ಬೆಂಗಳೂರು: ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಇದೇ ವರ್ಷ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, (India Vs New Zealand team) ಕಿವೀಸ್ ವಿರುದ್ಧ ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯನ್ನಾಡಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಜಿಲೆಂಡ್”ಗೆ ಹಾರಲಿದೆ. ಟಿ20 ವಿಶ್ವಕಪ್ ಟೂರ್ನಿ ಆಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ರಲ್ಲಿ ಸ್ಥಾನ ಪಡೆಯಲಿದೆ. ವಿಶ್ವಕಪ್ ಫೈನಲ್ ಪಂದ್ಯ ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ತಂಡ ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್”ಗೆ ಹಾರಲಿದೆ.
India Vs New Zeeland : ಭಾರತದ ನ್ಯೂಜಿಲೆಂಡ್ ಪ್ರವಾಸ 2022ದ ವೇಳಾಪಟ್ಟಿ
ನವೆಂಬರ್ 18: ಮೊದಲ ಟಿ20
ನವೆಂಬರ್ 20: ಎರಡನೇ ಟಿ20
ನವೆಂಬರ್ 22: ಮೂರನೇ ಟಿ20
ನವೆಂಬರ್ 25: ಮೊದಲ ಏಕದಿನ
ನವೆಂಬರ್ 27: ಎರಡನೇ ಏಕದಿನ
ನವೆಂಬರ್ 30: ಮೂರನೇ ಏಕದಿನ
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು
ಇದನ್ನೂ ಓದಿ : No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ
ಇದನ್ನೂ ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು
ಇದನ್ನೂ ಓದಿ : Roger Binny Outrage Against Manish Pandey : ಮನೀಶ್ ಪಾಂಡೆ ವಿರುದ್ಧ ಕೆಎಸ್‌ಸಿಎ ಅಧ್ಯಕ್ಷ ಬಿನ್ನಿ ಕೆಂಡಾಮಂಡಲ
India Vs New Zealand team india tour New Zealand in November