ICICI Bank Interest Rate : ಅಧಿಕ ಮೊತ್ತದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಪರಿಷ್ಕರಿಸಿದ ICICI ಬ್ಯಾಂಕ್‌

ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ICICI ಬ್ಯಾಂಕ್‌ ದೊಡ್ಡ ಮೊತ್ತದ ಸ್ಥಿರ ಠೇವಣಿ (Fixed Deposits)ಗಳ ಮೇಲಿನ ಬಡ್ಡಿದರವನ್ನು (ICICI Bank Interest Rate) ಪರಿಷ್ಕರಿಸಿದೆ. 2 ಕೋಟಿಯಿಂದ 5 ಕೋಟಿಗಳ ವರೆಗಿನ ದೊಡ್ಡ ಮೊತ್ತದ FD ಗಳ ಬಡ್ಡಿದರವನ್ನು (Interest Rate) ಹೆಚ್ಚಿಸಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಜನವರಿ 7ರಿಂದಲೇ ಹೊಸ ದರ ಜಾರಿಯಲ್ಲಿದೆ. ಪರಿಷ್ಕೃತ ದರದ ಅನುಸಾರ 7 ರಿಂದ 10 ವರ್ಷಗಳವರೆಗಿನ ಅವಧಿಯ ಸ್ಥಿರ ಠೇವಣಿಗಳಿಗೆ 4.50% ದಿಂದ 6.75% ಬಡ್ಡಿದರಗಳನ್ನು ಒದಗಿಸುತ್ತದೆ. ಅದೇ 15 ತಿಂಗಳಿಂದ 2 ವರ್ಷಗಳವರೆಗಿನ FD ಗಳ ಮೇಲೆ ಗರಿಷ್ಠ ಬಡ್ಡಿದರವು 7.15% ಆಗಿರುತ್ತದೆ. ಅಧಿಕ ಮೊತ್ತದ ಠೇವಣಿಗಳ ಮೇಲೆ ICICI ಬ್ಯಾಂಕ್‌ ಯಾವ ಅವಧಿಗೆ ಎಷ್ಟು ಬಡ್ಡಿದರಗಳನ್ನು ನೀಡಲಿದೆ ಇಲ್ಲಿದೆ ಓದಿ.

ಅಧಿಕ ಮೊತ್ತದ FDಗಳ ಮೇಲೆ ICICI ಬ್ಯಾಂಕ್‌ ಪರಿಷ್ಕರಿಸಿದ ಬಡ್ಡಿದರಗಳು:
ICICI ಬ್ಯಾಂಕ್‌ FDಗಳ ಮೇಲಿನ ಬಡ್ಡಿದರವನ್ನು ಅವಧಿಗೆ ಅನುಸಾರವಾಗಿ ಪರಿಷ್ಕರಿಸಿದೆ. ಅದು ಹೀಗಿದೆ:

7 ರಿಂದ 29 ದಿನಗಳವರೆಗಿನ FDಗಳ ಮೇಲೆ 4.50%
30 ರಿಂದ 45 ದಿನಗಳವರೆಗಿನ FDಗಳ ಮೇಲೆ 5.25%
46 ರಿಂದ 60 ದಿನಗಳವರೆಗಿನ FDಗಳ ಮೇಲೆ 5.50%
61 ರಿಂದ 90 ದಿನಗಳವರೆಗಿನ FDಗಳ ಮೇಲೆ 5.75%
91 ರಿಂದ 184 ದಿನಗಳವರೆಗಿನ FDಗಳ ಮೇಲೆ 6.25%
185 ರಿಂದ 270 ದಿನಗಳವರೆಗಿನ FDಗಳ ಮೇಲೆ 6.50%
271 ರಿಂದ 1 ವರ್ಷದ ಒಳಗಿನ FDಗಳ ಮೇಲೆ 6.65%
1 ವರ್ಷದಿಂದ 15 ತಿಂಗಳುಗಳವರೆಗಿನ FDಗಳ ಮೇಲೆ 7.10%
15 ತಿಂಗಳುಗಳಿಂದ 2 ವರ್ಷದವರೆಗಿನ FDಗಳ ಮೇಲೆ 7.15%
2 ವರ್ಷದ 1 ದಿನದಿಂದ 3 ವರ್ಷಗಳವರೆಗಿನ FDಗಳ ಮೇಲೆ 7% ಮತ್ತು
3 ವರ್ಷದ 1 ದಿನದಿಂದ10 ವರ್ಷಗಳವರೆಗಿನ ದೊಡ್ಡ ಮೊತ್ತದ FDಗಳ ಮೇಲೆ 6.75% ಬಡ್ಡಿದರ ನೀಡಿದೆ.

ಈ ಮೊದಲು ICICI ಬ್ಯಾಂಕ್‌ 2 ಕೋಟಿ ರೂಪಾಯಿ ಒಳಗಿನ FDಗಳ ಬಡ್ಡಿದರವನ್ನು ಹೆಚ್ಚಿಸಿತ್ತು. ಅದು ಸಾಮಾನ್ಯ ಗ್ರಾಹಕರಿಗೆ 15 ತಿಂಗಳಿನಿಂದ 5 ವರ್ಷದವರೆಗಿನ ಅವಧಿಯ FDಗಳ ಮೇಲೆ ಗರಿಷ್ಟ 7% ಮತ್ತು ಸೀನಿಯರ್‌ ಸಿಟಿಜನ್‌ ಗ್ರಾಹಕರಿಗೆ 7.50% ಬಡ್ಡಿದರಗಳನ್ನು ಪರಿಷ್ಕರಿಸಿತ್ತು.

ಇದನ್ನೂ ಓದಿ : BCCI new selection committee : ಬಿಸಿಸಿಐ ನೂತನ ಆಯ್ಕೆ ಸಮಿತಿಗೆ ಮತ್ತೆ ಚೇತನ್ ಶರ್ಮಾ ಮುಖ್ಯಸ್ಥ, ಸೆಲೆಕ್ಷನ್ ಕಮಿಟಿಯಲ್ಲಿ ಕರ್ನಾಟಕದವರಿಗಿಲ್ಲ ಸ್ಥಾನ

ಇದನ್ನೂ ಓದಿ : Arecanut today price : ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ : ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟು ಗೊತ್ತಾ ?

(ICICI Bank Interest Rate increased. New rates on bulk FD are applicable from January 7 2023)

Comments are closed.