ಹ್ಯಾಮಿಲ್ಟನ್: Sanju Samson Out : ಭಾರತೀಯ ಕ್ರಿಕೆಟ್’ನಲ್ಲಿ ಸದ್ಯದ ಮಟ್ಟಿಗೆ ಸಂಜು ಸ್ಯಾಮ್ಸನ್ (Sanju Samson) ಅವರಿಗಿಂತ ದೊಡ್ಡ ನತದೃಷ್ಟ ಆಟಗಾರ ಮತ್ತೊಬ್ಬನಿಲ್ಲ. ಟೀಮ್ ಇಂಡಿಯಾಗೆ ಆಯ್ಕೆ ಮಾಡುವುದು, ಬೆಂಚ್ ಕಾಯಿಸುವಂತೆ ಮಾಡುವುದು. ಅವಕಾಶ ಕೊಟ್ಟಾಗ ಉತ್ತಮವಾಗಿ ಆಡಿದರೂ ಮುಂದಿನ ಪಂದ್ಯದಲ್ಲೇ ಪ್ಲೇಯಿಂಗ್ ಇಲೆವೆನ್’ನಿಂದ ಡ್ರಾಪ್. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಸಂಜು ಸ್ಯಾಮ್ಸನ್ ಅವರನ್ನು 2ನೇ ಏಕದಿನ ಪಂದ್ಯದ ಪ್ಲೇಯಿಂಗ್ XIನಿಂದ ಕೈ ಬಿಡಲಾಗಿದೆ. ಸ್ಯಾಮ್ಸನ್ ಬದಲು ಆಲ್ರೌಂಡರ್ ದೀಪಕ್ ಹೂಡಗೆ ಅವಕಾಶ ನೀಡಲಾಗಿದೆ.
ಕಿವೀಸ್ ವಿರುದ್ಧ ಶುಕ್ರವಾರ ಆಕ್ಲೆಂಡ್’ನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 36 ರನ್ ಗಳಿಸಿದ್ದರು. ಆದರೆ 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಮತ್ತೊಬ್ಬ ವಿಕೆಟ್ ಕೀಪರ್ ರಿಷಭ್ ಪಂತ್ ಕೇವವಲ 15 ರನ್ ಗಳಿಸಿ ಔಟಾಗಿದ್ದರು. ಆದರೂ 2ನೇ ಪಂದ್ಯಕ್ಕೆ ಪಂತ್ ಅವರನ್ನು ಉಳಿಸಿಕೊಂಡು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಬಿಸಿಸಿಐನಲ್ಲಿ ನಡೆಯುತ್ತಿರುವ ಪಕ್ಷಪಾತಕ್ಕೆ ಸಂಜು ಸ್ಯಾಮ್ಸನ್ ಬಲಿಪಶುವಾಗಿದ್ದಾರೆ. ಇದು ನಿಲ್ಲುವವರೆಗೆ ನಾನು ಮತ್ತೆ ಭಾರತದ ಯಾವುದೇ ಪಂದ್ಯಗಳನ್ನು ನೋಡುವುದಿಲ್ಲ. ಇನ್’ಫಾರ್ಮ್ ಆಟಗಾರನೊಬ್ಬನನ್ನು ತಂಡದಿಂದ ಹೊರಗಿಟ್ಟು ಬೇರೊಬ್ಬನಿಗೆ ಅವಕಾಶ ನೀಡುವುದು ನಿಜಕ್ಕೂ ಹಾಸ್ಯಾಸ್ಪದ” ಎಂದು ಆದರ್ಶ್ ಎಂಬ ಕ್ರಿಕೆಟ್ ಅಭಿಮಾನಿ ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾನೆ.
ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಯಲ್ಲೂ ಸಂಜು ಸ್ಯಾಮ್ಸನ್’ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಸ್ಯಾಮ್ಸನ್ ಬದಲು ಪದೇ ಪದೇ ಅವಕಾಶ ಪಡಯುತ್ತಿರುವ ದೆಹಲಿಯ ರಿಷಭ್ ಪಂತ್ ಸಿಕ್ಕ ಅವಕಾಶವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಆದರೂ ತಂಡದಲ್ಲಿ ಅವರ ಸ್ಥಾನ ಇನ್ನೂ ಭದ್ರವಾಗಿದೆ. ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ಮುಗ್ಗರಿಸಿದ್ದ ರಿಷಭ್ ಪಂತ್, ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ವಿಫಲರಾಗಿದ್ದಾರೆ. ಟಿ20 ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿ ಕೇವಲ 17 ರನ್ ಗಳಿಸಿದ್ದ ಪಂತ್, ಏಕದಿನ ಸರಣಿಯ (India vs New Zeeland ODI series) ಮೊದಲ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕರೂ 15 ರನ್ನಿಗೆ ಔಟಾಗಿದ್ದರು.
Dropped from Bangaldesh series. Haven’t given opportunity in t20 matches.. Performed decently in the first odi. Then again dropped 🥲. Shame on Indian team management!!indian team is not the platform for pant to find his form. He should go and play domestic.. 🙏#SanjuSamson pic.twitter.com/0qiE8v4jfa
— Navaneeth (@Navanee31078282) November 27, 2022
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿರುವ ಕಳೆದ 6 ಇನ್ನಿಂಗ್ಸ್’ಗಳಲ್ಲಿ ರಿಷಭ್ ಪಂತ್ ಗಳಿಸಿರುವ ಒಟ್ಟು ರನ್ ಕೇವಲ 68 ರನ್. ಸತತ ವೈಫಲ್ಯ ಕಾಣುತ್ತಿದ್ದರೂ ರಿಷಭ್ ಪಂತ್’ಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ, ರಿಷಭ್ ಪಂತ್ ಹಿತ ಕಾಯಲು ಸಂಜು ಸ್ಯಾಮ್ಸನ್ ಅವರನ್ನು ಬಲಿಪಶು ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇದನ್ನೂ ಓದಿ : Umran Malik shines in ODI debut: ಪದಾರ್ಪಣೆಯ ಪಂದ್ಯದಲ್ಲೇ ಬೆಂಕಿ ಚೆಂಡುಗಳನ್ನು ಉಗುಳಿದ ಜಮ್ಮು ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್
ಇದನ್ನೂ ಓದಿ : Pro Kabaddi League: ಕೆಂಪುಗೂಳಿಗಳನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಜೈಪುರ ಪಿಂಕ್ ಪ್ಯಾಂಥರ್ಸ್
India vs New Zealand 2nd ODI Sanju Samson Out