India Vs West Indies 2nd T20 : ಅಯ್ಯರ್ ಬದಲು ಹೂಡಾಗೆ ಚಾನ್ಸ್ ಸಿಗುತ್ತಾ..? ಇಲ್ಲಿದೆ ಭಾರತದ ಪ್ಲೇಯಿಂಗ್ XI, ಪಿಚ್ ರಿಪೋರ್ಟ್

ಸೇಂಟ್ ಕಿಟ್ಸ್: (India Vs West Indies 2nd T20) ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಟೀಮ್ ಇಂಡಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಇಂದು (ಆಗಸ್ಟ್ 01, ಸೋಮವಾರ) ನಡೆಯಲಿದೆ. ಮೊದಲ ಪಂದ್ಯದಲ್ಲಿ ಕೆರಿಬಿಯನ್ನರನ್ನು 68 ರನ್”ಗಳಿಂದ ಬಗ್ಗು ಬಡಿದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ರೋಹಿತ್ ಶರ್ಮಾ ಬಳಗ, 2ನೇ ಪಂದ್ಯವನ್ನೂ ಗೆದ್ದು ವಿಂಡೀಸ್ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿದ್ದು, ಟಿ20 ಸರಣಿಗೂ ಮುನ್ನ ನಡೆದಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಶಿಖರ್ ಧವನ್ ನಾಯಕತ್ವದಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.

ಸೇಂಟ್ ಕಿಟ್ಸ್”ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್”ನಲ್ಲಿ ಬದಲಾವಣೆಗಳಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ ಮೊದಲ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಸೊನ್ನೆ ಸುತ್ತಿದ್ದ ಮುಂಬೈ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ 2ನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡದಲ್ಲಿದ್ದಾರೆ. ಈಗಾಗಲೇ ಭರವಸೆ ಮೂಡಿಸಿರುವ ಆಲ್ರೌಂಡರ್ ದೀಪಕ್ ಹೂಡ ಬೆಂಚ್ ಕಾಯಿಸುತ್ತಿರುವುದರಿಂದ ಶ್ರೇಯಸ್ ಅಯ್ಯರ್ ಮೇಲೆ ಒತ್ತಡ ಹೆಚ್ಚಿದೆ. ಬಲಗೈ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ತಮ್ಮ ಕೊನೆಯ 5 ಟಿ20 ಪಂದ್ಯಗಳಲ್ಲಿ ಕೇವಲ 46 ರನ್ (14, 4, 0, 28, 0) ಕಲೆ ಹಾಕಿದ್ದಾರೆ. 27 ವರ್ಷದ ದೀಪಕ್ ಹೂಡ ಆಡಿರುವ 4 ಟಿ20 ಇನ್ನಿಂಗ್ಸ್”ಗಳಲ್ಲಿ 68.33ರ ಸರಾಸರಿಯಲ್ಲಿ 172.26 ಸ್ಟ್ರೈಕ್’ರೇಟ್’ನೊಂದಿಗೆ ಒಂದು ಶತಕ ಸಹಿತ 205 ರನ್ (21, 47, 104, 33) ಕಲೆ ಹಾಕಿದ್ದಾರೆ.

ಸೇಂಟ್ ಕಿಟ್ಸ್’ನ ವಾರ್ನರ್ ಪಾರ್ಕ್ ಮೈದಾನ ಚೇಸಿಂಗ್”ಗೆ ಉತ್ತಮ ಆಯ್ಕೆ. ಯಾಕಂದ್ರೆ ಇಲ್ಲಿ ಚೇಸಿಂಗ್ ಮಾಡಿದ ತಂಡಗಳು ಶೇಕಡ 60ರ ಗೆಲುವಿನ ಸರಾಸರಿ ಹೊಂದಿವೆ. ಇಲ್ಲಿ ಫಸ್ಟ್ ಇನ್ನಿಂಗ್ಸ್ ಸರಾಸರಿ ಸ್ಕೋರ್ 143 ರನ್.

2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್/ದೀಪಕ್ ಹೂಡ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ವಾರ್ನರ್ ಪಾರ್ಕ್ ಮೈದಾನ, ಸೇಂಟ್ ಕಿಟ್ಸ್

ಇದನ್ನೂ ಓದಿ : IND-W vs PAK-W : ಪಾಕ್ ಮಹಿಳೆಯರ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ ಜಯ

ಇದನ್ನೂ ಓದಿ : Marnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ ಆಸೀಸ್ ಕ್ರಿಕೆಟರ್ ?

India Vs West Indies 2nd T20 : Will Deepak Hooda get a chance instead of Shreyas Iyer ? Here is India’s playing XI, pitch report

Comments are closed.