India Vs England T20 : ಇಂದು ಇಂಡಿಯಾ Vs ಇಂಗ್ಲೆಂಡ್ ಮೊದಲ ಟಿ20: ಹೀಗಿದೆ ಭಾರತ Playing XI

ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್”ಗಳ ಸೋಲು ಕಂಡಿರುವ ಟೀಮ್ ಇಂಡಿಯಾ, ಇದೀಗ ಟಿ2 ಸರಣಿಯನ್ನಾಡಲಿದ್ದು ಮೊದಲ ಟಿ20 ಪಂದ್ಯ ಗುರುವಾರ ನಡೆಯಲಿದೆ. ಆಂಗ್ಲರ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾಗೆ ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ಲಭಿಸಿದೆ. 2 ಹಾಗೂ 3ನೇ ಟಿ20 ಪಂದ್ಯದಲ್ಲಿ (India Vs England T20 Playing 11) ಕೊಹ್ಲಿ ಜಡೇಜ, ಅಯ್ಯರ್, ರಿಷಭ್ ಪಂತ್ ಮತ್ತು ಬುಮ್ರಾ ಆಡಲಿದ್ದಾರೆ.

ಕೋವಿಡ್”ನಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಮರಳಿದ್ದು, ಸೀಮಿತ ಓವರ್”ಗಳ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಪಂದ್ಯಕ್ಕೂ ಮೊದಲು ಲೀಸೆಸ್ಟರ್”ಶೈರ್ ವಿರುದ್ಧ ನಡೆದ 4 ದಿನಗಳ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮಾ ಕೋವಿಡ್’ಗೆ ಗುರಿಯಾಗಿದ್ದರು. ಹೀಗಾಗಿ ಕ್ವಾರಂಟೈನ್”ನಲ್ಲಿದ್ದ ರೋಹಿತ್ ಭಾನುವಾರವಷ್ಟೇ ಐಸೋಲೇಷನ್”ನಿಂದ ಹೊರ ಬಂದು ಎಡ್ಜ್’ಬಾಸ್ಟನ್”ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದರು.

ಪ್ರಥಮ ಟಿ20 ಪಂದ್ಯ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಆರಂಭವಾಗಲಿದ್ದು, ಪಂದ್ಯ ಸೌಥಾಂಪ್ಟನ್”ನಲ್ಲಿರುವ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್”ಮನ್ ಜೋಸ್ ಬಟ್ಲರ್ ಮುನ್ನಡೆಸಲಿದ್ದಾರೆ.

ಭಾರತ Vs ಇಂಗ್ಲೆಂಡ್ ಟಿ20 ಸರಣಿಯ ವೇಳಾಪಟ್ಟಿ
ಪ್ರಥಮ ಟಿ20: ರೋಸ್ ಬೌಲ್ ಮೈದಾನ, ಸೌಥಾಂಪ್ಟನ್
ಪಂದ್ಯ ಆರಂಭ: ರಾತ್ರಿ 10.30ಕ್ಕೆ

2ಟಿ20 ಪಂದ್ಯ: ಎಡ್ಜ್’ಬಾಸ್ಟನ್ ಮೈದಾನ, ಬರ್ಮಿಂಗ್’ಹ್ಯಾಮ್
ಪಂದ್ಯ ಆರಂಭ: ಸಂಜೆ 7ಕ್ಕೆ

3ಟಿ20 ಪಂದ್ಯ: ಟ್ರೆಂಟ್ ಬ್ರಿಡ್ಜ್ ಮೈದಾನ, ನಾಟಿಂಗ್’ಹ್ಯಾಮ್
ಪಂದ್ಯ ಆರಂಭ: ಸಂಜೆ 7ಕ್ಕೆ

ಇಂಗ್ಲೆಂಡ್ ವಿರುದ್ಧದ ಪ್ರಥಮ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್.

ಇದನ್ನೂ ಓದಿ : Joe Root Beat Virat Kohli : ಕಿಂಗ್ ಕೊಹ್ಲಿಯನ್ನು Beat ಮಾಡಿದ ಇಂಗ್ಲೆಂಡ್ ರನ್ ಮಷಿನ್ !

ಇದನ್ನೂ ಓದಿ : Shikhar Dhawan Captain: ಮತ್ತೆ ಕ್ಯಾಪ್ಟನ್ ಚೇಂಜ್, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ

India Vs England T20 Match Predicted India Playing 11

Comments are closed.