ಸೋಮವಾರ, ಏಪ್ರಿಲ್ 28, 2025
HomeSportsCricketSandeep Lamichhane : ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ಕೇಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ...

Sandeep Lamichhane : ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ಕೇಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಐಪಿಎಲ್ ಆಟಗಾರ ಅರೆಸ್ಟ್

- Advertisement -

ಕಠ್ಮಂಡು: ನೇಪಾಳ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಐಪಿಎಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದ ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆ (Sandeep Lamichhane) ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ.

ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಲಾಮಿಚಾನೆ ಅವರನ್ನು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಠ್ಮಂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಲಾಮಿಚಾನೆ ವಿರುದ್ಧ ಸೆಪ್ಟೆಂಬರ್ 8ರಂದು ನೇಪಾಳದ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಯಾ ಮಾಡಿತ್ತು.
22 ವರ್ಷದ ಸಂದೀಪ್ ಲಾಮಿಚಾನೆ ಕಠ್ಮಂಡುವಿನ ಹೋಟೆಲ್ ರೂಮ್’ನಲ್ಲಿ 17 ವರ್ಷದ ಹುಡುಗಿ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆಗಸ್ಟ್ 21ರಂದು ಸಂದೀಪ್ ಲಾಮಿಚಾನೆ ಆ ಹುಡುಗಿಯನ್ನು ಕಠ್ಮಂಡು ಹಾಗೂ ಭಕ್ತಾಪುರದಲ್ಲಿರುವ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು, ಅದೇ ದಿನ ರಾತ್ರಿ ಕಠ್ಮಂಡು ಹೋಟೆಲ್’ನಲ್ಲಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.

ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ಫೇಸ್’ಬುಕ್’ನಲ್ಲಿ ಬರೆದುಕೊಂಡಿರುವ ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆ “ನನ್ನ ವಿರುದ್ಧದ ಷಡ್ಯಂತ್ರದ ಕಾರಣದಿಂದ ನಾನು ಕಠಿಣ ಸಮಯವನ್ನು ಎದುರಿಸುತ್ತಿದ್ದೇನೆ. ನನ್ನ ವಿರುದ್ಧ ಸುಳ್ಳುವ ಆರೋಪ ಮಾಡಲಾಗಿದೆ. ಇದರಿಂದ ಆದಷ್ಟು ಶೀಘ್ರವಾಗಿ ಹೊರ ಬಂದು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ” ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪರ 2018 ಹಾಗೂ 2019ರಲ್ಲಿ ಒಟ್ಟು 9 ಪಂದ್ಯಗಳನ್ನಾಡಿದ್ದ ಸಂದೀಪ್ ಲಾಮಿಚಾನೆ ಒಟ್ಟು 13 ವಿಕೆಟ್’ಗಳನ್ನು ಪಡೆದಿದ್ದರು. ಐಪಿಎಲ್ ಅಲ್ಲದೆ ಜಗತ್ತಿನ ವಿವಿಧ ಭಾಗಗಳಲ್ಲಿ ಟಿ20 ಲೀಗ್’ಗಳಲ್ಲಿ ಸಂದೀಪ್ ಆಡಿದ್ದರು. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್, ವೆಸ್ಟ್ ಇಂಡೀಸ್’ನ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಸಂದೀಪ್ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಇದನ್ನೂ ಓದಿ : Pro Kabaddi 2022 : ಇಂದಿನಿಂದ ಪ್ರೊ ಕಬಡ್ಡಿಆರಂಭ : ಯಾವ ಆಟಗಾರರು ಯಾವ ತಂಡದಲ್ಲಿದ್ದಾರೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇದನ್ನೂ ಓದಿ : Women’s Asia Cup 2022 : ಮಹಿಳಾ ಏಷ್ಯಾ ಕಪ್ ಟಿ20: ಪಾಕಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡ ಭಾರತದ ವನಿತೆಯರು

IPL cricketer Delhi Capitals Star Sandeep Lamichhane arrest in rape case

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular