ಭಾನುವಾರ, ಏಪ್ರಿಲ್ 27, 2025
HomeSportsCricketKL Rahul praises Suryakumar yadav : ‘’ಬಾರಿ ಎಡ್ಡೆ ಗೊಬ್ಬಿಯ’’ ಸೂರ್ಯನ ಶತಕಕ್ಕೆ ತುಳುವಿನಲ್ಲಿ...

KL Rahul praises Suryakumar yadav : ‘’ಬಾರಿ ಎಡ್ಡೆ ಗೊಬ್ಬಿಯ’’ ಸೂರ್ಯನ ಶತಕಕ್ಕೆ ತುಳುವಿನಲ್ಲಿ ಶಹಬ್ಬಾಸ್ ಹೇಳಿದ ರಾಹುಲ್

- Advertisement -

ರಾಜ್’ಕೋಟ್: KL Rahul praises Suryakumar yadav : ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ (Suryakumar Yadav), ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ (India vs Sri Lanka 2023 3rd T20I) ಸಿಡಿಲಬ್ಬರದ ಶತಕ ಬಾರಿಸಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದಾರೆ. ಸೂರ್ಯನ ಶತಕದ ನೆರವಿನಿಂದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 91 ರನ್’ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1ರ ಅಂತರದಲ್ಲಿ ಗೆದ್ದುಕೊಂಡಿತು.

ಸಿಡಿಲಬ್ಬರದ ಶತಕ ಬಾರಿಸಿದ ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಆರ್ಭಟಕ್ಕೆ ಕ್ರಿಕೆಟ್ ಜಗತ್ತು ಫಿದಾ ಆಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಕನ್ನಡಿಗ ಕೆ.ಎಲ್ ರಾಹುಲ್ (KL Rahul), ಸೂರ್ಯನ ಶತಕಕ್ಕೆ ತುಳುವಿನಲ್ಲಿ ಶಹಬ್ಬಾಸ್ ಹೇಳಿದ್ದಾರೆ. ‘’ಬಾರಿ ಎಡ್ಡೆ ಗೊಬ್ಬಿಯ’’ ಎಂದು ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ರಾಹುಲ್ ಪೋಸ್ಟ್ ಮಾಡಿದ್ದಾರೆ. ‘’ಬಾರಿ ಎಡ್ಡೆ ಗೊಬ್ಬಿಯ’’ ಎಂದರೆ ‘’ತುಂಬಾ ಚೆನ್ನಾಗಿ ಆಡಿದೆ’’ ಎಂದರ್ಥ. ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಮಂಗಳೂರು ಮೂಲದವರು ಎಂಬುದು ಇಲ್ಲಿ ಗಮನಾರ್ಹ.

ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿದರು. ಈ ವಿಸ್ಫೋಟಕ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್’ಗಳು ಒಳಗೊಂಡಿದ್ದವು. ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ 16.4 ಓವರ್’ಗಳಲ್ಲಿ 137 ರನ್ನಿಗೆ ಆಲೌಟಾಗಿ 91 ರನ್’ಗಳಿಂದ ಭಾರತಕ್ಕೆ ಶರಣಾಗಿ ಸರಣಿಯನ್ನು ಆತಿಥೇಯರಿಗೆ ಒಪ್ಪಿಸಿತು.

ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ ಜನವರಿ 10ರಂದು ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ಮಂಗಳವಾರ ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : Rishabh Pant knee ligament surgery: ರಿಷಬ್ ಪಂತ್‌ಗೆ ಮೊಣಕಾಲು ಶಸ್ತ್ರಚಿಕಿತ್ಸೆ ಸಕ್ಸಸ್; ಕ್ರಿಕೆಟ್‌ನಿಂದ ಕನಿಷ್ಠ 9 ತಿಂಗಳು ಔಟ್, ವಿಶ್ವಕಪ್‌ಗೂ ಡೌಟ್

ಇದನ್ನೂ ಓದಿ : ಬಿಸಿಸಿಐ ನೂತನ ಆಯ್ಕೆ ಸಮಿತಿಗೆ ಮತ್ತೆ ಚೇತನ್ ಶರ್ಮಾ ಮುಖ್ಯಸ್ಥ, ಸೆಲೆಕ್ಷನ್ ಕಮಿಟಿಯಲ್ಲಿ ಕರ್ನಾಟಕದವರಿಗಿಲ್ಲ ಸ್ಥಾನ

English News Click Here

India vs Sri Lanka 2023 3rd T20I KL Rahul praises Suryakumar yadav in Tulu

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular