FIR against DK Sivakumar: ಚುನಾವಣೆ ಹೊತ್ತಲ್ಲೇ ಡಿಕೆಶಿ ಗೆ ಎದುರಾಯ್ತು ಸಂಕಷ್ಟ : ಕೆಪಿಸಿಸಿ ಅಧ್ಯಕ್ಷ ವಿರುದ್ದ ಎಫ್‌ಐಆರ್‌ ದಾಖಲು

ಬೆಂಗಳೂರು : (FIR against DK Sivakumar) ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಗೆ ಸಂಕಷ್ಟ ಎದುರಾಗಿದ್ದು, ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರ ಮೇಲೆ ೫೦೦ ರೂ ಗಳ ನೋಟು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್‌ ವಿರುದ್ದ ಎಫ್‌ಐಆರ್‌ ದಾಖಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಡಿಕೆ ಶಿವಕುಮಾರ್​​ ವಿರುದ್ಧ ಎಫ್​ಐಆರ್​ ದಾಖಲಾಗಿದೆ

ಮಾರ್ಚ್ 28ರಂದು ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಬೇವಿನಹಳ್ಳಿ ಗ್ರಾಮದಲ್ಲಿ ಪ್ರಜಾಧ್ವನಿ ಯಾತ್ರೆ ವೇಳೆ ಬಸ್​ ಮೇಲಿಂದ ಕಲಾವಿದರತ್ತ 500 ರೂ. ಗಳ ನೋಟುಗಳನ್ನು ಎಸೆದಿದ್ದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಆಫೀಸರ್​ ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯ ಮಂಡ್ಯ ಪೊಲೀಸರಿಗೆ ಆದೇಶಿಸಿದ್ದು, ಅದರಂತೆ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860 u/s 17 E ಆರ್​ಪಿ ಆಕ್ಟ್ ಪ್ರಕಾರ ಎಫ್​ಐಆರ್ ಪ್ರಕರಣ ದಾಖಲಾಗಿದೆ. ಇದೀಗ ನ್ಯಾಯಾಲಯದ ಆದೇಶದಂತೆ ನಿನ್ನೆ(ಏಪ್ರಿಲ್ 03) ಡಿಕೆ ಶಿವಕುಮಾರ್​ ವಿರುದ್ದ ಎಫ್‌ಐ‌ಆರ್ ದಾಖಲಾಗಿದೆ.

ಇನ್ನೂ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿರೋ ಸಿದ್ದರಾಮಯ್ಯ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸ್ಥಾನ ಭದ್ರಪಡಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದರೇ, ಮೊದಲ ಬಾರಿಗೆ ಸಿಎಂ ಸ್ಥಾನಕ್ಕೇರೋ ಕನಸಿನಲ್ಲಿದ್ದಾರೆ. ಶತಾಯ ಗತಾಯ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದು ಸಿಎಂ ಸ್ಥಾನಕ್ಕೇರಬೇಕೆಂಬ ಕನಸಿನಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕಾಗಿ ಇನ್ನಿಲ್ಲದ ಕರಸತ್ತು ನಡೆಸಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟಿಸಲು ಪಾದಯಾತ್ರೆ, ರಥಯಾತ್ರೆ ಹೀಗೆ ಅನೇಕ ರೀತಿಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಜೀನಾಮೆಗೂ ಮುನ್ನ ಕ್ಷೇತ್ರದ ಜನರನ್ನು ನೆನೆದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದಿಷ್ಟು !

ಇದನ್ನೂ ಓದಿ : Haladi Srinivas Shetty: ಕುಂದಾಪುರ ವಾಜಪೇಯಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ! ಬುಗಿಲೆದ್ದ ಅಸಮಾಧಾನ

ಇದನ್ನೂ ಓದಿ : ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿ : ರಾಜಕೀಯ ನಿವೃತ್ತಿ ಘೋಷಣೆ

FIR against DK Sivakumar: Difficulty faced by DK Sivakumar during elections: FIR filed against KPCC president

Comments are closed.