Realme C33 : ಭಾರತದಲ್ಲಿ ಬಿಡುಗಡೆಯಾಗುತ್ತಿರುವ ರಿಯಲ್‌ಮಿ C33 ಸ್ಮಾರ್ಟ್‌ಫೋನ್‌ : ಆಕರ್ಷಕ ಸ್ಯಾಂಡಿ ಗೋಲ್ಡ್‌ ಬಣ್ಣ ಇದರ ವಿಶೇಷತೆ

ಚೈನಾದ ಮೊಬೈಲ್‌ ತಯಾರಿಕಾ ಕಂಪನಿಯಾದ ರಿಯಲ್‌ಮಿ (Realme), ತನ್ನ ಹೊಸ C ಶ್ರೇಣಿಯ ರಿಯಲ್‌ಮಿ C33 (Realme C33) ಸ್ಮಾರ್ಟ್‌ಫೋನ್‌ (Smartphone) ಅನ್ನು ಇಂದು ಸೆಪ್ಟೆಂಬರ್‌ 6 ರಂದು ಅನಾವರಣಗೊಳಿಸುತ್ತಿದೆ. ಅತ್ಯಂತ ಆಕರ್ಷಕ ಬಣ್ಣ ಮತ್ತು ಸ್ಲಿಮ್‌ ಬಾಡಿ ಹೊಂದಿರುವ ಈ ಫೋನ್‌ 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಈ ಹ್ಯಾಂಡ್‌ಸೆಟ್‌ ಅಲ್ಟ್ರಾ–ಸೇವಿಂಗ್‌ ಮೋಡ್‌ ಎಂಬ ವೈಶಿಷ್ಟ್ಯವನ್ನು ಹೊಂದಿದ್ದು ಹೆಚ್ಚಿನ ಬ್ಯಾಟರಿ ಲೈಫ್‌ ನೀಡಲಿದೆ.

ರಿಯಲ್‌ಮಿ C33 ಫೋನ್‌, ಮಾರ್ಚನಲ್ಲಿ ಬಿಡುಗಡೆಯಾಗಿದ್ದ ರಿಯಲ್‌ಮಿ C31 ನ ನಂತರದ ಆವೃತ್ತಿಯಾಗಿದೆ. ಇದು ರೆಡ್‌ಮಿಯ 11 ಪ್ರೈಮ್‌ ಸರಣಿಯ ಫೋನ್‌ಗಳಿಗೆ ಪ್ರತಿಸ್ಪರ್ಧೆ ನೀಡುವ ಗುರಿಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್‌ ಗಳು ಇಂದೇ ಬಿಡುಗಡೆಗೊಳ್ಳುತ್ತಿರುವುದು ವಿಶೇಷವಾಗಿದೆ. ರಿಯಲ್‌ಮಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ಸ್ಮಾರ್ಟ್‌ಫೋನ್‌ ಅತ್ಯಧಿಕ ಪಿಕ್ಸೆಲ್‌ ಕಾರ್ಯಕ್ಷಮತೆಯನ್ನು ನೀಡಲಿದೆ.

ರಿಯಲ್‌ಮಿ C33 ಸ್ಮಾರ್ಟ್‌ಫೋನ್ ನ ಬೆಲೆ ಮತ್ತು ವೈಶಿಷ್ಟ್ಯತೆಗಳು :

  • ರಿಯಲ್‌ಮಿ C33 ಫೋನ್‌ Unisoc T612 ಪ್ರೊಸೆಸ್ಸರ್‌ನಿಂದ ಚಾಲನೆಗೊಳ್ಳಲಿದೆ. 4 ಜಿಬಿ RAM ಮತ್ತು 1 ಟಿಬಿ ವರೆಗೆ ವಿಸ್ತರಿಸಬಹುದಾದ ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ.
  • 6.5 ಇಂಚಿನ ಡಿಸ್ಪ್ಲೇ ಹೊಂದಿರುವ ಇದು ಹೆಚ್ಚಿನ ರಿಫ್ರೆಶ್‌ ದರ ಮತ್ತು IPS LCD ಪ್ಯಾನಲ್‌ ಪಡೆದುಕೊಂಡಿದೆ. ಈ ಫೋನ್‌ ನಯವಾಗಿ ಮತ್ತು ಸ್ಲಿಮ್‌ ಆಗಿದ್ದು ನೋಡಲು ಆಕರ್ಷಕವಾಗಿದೆ.
  • ರಿಯಲ್‌ಮಿ C33 ಸಹ ಇದರ ಹಿಂದಿನ ಆವೃತ್ತಿಯ ಫೋನ್‌ನಂತೆ ಸ್ಲಿಮ್‌ ಆಗಿದ್ದು 8.33 mm ದೇಹವನ್ನು ಪಡೆದುಕೊಂಡಿದೆ. ಈ ಫೋನ್‌ ನ ತೂಕವು 187 ಗ್ರಾಂ ಆಗಿರುತ್ತದೆ.
  • ಹಿಂಬಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌–ಅಪ್‌ ಹೊಂದಿದ್ದು, ಸ್ಯಾಂಡಿ ಗೋಲ್ಡ್‌, ಕಪ್ಪು ಮತ್ತು ಹಸಿರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಬಹುದು ಎನ್ನಲಾಗುತ್ತಿದೆ.
  • ಇದು ಬಜೆಟ್‌ ಫ್ರೆಂಡ್ಲಿ ಫೋನ್‌ ಆಗಿದ್ದು, ಸೈಡ್‌–ಮೌಂಟೆಡ್‌ ಪಿಂಗರ್‌ ಪ್ರಿಂಟ್‌ ರೀಡರ್‌ ಹೊಂದಿರುತ್ತದೆ.
  • ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್‌ ಆಗಲಿರುವ ಸ್ಮಾರ್ಟ್‌ಫೋನ್‌ ನ ಬೆಲೆಯು 11,999 ರೂ. ಎಂದು ಹೇಳಲಾಗುತ್ತಿದೆ.
  • ರಿಯಲ್‌ಮಿ C33 ಯು ರೆಡ್‌ಮಿ 11 ಪ್ರೈಮ್‌ ಸರಣಿಯ ಫೋನ್‌ಗಳೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : Redmi A1 and Redmi 11 Prime : ಶಿಯೋಮಿಯ ಬಹುನೀರಿಕ್ಷಿತ ರೆಡ್‌ಮಿ A1 ಮತ್ತು ರೆಡ್‌ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಅನಾವರಣ

ಇದನ್ನೂ ಓದಿ : Renault : ಹಬ್ಬದ ಕೊಡುಗೆಯಾಗಿ ಕಿಗರ್, ಟ್ರೈಬರ್ ಮತ್ತು ಕ್ವಿಡ್‌ ಗಳ ಸೀಮಿತ ಆವೃತ್ತಿಗಳನ್ನು ಬಿಡುಗಡೆ ಮಾಡಿದ ರೆನಾಲ್ಟ್‌

(Realme C33 Chinese mobile launched in India on September 6 check the price and specification)

Comments are closed.