ಇನ್ನಿಂಗ್ಸ್, ಟಿ20: 2 ಇನ್ನಿಂಗ್ಸ್, ಏಕದಿನ: ಒಂದು ಇನ್ನಿಂಗ್ಸ್).
ಒಂದು ವೇಳೆ ವಿರಾಟ್ ಕೊಹ್ಲಿ ಅವರ ಈ ಕೆಟ್ಟ ಫಾರ್ಮ್ ಇದೇ ರೀತಿ ಮುಂದುವರಿದರೆ, ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ಇಂಗ್ಲೆಂಡ್ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಬಹುತೇಕ ಅನುಮಾನ.
ಇದನ್ನೂ ಓದಿ : Pakistan Captain Babar Backs Kohli : “ಧೈರ್ಯವಾಗಿರು ಗೆಳೆಯ” ಪಾಕ್ ನಾಯಕನಿಂದ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ !
ಇದನ್ನೂ ಓದಿ : KL Rahul back to practice : ಗುಡ್ ನ್ಯೂಸ್, NCAನಲ್ಲಿ ಅಭ್ಯಾಸ ಆರಂಭಿಸಿದ ರಾಹುಲ್
india vs England 3rd odi : Last England Tour for Virat Kohli