Karnataka College Start : ಮುಂದಿನ ವಾರದಿಂದ ಪದವಿ ತರಗತಿಗಳು ಆರಂಭ : ಸಚಿವ ಬಿ.ಸಿ.ನಾಗೇಶ್‌

ಹಾಸನ : ಹಿಜಾಬ್‌ ವಿವಾದದಿಂದಾಗಿ ಬಂದ್‌ ಆಗಿರುವ ಪದವಿ ಪೂರ್ವ ಕಾಲೇಜು ಹಾಗೂ ಪದವಿ ತರಗತಿಗಳು (Karnataka College Start ) ಮುಂದಿನ ವಾರದಿಂದ ಆರಂಭವಾಗಲಿದೆ. ಸೋಮವಾರ ದಂದು ಪ್ರೌಢಶಾಲೆಗಳು ಪುನರಾರಂಭವಾಗಲಿದೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪುನರಾರಂಭ ಮಾಡುವ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿಯಲ್ಲಿ ವಿವಾದವನ್ನು ಹುಟ್ಟು ಹಾಕಿರುವ ವಿದ್ಯಾರ್ಥಿನಿಯರು ಡಿಸೆಂಬರ್‌ 28 ರ ವರೆಗೆ ಶಾಲೆಯ ಸಮವಸ್ತ್ರ ದಲ್ಲಿಯೇ ಶಾಲೆಗೆ ಬರುತ್ತಿದ್ದರು. ಆದರೆ ಆ ಬಳಿಕ ಸಮವಸ್ತ್ರದ ಜೊತೆಗೆ ಹಿಜಾಬ್‌ ಧರಿಸಿ ಶಾಲೆಗೆ ಬರುವುದಾಗಿ ಹಟ ಹಿಡಿದಿದ್ದಾರೆ. ಆದರೆ ವಿದ್ಯಾರ್ಥಿನಿಯರ ವರ್ತನೆಗೆ ಕಾರಣವೇನು ಅನ್ನೋದು ಗೊತ್ತಿಲ್ಲ. ಆದರೆ ಈ ವಿವಾದವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯನ್ನಾಗಿ ಪರಿವರ್ತಿಸಲು ಹವಣಿಸುತ್ತಿದ್ದಾರೆ ಎಂದಿದ್ದಾರೆ.

ಹಿಜಾಬ್‌ ವಿವಾದದಲ್ಲಿ ರಾಜಕೀಯ ಪಾರ್ಟಿಯೊಂದು ತಳುಕು ಹಾಕಿದ್ದರಿಂದಾಗಿ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ದೇಶದ ಪ್ರಜೆಯಾಗಿ, ನ್ಯಾಯಾಧೀಶರು ನೀಡಿರುವ ತೀರ್ಪಿಗೆ ಎಲ್ಲಾ ಮಕ್ಕಳು ಬದ್ದರಾಗಿ ಇರುತ್ತಾರೆ. ವಿವಾದ ಯಾಕೆ ಹುಟ್ಟಿಕೊಂಡಿದೆ. ಏಕಾಏಕಿಯಾಗಿ ವಿದ್ಯಾರ್ಥಿಯರು ಇದು ನಮ್ಮ ಧಾರ್ಮಿಕ ಆಚರಣೆ ಅಂತ ಹೇಳಿದ್ದಾರೆ. ಯಾವೆಲ್ಲಾ ಟ್ವೀಟ್‌ ಗಳನ್ನು ಮಾಡಿದ್ದಾರೆ ಅನ್ನೋದು ತನಿಖೆಯಿಂದ ಹೊರಬರಲಿದೆ. ಕೇಂದ್ರ ಗೃಹ ಇಲಾಖೆ ಈ ಕುರಿತು ತನಿಖೆಯನ್ನು ನಡೆಸುತ್ತಿದೆ ಎಂದಿದ್ದಾರೆ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾಶ್ಮೀರವನ್ನು ದಾಟಿ ಪಾಕಿಸ್ತಾನಕ್ಕೆ ಭಾರತದಲ್ಲಿ ಒಂದೇ ಒಂದೇ ಬಾಂಬ್‌ ಸಿಡಿಸಲು ಸಾಧ್ಯವಿಲ್ಲ. ಈ ಹಿಂದೆಲ್ಲಾ ಬಾಂಬೆ, ಟಾಟ್‌ ಇನ್‌ಸ್ಟಿಟ್ಯೂಟ್‌ ನಲ್ಲಿ ಬಾಂಬ್ ಬ್ಲಾಸ್ಟ್‌ ಆಗಿರುವುದನ್ನು ನೋಡಿದ್ದೇವೆ. ಅಂತರಾಷ್ಟ್ರಿಯ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಭಿಕ್ಷುಕ ದೇಶ ಹೀಗೆ ಮಾಡುತ್ತಿದೆ. ಎಂತಹದ್ದೇ ಸಮಸ್ಯೆ ಬಂದರೂ ಕೂಡ ಭಾರತ ಎಲ್ಲವನ್ನೂ ಎದುರಿಸಲಿದೆ ಎಂದಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಬುರ್ಕಾ ಹಾಗೂ ಹಿಜಾಬ್‌ ನಿಷೇಧವಾಗಿದೆ. ಫ್ರಾನ್ಸ್‌, ಇಟಲಿ, ರಷ್ಯಾಗಳಲ್ಲಿ ಬುರ್ಕಾ ನಿಷೇಧವಾದಾಗಲೂ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಶಾಲೆಗಳಲ್ಲಿ ಬುರ್ಕಾ ಹಾಗೂ ಹಿಜಾಬ್‌ ಧರಿಸುವ ಕುರಿತು ಚರ್ಚೆಯೇ ಇಲ್ಲ. ಎಲ್ಲಾ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿಯೇ ಬರಬೇಕು ಎಂದು ಹೇಳಿದ್ದೇವೆ. ಈ ವಿಚಾರದಲ್ಲಿ ಎಲ್ಲರೂ ಕೂಡ ನ್ಯಾಯಾಲಯದ ಆದೇಶಕ್ಕೆ ಬದ್ದರಾಗಿರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಹಿಜಾಬ್ ವಿದ್ಯಾರ್ಥಿನಿಯರ ಹೋರಾಟದ ಹಿಂದಿನ ಶಕ್ತಿ ಯಾರು ? ಬಿ.ಸಿ.ನಾಗೇಶ್ ಕೊಟ್ರು ಎಕ್ಸಕ್ಲೂಸಿವ್ ಡಿಟೇಲ್ಸ್

ಇದನ್ನೂ ಓದಿ : CA Article ship: ಸಿಎ ಆರ್ಟಿಕಲ್‌ಶಿಪ್; ಭಾರತದ ಬಹು ಬೇಡಿಕೆಯ ಕೋರ್ಸ್ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ

( Karnataka college start from next week says education minister BC Nagesh )

Comments are closed.