ಟ್ರಿನಿಡಾಡ್: ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದಾಯ್ತು. ಈಗ ಟೀಮ್ ಇಂಡಿಯಾದ ಮುಂದಿನ ಟಾರ್ಗೆಟ್ ಟಿ20 ಸರಣಿ. ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ (India Vs West Indies T20 ) ಇಂದು (ಶುಕ್ರವಾರ) ಟ್ರಿನಿಡಾಡ್”ನ ಟರೌಬದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.ಏಕದಿನ ಸರಣಿಯಿಂದ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮಾ (India Cricket Team Captain Rohit Sharma), ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ. ಏಕದಿನ ಸರಣಿಯನ್ನು ಶಿಖರ್ ಧವನ್ ನಾಯಕತ್ವದಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ, ಟಿ20 ಸರಣಿಯನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.
ಬಲಿಷ್ಠ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿ ಗೆದ್ದಿದ್ದ ಭಾರತ, ಎರಡು ಬಾರಿಯ ವಿಶ್ವ ಚಾಂಪಿಯನ್ ವಿಂಡೀಸ್ ವಿರುದ್ಧವೂ ಸರಣಿ ಗೆಲುವಿನ ತವಕದಲ್ಲಿದೆ. ಉಭಯ ತಂಡಗಳ ಕಳೆದ ಐದು ಮುಖಾಮುಖಿಗಳಲ್ಲಿ ಭಾರತ 4 ಬಾರಿ ಗೆದ್ದಿದ್ರೆ, ವೆಸ್ಟ್ ಇಂಡೀಸ್ ಒಂದು ಪಂದ್ಯದಲ್ಲಿ ಗೆದ್ದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20: ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅರ್ಷದೀಪ್ ಸಿಂಗ್.
ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಬ್ರಿಯಾನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್
ಭಾರತ Vs ವಿಂಡೀಸ್ ಟಿ20: ಕಳೆದ 5 ಪಂದ್ಯಗಳ ಫಲಿತಾಂಶ
2022, ಫೆಬ್ರವರಿ 20 (ಕೋಲ್ಕತಾ): ಭಾರತಕ್ಕೆ 17 ರನ್ ಜಯ
2022, ಫೆಬ್ರವರಿ 18 (ಕೋಲ್ಕತಾ): ಭಾರತಕ್ಕೆ 8 ರನ್ ಜಯ
2022, ಫೆಬ್ರವರಿ 16 (ಕೋಲ್ಕತಾ): ಭಾರತಕ್ಕೆ 6 ವಿಕೆಟ್ ಜಯ
2019, ಡಿಸೆಂಬರ್ 11 (ಮುಂಬೈ): ಭಾರತಕ್ಕೆ 67 ರನ್ ಜಯ
2019, ಡಿಸೆಂಬರ್ 08 (ತಿರುವನಂತಪುರಂ): ವೆಸ್ಟ್ ಇಂಡೀಸ್’ಗೆ 8 ವಿಕೆಟ್ ಜಯ
ಇದನ್ನೂ ಓದಿ : Shubman Gill : ಓಪನಿಂಗ್ ರೇಸ್‌ನಲ್ಲಿ ಮತ್ತೊಂದು ಕುದುರೆ; ಗಿಲ್ ಕಮಾಲ್, ಯಾರಿಗೆಲ್ಲಾ ಢವ ಢವ ?
India Vs West Indies T20 first Match today, here is Team India Playing 11