ಸೋಮವಾರ, ಏಪ್ರಿಲ್ 28, 2025
HomeSportsCricketIndia Vs Pakistan Asia Cup 2022: ಭಾರತದ ಧ್ವಜ ಹಿಡಿಯಲು ನಿರಾಕರಿಸಿದ್ರಾ ಬಿಸಿಸಿಐ ಕಾರ್ಯದರ್ಶಿ...

India Vs Pakistan Asia Cup 2022: ಭಾರತದ ಧ್ವಜ ಹಿಡಿಯಲು ನಿರಾಕರಿಸಿದ್ರಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ?

- Advertisement -

ದುಬೈ: ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ 5 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ (India Vs Pakistan Asia Cup 2022) ಹಲವಾರು ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI Secretary Jay Shah) ಕೂಡ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿದ್ದು ಭಾರತ ತಂಡವನ್ನು ಬೆಂಬಲಿಸಿದ್ದಾರೆ. ಆದರೆ ಭಾರತ ಗೆದ್ದ ನಂತರ ಜಯ್ ಶಾ ತೋರಿದ ನಡವಳಿಕೆ ಕ್ರಿಕೆಟ್ ಪ್ರಿಯರ ಕೋಪಕ್ಕೆ ಕಾರಣವಾಗಿದೆ. ಜಯ್ ಶಾ ನಡವಳಿಕೆಗೆ ರಾಜಕೀಯ ಪಕ್ಷಗಳ ಮುಖಂಡರೂ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನಂದ್ರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್ ಸಹಿತ ಯುಎಇ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ವಿವಿಐಪಿ ಸ್ಟ್ಯಾಂಡ್’ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದರು. ಭಾರತ ಪಂದ್ಯ ಗೆದ್ದ ನಂತರ ಎಲ್ಲರ ಜೊತೆ ಜಯ್ ಶಾ ಕೂಡ ಸಂಭ್ರಮಿಸಿದ್ದಾರೆ. ಇದೇ ವೇಳೆ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಜಯ್ ಶಾ ಅವರ ಕೈಗೆ ಭಾರತದ ತ್ರಿವರ್ಣ ಧ್ವಜ ನೀಡಲು ಮುಂದಾಗಿದ್ದಾರೆ. ಆಗ ತ್ರಿವರ್ಣ ಧ್ವಜವನ್ನು ಹಿಡಿಯಲು ಜಯ್ ಶಾ ನಿರಾಕರಿಸಿದ ದೃಶ್ಯ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶದ ತ್ರಿವರ್ಣ ಧ್ವಜ ಹಿಡಿಯಲು ನಿರಾಕರಿಸಿದ ಜಯ್ ಶಾ ನಡವಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರನಾಗಿರುವ ಕಾರಣ ವಿರೋಧ ಪಕ್ಷಗಳು ಜಯ್ ಶಾ ವಿರುದ್ಧ ಮುಗಿ ಬಿದ್ದಿವೆ. ರಾಜ್ಯದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಆಮ್ ಆದ್ಮಿ ಪಕ್ಷದ ನಾಯಕರು ಜಯ್ ಶಾ ವಿರುದ್ಧ ಟ್ವಿಟರ್’ನಲ್ಲಿ ಕಿಡಿ ಕಾರಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನನ್ನು 5 ವಿಕೆಟ್’ಗಳಿಂದ ಸೋಲಿಸಿದ್ದ ಭಾರತ, ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಇದನ್ನೂ ಓದಿ : Rishabh Pant Vs Urvashi Rautela: ಡಗೌಟ್’ನಲ್ಲಿ ರಿಷಭ್ ಪಂತ್,ಪ್ರೇಕ್ಷಕರ ಗ್ಯಾಲರಿಯಲ್ಲಿ ಊರ್ವಶಿ ರೌಟೇಲ, ವಿಕೆಟ್ ಕೀಪರ್ ಫುಲ್ ಟ್ರೋಲ್

ಇದನ್ನೂ ಓದಿ : India Vs Pakistan: “ವಿರಾಟ್, ರಾಹುಲ್ ಹೃದಯವಂತಿಕೆ ಹೃದಯಕ್ಕೇ ತಟ್ಟಿತು..” ಪಾಕ್ ನಾಯಕ ಬಾಬರ್ ಹೀಗಂದಿದ್ದೇಕೆ ?

India Vs Pakistan Asia Cup 2022 BCCI Secretary Jay Shah refused to hold the Indian flag

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular