ಶನಿವಾರ, ಏಪ್ರಿಲ್ 26, 2025
HomeSportsCricketIPL 2025: RCB vs KKR - ಇಂದಿನಿಂದ ಐಪಿಎಲ್‌ ಹಬ್ಬ : ಆರ್‌ಸಿಬಿಗೆ ಕೋಲ್ಕತ್ತಾ...

IPL 2025: RCB vs KKR – ಇಂದಿನಿಂದ ಐಪಿಎಲ್‌ ಹಬ್ಬ : ಆರ್‌ಸಿಬಿಗೆ ಕೋಲ್ಕತ್ತಾ ಸವಾಲು

Kolkata Knight Riders vs Royal Challengers Bengaluru : ಐಪಿಎಲ್‌ ಪಂದ್ಯಾವಳಿಯಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ತಂಡಗಳು ಒಟ್ಟು 34 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಕೆಕೆಆರ್‌ ತಂಡ 20 ಬಾರಿ ಗೆಲುವು ಸಾಧಿಸಿದೆ.

- Advertisement -

IPL 2025 RCB vs KKR : ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2025ನೇ ಆವೃತ್ತಿ ಇಂದಿನಿಂದ ಆರಂಭಗೊಳ್ಳಲಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ತಂಡವನ್ನು ಎದುರಿಸಲಿದೆ. ಎರಡೂ ತಂಡಗಳ ಆಡುವ ಬಳಗ ಹೇಗಿದೆ ನೋಡೊಣಾ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಹೊಸ ನಾಯಕನೊಂದಿಗೆ ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯುತ್ತಿವೆ. ಆರ್‌ಸಿಬಿ ತಂಡವನ್ನು ರಜತ್‌ ಪಾಟೀದಾರ್‌ ಮುನ್ನೆಡೆಸುತ್ತಿದ್ರೆ, ಕೆಕೆಆರ್‌ ತಂಡಕ್ಕೆ ಅಜಿಂಕ್ಯಾ ರಹಾನೆ ನಾಯಕರಾಗಿದ್ದಾರೆ.

IPL 2025 RCB vs KKR - IPL festival from today Kolkata Knight Riders vs Royal Challengers Bengaluru
Image Credit to Original Source

ಮೇಲ್ನೋಟಕ್ಕೆ ಎರಡೂ ತಂಡಗಳು ಹೆಚ್ಚು ಬಲಿಷ್ಠವಾಗಿದೆ. ಆದರೆ ಐಪಿಎಲ್‌ ಪಂದ್ಯಾವಳಿಯಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ತಂಡಗಳು ಒಟ್ಟು 34 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಕೆಕೆಆರ್‌ ತಂಡ 20 ಬಾರಿ ಗೆಲುವು ಸಾಧಿಸಿದೆ.

ರಾಯಲ್‌ ಚಾಲೆಂಜರ್ಸ್‌ ತಂಡ ಅತ್ಯಧಿಕ 221 ರನ್‌ ಬಾರಿಸಿದ್ರೆ, ಕೆಕೆಆರ್‌ ತಂಡ ಅತ್ಯಧಿಕ ಅಂದ್ರೆ 222 ರನ್‌ ಸಿಡಿಸಿದೆ. ಅತ್ಯಂತ ಕಡಿಮೆ ರನ್‌ಗೆ ಆಲೌಟ್‌ ಆಗಿರುವ ತಂಡಗಳ ಪೈಕಿ ರಾಯಲ್‌ ಚಾಲೆಂಜರ್ಸ್‌ ಕಳಪೆ ಸಾಧನೆಯನ್ನು ಮಾಡಿದೆ. ಆರ್‌ಸಿಬಿ 49 ರನ್‌ಗಳಿಗೆ ಆಲೌಟ್‌ ಆಗಿದ್ರೆ, ಕೆಕೆಆರ್‌ 84 ರನ್‌ ಗಳಿಗೆ ಆಲೌಟ್‌ ಆಗಿರುವ ದಾಖಲೆಯನ್ನು ಹೊಂದಿದೆ.

ಈಡನ್‌ ಗಾರ್ಡನ್‌ನ ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚು ನೆರವಾಗಲಿದೆ. ಅಲ್ಲದೇ ವೇಗದ ಬೌಲರ್‌ಗಳು ಉತ್ತಮ ದಾಳಿಯನ್ನು ಸಂಘಟಿಸಬಹುದಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಆದರೆ ಆಲ್‌ರೌಂಡರ್‌ ವಿಭಾಗದಲ್ಲಿ ಹೆಚ್ಚಿನ ಆಯ್ಕೆ ಸಿಗೋದಿಲ್ಲ.

IPL 2025 RCB vs KKR - IPL festival from today Kolkata Knight Riders vs Royal Challengers Bengaluru
Image Credit to Original Source

ವಿರಾಟ್‌ ಕೊಹ್ಲಿ ಜೊತೆಗೆ ಫಿಲಿಫ್‌ ಸಾಲ್ಟ್‌ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ರೆ ದೇವದತ್‌ ಪಡಿಕ್ಕಲ್‌ ಜೊತೆಗೆ ನಾಯಕ ರಜತ್‌ ಪಾಟೀದಾರ್‌ ತಂಡಕ್ಕೆ ನೆರವಾಗಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್‌, ಟೀಮ್‌ ಡೇವಿಡ್‌ ಜೊತೆಗೆ ಕೃನಾಲ್‌ ಪಾಂಡ್ಯ ತಂಡಕ್ಕೆ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಹಜಲ್‌ವುಡ್‌, ಯಶ್‌ ದಯಾಳ್‌ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಅತೀ ಹೆಚ್ಚು ಆಲ್‌ರೌಂಡರ್‌ಗಳನ್ನು ಒಳಗೊಂಡಿದೆ. ಸುನಿಲ್‌ ನರೇನ್‌, ಕ್ವಿಂಟನ್‌ ಡಿಕಾಕ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಇನ್ನೊಂದಡೆ ನರೇನ್‌ ಬದಲು ರಿಂಕು ಸಿಂಗ್‌ ಕೂಡ ಆರಂಭಿಕನಾಗಿ ಕಣಕ್ಕೆ ಇಳಿಯಬಹುದಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಚಾಂಪಿಯನ್ಸ್‌ ಟ್ರೋಫಿಯ ಹೀರೋ ವರಣ್‌ ಚಕ್ರವರ್ತಿ, ಹರ್ಷಿತ್‌ ರಾಣಾ ಇದ್ದಾರೆ.

ಕೆಕೆಆರ್‌ ಹಾಗೂ ಆರ್‌ಸಿಬಿ ಸಂಭಾವ್ಯ ತಂಡಗಳು : IPL 2025 RCB vs KKR

ಕೋಲ್ಕತ್ತಾ ನೈಟ್‌ ರೈಡರ್ಸ್‌

ಕೆಕೆಆರ್‌ ಸಂಭಾವ್ಯ XII: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ಅಯ್ಯರ್, ಅಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್‌ಸಿಬಿ ಸಂಭಾವ್ಯ XII: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ/ರಸಿಖ್ ದಾರ್ ಸಲಾಂ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ:
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಸ್ವಪ್ನಿಲ್ ಸಿಂಗ್, ಲುಂಗಿಯೋ ಶೆಫರ್, ಲುಂಗಿಯೋ ಶೆಫರ್, ಮಾನ್‌ಮರಿಯೋ ಶೆಫರ್, ರಾಯಲ್ ಶೆಫರ್ ನುವಾನ್ ತುಷಾರ, ಜೇಕಬ್ ಬೆಥೆಲ್, ಸುಯಶ್ ಶರ್ಮಾ, ಮೋಹಿತ್ ರಥಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್‌

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ(ನಾಯಕ), ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸ್ಪೆನ್ಸರ್ ಜಾನ್ಸನ್, ವೈಭವ್, ಮನ್‌ದೀನ್ ಅರೋರಾ, ಜಿ ರಹಮಾನ್‌ಉಲ್ಲಾ, ಜಿ. ಅನ್ರಿಚ್ ನಾರ್ಟ್ಜೆ, ರೋವ್ಮನ್ ಪೊವೆಲ್, ಅನುಕುಲ್ ರಾಯ್, ಮಯಾಂಕ್ ಮಾರ್ಕಂಡೆ, ಚೇತನ್ ಸಕರಿಯಾ, ಲುವ್ನಿತ್ ಸಿಸೋಡಿಯಾ

IPL 2025 RCB vs KKR – IPL festival from today Kolkata Knight Riders vs Royal Challengers Bengaluru

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular