IPL 2023 : ಐಪಿಎಲ್ ಗೆ ಕರೋನಾ ಭಯ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಈಗಾಗಲೇ ಪ್ರಾರಂಭವಾಗಿದ್ದು, ಕ್ರೀಡಾಗಂಣದಲ್ಲಿ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದಾರೆ. ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಐಪಿಎಲ್‌ ವೀಕ್ಷಕರು ತುಂಬಿದ್ದು, ಕೋವಿಡ್‌ ನಿಯಮವನ್ನು ಗಾಳಿಗೆ (Corona fear for IPL) ತೂರಿಬಿಟ್ಟಿದ್ದಾರೆ. ದೇಶದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಇಲಾಖೆಯು ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಈ ಹಿನ್ನಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಗಂಣದಲ್ಲಿ ಪ್ರತ್ಯೇಕ ರೂಲ್ಸ್‌ ತರಲು ಆರೋಗ್ಯ ಇಲಾಖೆ ಪ್ಲಾನ್‌ ಮಾಡಿಕೊಂಡಿದೆ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದುಕೊಂಡು, ಏನೆಲ್ಲಾ ನಿಯಮಗಳನ್ನು ಜಾರಿಗೆ ಮಾಡಬಹುದು ಎಂದು ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಒಂದು ವೇಳೆ ಕೊರೊನಾ ವೈರಸ್‌ ಏರಿಕೆಯಾದರೇ, ಮೈದಾನದ ಒಳಗೆ ಪ್ರವೇಶಿಸುವಾಗ ಮಾಸ್ಕ್‌, ಸಾಮಾಜಿಕ ಅಂತರ ಹಾಗೂ ಥರ್ಮಲ್‌ ಸ್ಕ್ಯಾನಿಂಗ್‌ನ್ನು ಜಾರಿ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ ರಂದೀಪ್‌ ಹೇಳಿದ್ದಾರೆ.

ವರ್ಷದ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಸೂಚನೆಯೊಂದಿಗೆ ತಮ್ಮ ಅಭಿಯಾನಿಗಳಿಗೆ ಸಂತಸವನ್ನು ನೀಡಿದ್ದಾರೆ. ಮೊದಲ ಪಂದ್ಯದಲ್ಲಿಯೇ ಅತ್ಯುತ್ತಮ ಪ್ರದರ್ಶನ ನೀಡಿರುವ ಆರ್ ಅಸಿಬಿ ತಂಡ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಮುಂಬೈ ಇಂಡಿಯನ್ಸ್ 19.1 ಓವರ್‌ಗಳಲ್ಲಿ 150 ರನ್‌ಗಳ ಗಡಿ ದಾಟಿತು. ಮುಂಬೈ ಇಂಡಿಯನ್ಸ್ ತಮ್ಮ ಇನ್ನಿಂಗ್ಸ್ ಅನ್ನು 171/7 ಕ್ಕೆ ಮುಗಿಸಿದರು. ತಿಲಕ್ ಒನ್ ಮ್ಯಾನ್ ಆರ್ಮಿ, 46 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 84 ರನ್ ಗಳಿಸಿದರು. ಆರ್‌ಸಿಬಿ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ : RCB fan insulted Panjurli Daiva : ಆರ್‌ಸಿಬಿ ಅಭಿಮಾನಿಯಿಂದ ಪಂಜುರ್ಲಿ ದೈವಕ್ಕೆ ಇದೆಂಥಾ ಅವಮಾನ..? ಎಲ್ಲಾ ಕಾಂತಾರಾ ಎಫೆಕ್ಟ್!

ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ದೇಶಾದ್ಯಂತ ಪ್ರತಿದಿನ ಸುಮಾರು 3,000 ಪ್ರಕರಣಗಳು ವರದಿಯಾಗುತ್ತಿವೆ. ರಾಷ್ಟ್ರೀಯ ರಾಜಧಾನಿಯು ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದ್ದು, ದೈನಂದಿನ ಸೋಂಕುಗಳ ಸಂಖ್ಯೆ 400 ಕ್ಕಿಂತ ಹೆಚ್ಚಿದೆ. ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು ಚಾಲ್ತಿಯಲ್ಲಿರುವ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

IPL 2023: Corona fear for IPL: Strict rules enforced at Chinnaswamy Stadium

Comments are closed.