IPL 2022 Auction Live Updates in Kannada : ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯ ಎರಡನೆ ದಿನವಾದ ಇಂದು (ಫೆಬ್ರವರಿ 13) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಇಬ್ಬರು ಆಟಗಾರರನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ನಿನ್ನೆ ಅಂದರೆ ಮೊದಲ ದಿನದಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸಿದ್ದ ಆರ್‌ಸಿಬಿ ಇಂದು ಅಂದರೆ 2ನೇ ದಿನ (IPL Auction Day 2 Updates) ಆಲ್ರೌಂಡರ್ ಮಹಿಪಾಲ್ ಲೋಮ್ರರ್ ಅವರನ್ನು 95 ಲಕ್ಷಕ್ಕೆ ತನ್ನದಾಗಿಸಿಕೊಂಡಿತು. ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಶೆರ್ಫಾನ್ ರುದರ್ಫೋರ್ಡ್ ಅವರನ್ನು 1 ಕೋಟಿ ನೀಡಿ ತನ್ನ ಪಾಳಯಕ್ಕೆ ಸೇರಿಸಿಕೊಂಡಿದೆ. ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರಿಗೆ 47 ಕೋಟಿ 75 ಲಕ್ಷದಷ್ಟು ದೊಡ್ಡ ಹಣವನ್ನು ಖರ್ಚು ಮಾಡಿದ್ದ ಆರ್‌ಸಿಬಿ ಖರೀದಿಸಿತ್ತು.
ನಿನ್ನೆ ಮತ್ತು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ ಆಟಗಾರರನ್ನು ಮತ್ತು ಹಳೆಯ ಆಟಗಾರರನ್ನು ಕೂಡಿಸಿ ಆರ್‌ಸಿಬಿಯಲ್ಲಿ ಒಟ್ಟು ಸೇರಿದಂತೆ ಆರ್‌ಸಿಬಿ ತಂಡದಲ್ಲಿ 14 ಆಟಗಾರರು ಪ್ರಸ್ತುತ ಲಭ್ಯರಿದ್ದಾರೆ. ಕೆಲವು ವರದಿಗಳ ಪ್ರಕಾರ RCB ಫಾಫ್ ಡು ಪ್ಲೆಸಿಸ್‌ಗೆ ನಾಯಕತ್ವವನ್ನು ನೀಡಲಿದೆ ಎಂದು ಹೇಳಲಾಗಿದೆ. ಆಕಾಶ್ ದೀಪ್ 20 ಲಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅನುಜ್ ರಾವತ್ 3.40 ಕೋಟಿ ರೂ. ಶಹಬಾಜ್ ಅಹಮದ್ 2.40 ಕೋಟಿಗೆ RCB ಸೇರಿದರು. ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್‌ಗೆ 7.75 ಕೋಟಿಗೆ ಸೇರಿಕೊಂಡಿದ್ದಾರೆ.
ಹರ್ಷಲ್ ಪಟೇಲ್ 10.75 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದಾರೆ, ದಕ್ಷಿಣಾ ಆಫ್ರಿಕಾದ ಬೌಲರ್ ಕಗ್ಗಿಸೋ ರಬಾಡ ಅವರನ್ನು 9.25 ಕೋಟಿ ಕೊಟ್ಟು ಪಂಜಾಬ್ ಕಿಂಗ್ಸ್ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಕರ್ನಾಟಕದ ದೇವದತ್ತ ಪಡೀಕಲ್ 7. 75 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಅತಿ ಕಡಿಮೆ ಮೊತ್ತಕ್ಕೆ ಮಾರಾಟವಾದವರು ರಾಬಿನ್ ಉತ್ತಪ್ಪ ಹಾಗೂ ಜಾಸನ್ ರಾಯ್. ತಲಾ ಎರಡು ಕೋಟಿಗೆ ಮೊತ್ತಕ್ಕೆ ಚೆನ್ನೈಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಹರಾಜು ಅಂಗಳದಲ್ಲಿರುವ ಸುರೇಶ್ ರೈನ, ದಕ್ಷಿಣಾ ಆಫ್ರಿಕಾದ ದೈತ್ಯ ಆಟಗಾರ ಡೇವಿಡ್ ಮಿಲ್ಲರ್, ಆಸ್ಟ್ರೇಲಿಯಾದ ಆಟಗಾರ ಸ್ಟಿವನ್ ಸ್ಮಿತ್, ಶಖಿಬ್ ಹಾಸನ್ ಅವರುಗಳು ಈ ತನಕ ಮಾರಾಟವಾಗದೇ ಉಳಿದ ಆಟಗಾರರಾಗಿದ್ದಾರೆ. ಈ ಬಾರಿಯ ಐಪಿಎಲ್ ನ ವಿಶೇಷ ಎಂದರೆ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಗೇಂಟ್ಸ್ ಎನ್ನುವ ಎರಡು ಹೊಸ ತಂಡಗಳು ಸೇರ್ಪಡೆಯಾಗಿರುವುದು.
(IPL Auction Day 2 Updates RCB buy Full List of Players)