ಭಾನುವಾರ, ಏಪ್ರಿಲ್ 27, 2025
HomeSportsCricketSuresh Rains Retires: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ...

Suresh Rains Retires: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ

- Advertisement -

ಮುಂಬೈ: ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಎಡಗೈ ದಾಂಡಿಗ ಸುರೇಶ್ ರೈನಾ ಕ್ರಿಕೆಟ್’ಗೆ (Suresh Raina RETIRE IPL 2023) ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಆಡಲು ರೈನಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಟ್ವಿಟರ್ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ರೈನಾ ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜೀವ್ ಶುಕ್ಲಾಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹಾಗಾದ್ರೆ ಕ್ರಿಕೆಟ್’ನಿಂದ ನಿವೃತ್ತಿಯಾದ್ಮೇಲೆ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಆಡಲು ಹೇಗೆ ಸಾಧ್ಯ? ಸುರೇಶ್ ರೈನಾ ಅವರ ನಿವೃತ್ತಿಯ ಹಿಂದಿರುವ ಅಸಲಿ ಗುಟ್ಟು ಇದೇ. ರೈನಾ ವಿದಾಯ ಹೇಳಿರುವುದು ಐಪಿಎಲ್, ಬಿಸಿಸಿಐ ಆಯೋಜಿಸುವ ದೇಶೀಯ ಕ್ರಿಕೆಟ್’ಗೆ. ವಿದೇಶೀ ಟಿ20 ಲೀಗ್’ಗಳಲ್ಲಿ ಭಾರತೀಯ ಆಟಗಾರರು ಆಡಬೇಕು ಅಂದ್ರೆ, ಅಂತಾರಾಷ್ಟ್ರೀಯ ಕ್ರಿಕೆಟ್, ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲೇಬೇಕು. ಈ ಪೈಕಿ ಯಾವುದಾದರೊಂದು ಪ್ರಕಾರದಲ್ಲಿ ಆಡುತ್ತಿದ್ದರೂ, ಭಾರತೀಯ ಆಟಗಾರರು ವಿದೇಶೀ ಲೀಗ್’ಗಳಲ್ಲಿ ಆಡುವಂತಿಲ್ಲ. ಇದು ಬಿಸಿಸಿಐ ನಿಯಮ. ಈ ಕಾರಣದಿಂದ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಆಡಲು ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್’ಗೆ ರೈನಾ ವಿದಾಯ ಹೇಳಿದ್ದಾರೆ.

ಐಪಿಎಲ್’ನಲ್ಲಿ 13 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ಸುರೇಶ್ ರೈನಾ ಅವರನ್ನು ಕಳೆದ ವರ್ಷ ಸಿಎಸ್’ಕೆ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿತ್ತು. ಐಪಿಎಲ್ ಆಟಗಾರರ ಹರಾಜಿನಲ್ಲೂ ರೈನಾ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಹೀಗಾಗಿ ಮತ್ತೆ ಐಪಿಎಲ್’ನಲ್ಲಿ ಸುರೇಶ್ ರೈನಾ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. ಈ ಹಿನ್ನೆಲೆಯಲ್ಲಿ ವಿದೇಶೀ ಟಿ20 ಲೀಗ್’ಗಳತ್ತ ರೈನಾ ಗಮನ ಹರಿಸಿದ್ದಾರೆ. ಇದಕ್ಕಾಗಿ ಈಗಾಗಲೇ ರೈನಾ ಅಭ್ಯಾಸ ಆರಂಭಿಸಿದ್ದು, ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿ ಧರಿಸಿ ಅಭ್ಯಾಸ ನಡೆಸಿದ ವೀಡಿಯೋ ವೈರಲ್ ಆಗಿತ್ತು.

2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ 35 ವರ್ಷದ ಸುರೇಶ್ ರೈನಾ ಭಾರತ ಪರ ಒಟ್ಟು 78 ಟಿ20 ಪಂದ್ಯಗಳನ್ನಾಡಿದ್ದು, ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 1,605 ರನ್ ಗಳಿಸಿದ್ದಾರೆ. 18 ಟೆಸ್ಟ್ ಪಂದ್ಯಗಳನ್ನೂ ಆಡಿರುವ ರೈನಾ ಒಂದು ಶತಕ, 7 ಅರ್ಧಶತಕಗಳೊಂದಿಗೆ 768 ರನ್ ಹಾಗೂ 226 ಏಕದಿನ ಪಂದ್ಯಗಳಿಂದ 5 ಶತಕ ಮತ್ತು 36 ಅರ್ಧಶತಕಗಳೊಂದಿಗೆ 5,615 ರನ್ ಕಲೆ ಹಾಕಿದ್ದಾರೆ. ಒಟ್ಟು 205 ಐಪಿಎಲ್ ಪಂದ್ಯಗಳನ್ನಾಡಿರುವ ಸುರೇಶ್ ರೈನಾ ಒಂದು ಶತಕ ಹಾಗೂ 39 ಅರ್ಧಶತಕಗಳ ಸಹಿತ 5,528 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

ಇದನ್ನೂ ಓದಿ : MS Dhoni captaincy : ವಿರಾಟ್, ರೋಹಿತ್ ನಾಯಕತ್ವಕ್ಕಿಂತ ಪಾಕಿಸ್ತಾನ ವಿರುದ್ಧ ಧೋನಿ ಕ್ಯಾಪ್ಟನ್ಸಿಯೇ ಬೆಸ್ಟ್

IPL 2023 CSK legend Suresh Raina RETIRE from IPL and Domestic Cricket

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular