Roger Binny Outrage Against Manish Pandey : ಮನೀಶ್ ಪಾಂಡೆ ವಿರುದ್ಧ ಕೆಎಸ್‌ಸಿಎ ಅಧ್ಯಕ್ಷ ಬಿನ್ನಿ ಕೆಂಡಾಮಂಡಲ

ಬೆಂಗಳೂರು: 1983ರ ಐಸಿಸಿ ವಿಶ್ವಕಪ್ ತಂಡದ ರೂವಾರಿಗಳಲ್ಲೊಬ್ಬರಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (Karnataka State Cricket Association) ಅಧ್ಯಕ್ಷ ರೋಜರ್ ಬಿನ್ನಿ (Roger Binny), ರಾಜ್ಯ ರಣಜಿ ತಂಡದ ನಾಯಕ ಮನೀಶ್ ಪಾಂಡೆ ವಿರುದ್ದ (Roger Binny Outrage Against Manish Pandey) ಕೆಂಡಾಮಂಡಲರಾಗಿದ್ದಾರೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಮನೀಶ್ ಪಾಂಡೆ (Manish pandey) ತಂಡವನ್ನು ಮುನ್ನಡೆಸಿದ ರೀತಿಯ ಬಗ್ಗೆ ಕಿಡಿ ಕಾರಿರುವ ರೋಜರ್ ಬಿನ್ನಿ, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹಿರಿಯ ಆಟಗಾರರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

“ಸದ್ಯದ ಸನ್ನಿವೇಶದಲ್ಲಿ ಕರ್ನಾಟಕ ಕ್ರಿಕೆಟ್ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ನನಗಿಸುತ್ತಿದೆ. ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಒದ್ದಾಡಿದ ರೀತಿಯನ್ನು ನಾನು ಯಾವತ್ತೂ ನೋಡಿಲ್ಲ. ಆಟಗಾರರ ಆಯ್ಕೆಯಲ್ಲಿ ತೀರಾ ಕಳಪೆ ಕಾರ್ಯ ನಿರ್ವಹಣೆ ಮತ್ತು ಕಳಪೆ ಟೀಮ್ ಮ್ಯಾನೇಜ್ಮೆಂಟ್ ಬದಲಾಗುವ ಅಗತ್ಯವಿದೆ. ಇದನ್ನು ಸುಧಾರಿಸಲು ನೆರವಾಗುವ ಜನರನ್ನು ನಾವು ವ್ಯವಸ್ಥೆಯ ಭಾಗ ಮಾಡಬೇಕಾಗಿದೆ. ಸ್ವತಃ ನಾಯಕನಿಗೇ ತನ್ನ ನಿರ್ಧಾರಗಳ ಮೇಲೆ ನಿರ್ದಿಷ್ಟತೆ ಇರಲಿಲ್ಲ. ಕ್ರಿಕೆಟ್ ತಂಡದ ಆಟ, ಯಾವೊಬ್ಬ ಆಟಗಾರನ ಮೇಲೂ ಅವಲಂಬಿತವಾಗಿಲ್ಲ”.

  • ರೋಜರ್ ಬಿನ್ನಿ, ಕೆಎಸ್‌ಸಿಎ ಅಧ್ಯಕ್ಷ

ಈ ರೀತಿ ತಂಡದ ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಮನೀಶ್ ಪಾಂಡೆ ವಿರುದ್ಧ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ ಅಸಮಾಧಾನ ಹೊರ ಹಾಕಿದ್ದಾರೆ. ಈ ವರ್ಷದ ರಣಜಿ ಟೂರ್ನಿಯಲ್ಲಿ (Ranji Trophy 2022) ಕರ್ನಾಟಕ ತಂಡ ತನ್ನ ತವರು ನೆಲದಲ್ಲೇ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಪ್ರಥಮ ಇನ್ನಿಂಗ್ಸ್”ನಲ್ಲಿ 98 ರನ್”ಗಳ ಮುನ್ನಡೆ ಪಡೆದರೂ, ಪಂದ್ಯ ಗೆಲ್ಲಲು ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡಕ್ಕೆ ಸಾಧ್ಯವಾಗಿರ ಲಿಲ್ಲ. ದ್ವಿತೀಯ ಇನ್ನಿಂಗ್ಸ್’ನಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ಕರ್ನಾಟಕ ಕೇವಲ 114 ರನ್ನಿಗೆ ಆಲೌಟಾಗಿತ್ತು. ನಾಯಕ ಮನೀಶ್ ಪಾಂಡೆ, ಅನುಭವಿ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟಿದ್ದರು. ಈ ಹಿರಿಯ ಆಟಗಾರರ ವಿರುದ್ಧವೂ ರೋಜರ್ ಬಿನ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾವೆಲ್ಲಾ ಕರ್ನಾಟಕ ಪರ ಅತ್ಯಂತ ಹೆಮ್ಮೆಯಿಂದ ಆಡುತ್ತಿದ್ದೆವು. ಒಂದೇ ಬಾರಿ ಆರು ಮಂದಿ ಟೆಸ್ಟ್ ಆಟಗಾರರು ಕರ್ನಾಟಕ ಕಂಡದ ಪರ ಆಡಿದ್ದೂ ಇದೆ. ವಿಶ್ವ ಟೆಸ್ಟ್ ಚಾಂಪಿಯನ್”ಷಿಪ್ ಮುಗಿಸಿ ಬಂದ ಬೆನ್ನಲ್ಲೇ ರಣಜಿ ಪಂದ್ಯವಾಡಿದ್ದೆವು. ಕರ್ನಾಟಕ ತಂಡ ಎಂಬುದು ನಿಮ್ಮ ಹೃದಯದಲ್ಲಿರಬೇಕು. ಕೆಲ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಅತ್ಯಂತ ಲಘುವಾಗಿ ತೆಗೆದುಕೊಂಡಿದ್ದಾರೆ. ಅವರಿಗೆ ಕರ್ನಾಟಕ ಪರ ಆಡುತ್ತಿದ್ದೇವೆ ಎಂಬ ಹೆಮ್ಮೆಯೇ ಇದ್ದಂತೆ ಕಾಣುತ್ತಿಲ್ಲ. ಇದು ಬದಲಾಗಬೇಕು. ಎಲ್ಲವನ್ನೂ ಬದಲಾಯಿಸುತ್ತೇವೆ. ಕ್ರಿಕೆಟ್’ಗಿಂತ ಯಾರೂ ದೊಡ್ಡವರಲ್ಲ”.

  • ರೋಜರ್ ಬಿನ್ನಿ, ಕೆಎಸ್‌ಸಿಎ ಅಧ್ಯಕ್ಷ.

ಇದನ್ನೂ ಓದಿ : No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ

ಇದನ್ನೂ ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

KSCA President Roger Binny Outrage Against Manish Pandey

Comments are closed.