Anrich Nortje : ಲಕ್ನೋ ವಿರುದ್ದ ಅನ್ರಿಚ್ ನಾಟ್ರೆಜ್‌ ಅರ್ಧಕ್ಕೆ ಬೌಲಿಂಗ್‌ ನಿಲ್ಲಿಸಿದ್ದು ಯಾಕೆ ಗೊತ್ತಾ ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ( LSG vs Delhi) ಗೆಲುವು ದಾಖಲಿಸಿದೆ. ಆದರೆ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಹಾಗೂ ದಕ್ಷಿಣ ಆಫ್ರಿಕಾದ ಬೌಲರ್‌ ಅನ್ರಿಚ್ ನಾಟ್ರೆಜ್‌ ತಂಡಕ್ಕೆ ಸೇರ್ಪಡೆಯಾಗಿರುವುದು ಡೆಲ್ಲಿ ಆಟಗಾರರಿಗೆ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಆದರೆ ಇಬ್ಬರೂ ಆಟಗಾರರು ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದ್ರು. ಅದ್ರಲ್ಲೂ ಅನ್ರಿಚ್ ನಾಟ್ರೆಜ್‌ (Anrich Nortje) ನಾಲ್ಕು ಓವರ್‌ ಪೂರ್ಣಗೊಳಿಸದೇ ಮೈದಾನದಿಂದಲೇ ಹೊರ ನಡೆಸಿದ್ದಾರೆ.

ಅನ್ರಿಚ್ ನಾಟ್ರೆಜ್‌ ಮೊದಲ ಓವರ್‌ನಲ್ಲಿ 19 ರನ್‌ ಬಿಟ್ಟುಕೊಟ್ಟಿದ್ದು, ಮತ್ತೆ 14 ನೇ ಓವರ್‌ನಲ್ಲಿ ದಾಳಿಗೆ ಮರಳಿದರು. 141.4 ಕಿಮೀ ವೇಗದಲ್ಲಿ ಬೀಮರ್ ಅನ್ನು ಬೌಲ್ ಮಾಡಿದರು, ಆದರೆ ಕ್ರೀಸ್‌ನಲ್ಲಿದ್ದ ಕ್ವಿಂಟನ್ ಡಿ ಕಾಕ್ ಸಿಕ್ಸರ್‌ ಸಿಡಿಸಿದ್ದರು. ಆದರೆ 16ನೇ ಓವರ್‌ನಲ್ಲಿ ಮತ್ತೆ ಮೂರನೇ ಓವರ್‌ ಎಸೆಯಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ಅನ್ರಿಚ್ ನಾಟ್ರೆಜ್‌ ಎರಡನೇ ಬೀಮರ್ ಎಸೆದಿದ್ದಾರೆ. ಈ ವೇಳೆಯಲ್ಲಿ ಅಂಪೈರ್‌ ನೋ ಬಾಲ್‌ ಘೋಷಣೆ ಮಾಡಿದ್ದಾರೆ. 2.2 ಓವರ್‌ ಎಸೆದಿದ್ದ ಅನ್ರಿಚ್ ನಾಟ್ರೆಜ್‌ 36 ರನ್‌ ಬಿಟ್ಟುಕೊಟ್ಟಿದ್ದರು. ಅಪಾಯಕಾರಿ ಎಸೆತವನ್ನು ಎಸೆದ ಬೆನ್ನಲ್ಲೇ ನೋ ಬಾಲ್‌ ನೀಡಿದ್ದಾರೆ. ಕೂಡಲೇ ಪಂತ್‌ ಸೂಚನೆಯ ಮೇರೆಗೆ ಅನ್ರಿಚ್ ನಾಟ್ರೆಜ್‌ ಮೈದಾನದಿಂದಲೇ ಹೊರ ನಡೆದಿದ್ದಾರೆ.

ಪಂದ್ಯವೊಂದಲ್ಲಿ ಅಪಾಯಕಾರಿ ಎಸೆತವನ್ನು ಎಸೆತಗಾರ ಎಸೆದ್ರೆ, ಮೊದಲ ಬಾರಿಗೆ ಅಂಪೈರ್‌ ವಾರ್ನಿಂಗ್‌ ನೀಡುತ್ತಾರೆ. ನಂತರ ಮತ್ತೊಂದು ಎಸೆತವನ್ನು ಎಸೆದ್ರೆ ಅಂತಹ ಬೌಲರ್‌ ಗೆ ಆ ಪಂದ್ಯದಲ್ಲಿ ಮತ್ತೆ ಬೌಲಿಂಗ್‌ ಮಾಡಲು ಅವಕಾಶವನ್ನು ನೀರಾಕರಿಸಲಾಗುತ್ತಿದೆ. ಇದೀಗ ಅನ್ರಿಚ್ ನಾಟ್ರೆಜ್‌ ಕೂಡ ಪಂದ್ಯ ನಿಷೇಧಕ್ಕೆ ಒಳಗಾಗಿದ್ದಾರೆ. ICC ಕಾನೂನು 41.7.4 ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅನ್ರಿಚ್ ನಾಟ್ರೆಜ್‌ ಮೈದಾನದಿಂದ ಹೊರ ನಡೆಯುತ್ತಲೇ ಡೆಲ್ಲಿ ಸೋಲಿನ ದವಡೆಗೆ ಸಿಲುಕಿತ್ತು. ಹಲವು ಸಮಯದಿಂದಲೂ ಗಾಯದ ಸಮಸ್ಯೆಯಿಂದ ಬಳಲಿದ್ದ ಅನ್ರಿಚ್ ನಾಟ್ರೆಜ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೇಳೆಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಆರಂಭದಿಂದಲೂ ಲಯ ಕಂಡುಕೊಳ್ಳುವಲ್ಲಿ ಸಾಕಷ್ಟು ಎಡವಿದ್ದಾರೆ.

ಇದನ್ನೂ ಓದಿ : ಕೆಕೆಆರ್ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ ಸ್ಪೋಟಕ ಆಟ, ವೈರಲ್‌ ಆಯ್ತುಆಂಡ್ರೆ ರಸೆಲ್ ಡ್ಯಾನ್ಸ್ ವಿಡಿಯೋ

ಇದನ್ನೂ ಓದಿ : LSG vs DC : ಡೆಲ್ಲಿ ಎದುರು ಗೆದ್ದ ಲಕ್ನೋ : ಮತ್ತೆ ಮ್ಯಾಚ್‌ ಫಿನಿಷರ್‌ ಆದ ಆಯುಷ್‌ ಬಡೋನಿ

IPL 2022 LSG vs Delhi : Why was Anrich Nortje taken off attack after 14 balls?

Comments are closed.